Sunday, May 17, 2026
Sunday, May 17, 2026

ಬುಚಾ ನಗರದ ಮೇಲೆ ರಷ್ಯದ ದಾಳಿ, ಸರಣಿ ಸಾವುಗಳನ್ನ ಭಾರತ ಖಂಡಿಸುತ್ತದೆ

Date:

ಜಾಗತಿಕವಾಗಿ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ರೀತಿಯ ಸಂಕೀರ್ಣ ಪರಿಸ್ಥಿತಿ ಎದುರಾದಾಗ ಪ್ರತಿ ದೇಶಗಳೂ ತಮ್ಮದೇ ಆದ ಒಂದು ನೀತಿಯನ್ನು ಅಳವಡಿಸಿಕೊಳ್ಳುತ್ತವೆ. ಅದು ಆಯಾ ದೇಶದ ಜನರ ಸುರಕ್ಷತೆಗೆ ಪೂರಕವಾಗಿರುವಂಥದ್ದಾಗಿರುತ್ತದೆ ಎಂದು ಜೈಶಂಕರ್ ಅವರು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರಿ 39ದಿನಗಳೇ ಕಳೆದು ಹೋಗಿವೆ. ಅಲ್ಲಿನ ಪರಿಸ್ಥಿತಿ ಭೀಕರ. ರಷ್ಯಾ ಸೈನಿಕರಿಗೆ ಉಕ್ರೇನ್​ ಸೇನೆ, ನಾಗರಿಕರು, ಬೇರೆ ದೇಶಗಳ ಕೆಲವು ಸ್ವಯಂಸೇವಕರು ತೀವ್ರ ಪ್ರತಿರೋಧವನ್ನೂ ಒಡ್ಡುತ್ತಿದ್ದಾರೆ.

ಹೀಗಿದ್ದೂ, ಉಕ್ರೇನ್​ನಲ್ಲಿ ಆಗುತ್ತಿರುವ ಹಾನಿ, ನಷ್ಟ ಅಪಾರ. ಅದರಲ್ಲೂ ಕೀವ್​​ನಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಬುಚಾ ನಗರವಂತೂ ಯುದ್ಧ ಭೀಕರತೆಗೆ ಸಾಕ್ಷಿಯಾಗಿ ನಿಂತಿದೆ.

ಬಾಂಬ್​, ಶೆಲ್ಲಿಂಗ್​ ದಾಳಿಗೆ ಸುಟ್ಟು ಕರಕಲಾಗಿ ನಿಂತ ವಾಹನಗಳು ಇಲ್ಲಿ ರಸ್ತೆಯುದ್ದಕ್ಕೂ ಕಾಣುತ್ತವೆ. ರಸ್ತೆಯ ಮೇಲೆಲ್ಲ ಹೆಣಗಳು ಬಿದ್ದಿವೆ. ನೀರಿಲ್ಲ, ಗ್ಯಾಸ್​ ಸಂಪರ್ಕವಿಲ್ಲ. ಜನರು ಕಷ್ಟಕ್ಕೆ ಸ್ಪಂದಿಸುವವರಿಲ್ಲದಂತಾಗಿದೆ.

ಇದುವರೆಗೂ ಬುಚಾದಲ್ಲಿ 400ಕ್ಕೂ ಅಧಿಕ ನಾಗರಿಕರ ಹತ್ಯೆಯಾಗಿದ್ದಾಗಿ ವರದಿಯಾಗಿದೆ.

ಬುಚಾ ನಗರದಲ್ಲಿ ನಡೆಯುತ್ತಿರುವ ದಾಳಿ, ಸರಣಿ ಸಾವನ್ನು ಭಾರತದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್ ಖಂಡಿಸಿದ್ದಾರೆ.

ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಉಕ್ರೇನ್​ನ ಬುಚಾ ನಗರದಲ್ಲಿ ನಡೆಯುತ್ತಿರುವ ಹತ್ಯೆಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತದೆ. ಯುದ್ಧದ ಹೆಸರಲ್ಲಿ ನಡೆಯುತ್ತಿರುವ ಈ ಕೊಲೆಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್​ ನಡುವಿನ ಮಾತುಕತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ತಕ್ಷಣವೇ ಯುದ್ಧ ನಿಲ್ಲಬೇಕು. ಈ ವಿಚಾರದಲ್ಲಿ ಭಾರತ ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ. ಇದನ್ನು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಲಾರ್ವೋವ್​ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೂಡ ಹೇಳಲಾಗಿದೆ ಎಂದು ಜೈಶಂಕರ್​ ತಿಳಿಸಿದರು.

ಬುಚಾದಲ್ಲಿ ನಡೆದ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿಯವರೂ ಖಂಡಿಸಿದ್ದಾರೆ. ಯುಎನ್​​ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್​ನ ಬುಚಾದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆನ್ನು ನಾವು ಖಂಡಿಸುತ್ತೇವೆ. ಇದನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...