ಕಾಶ್ಮೀರದಿಂದ ವಲಸೆ ಹೋದವರಿಗೆ ಅವರ ಅಸ್ತಿಗಳನ್ನು ಹಿಂದಿರುಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 610 ಮಂದಿಗೆ ಆಸ್ತಿಯನ್ನು ವಾಪಸ್ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ತಿಳಿಸಿದರು.
ಸರ್ಕಾರ ವಲಸಿಗ ಕಾಶ್ಮೀರಿಗಳಿಗೆ ಆಸ್ತಿಯನ್ನು ಹಿಂದಿರುಗಿಸಲು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳೂ ನಡೆಯುತ್ತಿವೆ’ ಎಂದರು.
ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಅವರು, ವಲಸಿಗರ ಆಸ್ತಿಗಳ ಪಾಲಕರಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ವಲಸಿಗರ ದೂರುಗಳನ್ನು ಪರಿಹರಿಸಲು ಸರ್ಕಾರ ಪೋರ್ಟಲ್ ಅನ್ನೂ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದರು.
ವಲಸಿಗರ ದೂರು ನೈಜವಾಗಿದ್ದರೆ, ಅವರ ಆಸ್ತಿ ಹಿಂತಿರುಗಿಸಲಾಗುತ್ತದೆ. ಇಲ್ಲಿಯವರೆಗೆ, 610 ಅರ್ಜಿದಾರರ ಆಸ್ತಿಯನ್ನು ಹಿಂದಿರುಗಿಸಲಾಗಿದೆ ಎಂದರು.