Wednesday, December 10, 2025
Wednesday, December 10, 2025

ಹೆಣ್ಣುಮಕ್ಕಳಿಗೆ ಶಿಕ್ಷಣ ಆಗ್ರಹಿಸಿ ಬ್ರಿಟನ್ ಭಾರತ ಜಂಟಿ ಹೇಳಿಕೆ

Date:

ಅಫ್ಘಾನಿಸ್ತಾನದಲ್ಲಿನ ಈಗಿನ ಪರಿಸ್ಥಿತಿ ಹಾಗೂ ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಬ್ರಿಟನ್ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.

ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.

ಈ ಕುರಿತು ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ತಾಲಿಬಾನ್ ಸರ್ಕಾರ ಅಲ್ಲಿನ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅಫ್ಘಾನಿಸ್ತಾನದ ಜನರಿಗೆ ವೈದ್ಯಕೀಯ ಮತ್ತು ಆಹಾರ ಧಾನ್ಯಗಳ ನೆರವು ನೀಡುವಲ್ಲಿ ಭಾರತ ವಹಿಸಿದ ಪಾತ್ರವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶ್ಲಾಘಿಸಿದ್ದಾರೆ.

ಇದರ ಜೊತೆಗೆ ಆಫ್ಘನ್ ಪ್ರದೇಶವನ್ನು ಭಯೋತ್ಪಾದಕ ಕೃತ್ಯಗಳಿಗೆ ಆಶ್ರಯತಾಣವಾಗಿ ಬಳಸಲು ಮತ್ತು ಉಗ್ರ ಕೃತ್ಯಗಳಿಗೆ ಹಣಕಾಸು ಒದಗಿಸಲು ಬಳಸದಂತೆ ಎರಡು ರಾಷ್ಟ್ರಗಳು ಒತ್ತಾಯಿಸಿವೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಉಭಯ ರಾಷ್ಟ್ರಗಳು ಅಫ್ಘಾನಿಸ್ತಾನದ ಜನರಿಗೆ ತಕ್ಷಣದ ಮಾನವೀಯ ನೆರವು ನೀಡುವುದನ್ನು ಮುಂದುವರಿಸಲು ಒಪ್ಪಿಕೊಂಡಿದೆ. ಶಾಂತಿಯುತ, ಸುರಕ್ಷಿತ ಅಫ್ಘಾನಿಸ್ತಾನವನ್ನು ಬೆಂಬಲಿಸಲು ಮತ್ತು ಮುಕ್ತ ಹಾಗೂ ಸುರಕ್ಷಿತ ಇಂಡೋ ಪೆಸಿಫಿಕ್‌ಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

ಭಾರತ,ಯುಕೆ ರಕ್ಷಣಾ ಮತ್ತು ಅಂತರಾಷ್ಟ್ರೀಯ ಭದ್ರತಾ ಪಾಲುದಾರಿಕೆ ಚೌಕಟ್ಟಿನ ಅಡಿಯಲ್ಲಿ ಬರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದು, ಹಾಗೂ ವಿಶ್ವಾಸಾರ್ಹ ಪಾಲುದಾರರಾಗಿ ಸಹಕಾರವನ್ನು ತೀವ್ರಗೊಳಿಸುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. Colleges ಸಾಗರದ ಎಲ್ .ಬಿ‌.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.

L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ,...

Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್

Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ...

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್...

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್...