Monday, October 12, 2026
Monday, October 12, 2026

ಚೆರ್ನೋಬಿಲ್ ರಷ್ಯ ವಶ ಹಾನಿ ಮಾಡಿದರೆ ಅಪಾಯ-ಗ್ರಾಸ್ಸಿ

Date:

ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಪಡೆಗಳು ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪರಮಾಣು ಶಕ್ತಿಯ ಅಪಾಯವನ್ನು ಯಾರೊಬ್ಬರು ಅರಿತಿಲ್ಲ, ಈಗ ರಷ್ಯಾ ಉಕ್ರೇನ್​​​​​​​ನ ಅಣುಸ್ಥಾವರವನ್ನು ವಶಕ್ಕೆ ಪಡೆಯುವ ಮೂಲಕ ಮಾನವೀಯತೆ ಮೇಲೆ ಪ್ರಹಾರ ಮಾಡುತ್ತಿದೆ ಇದು ದುರಂತ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಈ ಆಕ್ರಮಣದ ಬಗ್ಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಅಣು ವಿದ್ಯುತ್ ಸ್ಥಾವರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸ್ಥೆಯ ಡೈರೆಕ್ಟರ್ ಜನರಲ್ ರಾಫೆಲ್ ಮರಿಯಾನೊ ಗ್ರಾಸ್ಸಿ, ವಿಕಿರಣದ ಮಟ್ಟವು ಸಾಮಾನ್ಯವಾಗಿದ್ದರೂ, ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪರಮಾಣು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ನಾವು ಮಹಾ ವಿಪತ್ತಿಗೆ ತುಂಬಾ ಹತ್ತಿರವಾಗಿದ್ದೇವೆಯೇ ಎಂಬ ಬಗ್ಗೆ ನಮಗೆನೂ ತಿಳಿದಿಲ್ಲ, ಆದರೆ ಪರಿಸ್ಥಿತಿಯು ಸಂಪೂರ್ಣವಾಗಿ ಅಸಹಜವಾಗಿದೆ ಮತ್ತು ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಏಪ್ರಿಲ್ 26, 1986 ರಂದು, ಚೆರ್ನೋಬಿಲ್‌ನಲ್ಲಿ ನಡೆದಿದ್ದ ಸ್ಫೋಟದಿಂದಾಗಿ ವಿಕಿರಣಗಳು ವಾತಾವರಣಕ್ಕೆ ಸೇರಿದ್ದವು. ಇದು ಸೋವಿಯತ್ ಒಕ್ಕೂಟದ ಮಹಾ ವೈಫಲ್ಯ ಎನಿಸಿಕೊಂಡಿತ್ತು. ಲಕ್ಷಾಂತರ ಮಂದಿಯ ಬದುಕನ್ನು ಈ ದುರಂತ ಕಸಿದುಕೊಂಡಿತ್ತು ಎಂದು ತಿಳಿದುಬಂದಿದೆ.

ಸದ್ಯ ರಷ್ಯಾ ಉಕ್ರೇನಿನ ಜಪೋರಿಝಿಯಾ ವಿದ್ಯುತ್ ಸ್ಥಾವರವನ್ನು ವಶಪಡಿಕೊಂಡಿದ್ದು, ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ರಷ್ಯಾವು ಅಣುಸ್ಥಾವರಗಳ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವುದು ಅಪಾಯಕಾರಿ ಎಂದು ಹೇಳಲಾಗಿದೆ. ಯುದ್ಧದಿಂದಾಗಿ ಅಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಯುವುದರಿಂದ ಹೆಚ್ಚಿನ ಅಪಾಯ ಉಂಟಾಗಲಿದೆ ಎಂದು ಪರಮಾಣು ಮುಖ್ಯಸ್ಥ ಗ್ರಾಸ್ಸಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...