Tuesday, March 31, 2026
Tuesday, March 31, 2026

ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯ ಚಾಂಪಿಯನ್ಸ್

Date:

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

71 ರನ್​ಗಳ ಅಮೋಘ ಗೆಲುವು ಸಾಧಿಸಿ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ನ್ಯೂಜಿಲೆಂಡ್​ನಲ್ಲಿ ನಡೆದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕ್ರಿಸ್ಟ್​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ 71 ರನ್​ಗಳ ಅಮೋಘ ಗೆಲುವು ಸಾಧಿಸಿದೆ.

ಈ ಮೂಲಕ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್​ಗೆ ಬರೋಬ್ಬರಿ 356 ರನ್ ಸಿಡಿಸಿತು. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ( ಅವರ ದಾಖಲೆ 170 ರನ್ ಮತ್ತು, ರಚೆಲ್‌ ಹೇನ್ಸ್ ಮತ್ತು ಬೆತ್ ಮೂನೆ ಅವರ ಅರ್ಧಶತಕದ ನೆರವಿನಿಂದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಕಠಿಣ ಟಾರ್ಗೆಟ್ ನೀಡಿತ್ತು.

ಆದರೆ, ಆಂಗ್ಲರು 285 ರನ್​ಗೆ ಆಲೌಟ್ ಆಗುವ ಮೂಲಕ ರನ್ನರ್ ಅಪ್​ಗೆ ತೃಪ್ತಿ ಪಟ್ಟಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಮಹಿಳಾ ತಂಡ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್​​ಗಳಾದ ಅಲಿಸಾ ಹೀಲಿ ಹಾಗೂ ರಚೆಲ್‌ ಹೇನ್ಸ್ ಭರ್ಜರಿ ರನ್ ಕಲೆಹಾಕಿದರು. ಇಂಗ್ಲೆಂಡ್ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 160 ರನ್​ಗಳ ಜೊತೆಯಾಟ ಆಡಿದರು.

ರಚೆಲ್‌ ಹೇನ್ಸ್ 93 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ನಂತರ ಹೀಲಿ ಜೊತೆಯಾದ ಬೆತ್ ಮೂನೆ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಅಲಿಸಾ ಸ್ಫೋಟಕ ಆಟವಾಡಿದರು.

ಎದುರಾಳಿ ಬೌಲರ್​ಗಳ ಬೆಂಡೆತ್ತಿದ್ದ ಅಲಿಸಾ ಮೈದಾನದ ಮೂಲೆ ಮೂಲೆಗೆ ಬೌಂಡರಿ ಮೂಲಕ ಚೆಂಡನ್ನು ಅಟ್ಟಿ ಬೆವರಿಳಿಸಿದರು.

ವಿಶ್ವಕಪ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲಿಸಾ ಕೇವಲ 138 ಎಸೆತಗಳಲ್ಲಿ 26 ಬೌಂಡರಿಯೊಂದಿಗೆ 170 ರನ್ ಚಚ್ಚಿದರು. ಕೊನೇ ಹಂತದಲ್ಲಿ ಮೂನೇ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಕೇವಲ 47 ಎಸೆತಗಳಲ್ಲಿ 62 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ ಮಹಿಳಾ ತಂಡ ಅಂತಿಮವಾಗಿ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಇಂಗ್ಲೆಂಡ್ ಪರ ಆಯನಿ ಶ್ರುಬ್​ಸೊಲೆ 3 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 100 ರನ್​ಗೂ ಮೊದಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಓಪನರ್​ಗಳಾದ ಟಾಮಿ ಬ್ಯೂಮೊಂಟ್ (27) ಹಾಗೂ ಡೆನಿಯಲ್ ವ್ಯಾಟ್ 4 ರನ್​ಗೆ ನಿರ್ಗಮಿಸಿದರು. ನಾಯಕಿ ಹೆದರ್ ನೈಟ್ ಕೂಡ 26 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡ ಸೋಲಿನ ಸುಳಿಗೆ ಸಿಲುಕಿತು. ನಂತರ ಬಂದ ಬ್ಯಾಟರ್​ಗಳ ಪೈಕಿ ನಥಾಲಿ ಕೀವರ್ ಬಿಟ್ಟು ಉಳಿದವರು ಯಾರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಆಯಮಿ ಜೋನ್ಸ್ 20 ಮತ್ತು ಸೋಫಿಯ ಡಂಕ್ಲೆ 23 ರನ್​ಗೆ ಸುಸ್ತಾದರು. ಆದರೆ, ನಥಾಲಿ ಕೀವರ್ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು.

ಆಸ್ಟ್ರೇಲಿಯಾ ಪರ ಅಲನ್ ಕಿಂಗ್ ಹಾಗೂ ಜೆಸ್ ಜಾನ್ಸೆನ್ ತಲಾ 3 ವಿಕೆಟ್ ಕಿತ್ತರೆ ಮೆಗನ್ ಸ್ಕಟ್ 2 ವಿಕೆಟ್ ಪಡೆದರು.

71 ರನ್​ಗಳ ಗೆಲುವಿವೊಂದಿಗೆ ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಏಳನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗುವ ತಂಡ ಕಳೆದ ಬಾರಿಗಿಂತ ದುಪ್ಪಟ್ಟು ಎಂದರೆ 1.32 ಮಿಲಿಯನ್‌ ಅಮೆರಿಕನ್‌ ಡಾಲರ್‌(ಸುಮಾರು 9.94 ಕೋಟಿ ರು.) ಬಹುಮಾನ ಪಡೆದುಕೊಂಡಿದೆ.

ರನ್ನರ್‌ ಅಪ್‌ ಆದ ಇಂಗ್ಲೆಂಡ್ ತಂಡ 4.51 ಕೋಟಿ ರು. ಬಹುಮಾನ ಸ್ವೀಕರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Keladi Shivappa Nayaka Agriculture University ಏಪ್ರಿಲ್ 8 ರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲಿ ವಿವಿಧ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ.

Keladi Shivappa Nayaka Agriculture University ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಏಪ್ರಿಲ್...

Shivamogga Police ಏಪ್ರಿಲ್ 6. ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನಗಳ ಬಹಿರಂಗ ಹರಾಜು.

Shivamogga Police ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 08...

Breaking News ಸಿಡಿಲು ಬಡಿದು ಶಿವಮೊಗ್ಗ ಸನಿಹದ ರಾಮನಗರದಲ್ಲಿ ಚಿಕನ್ ಅಂಗಡಿ ಮಾಲೀಕರ ಸಾವು.

Breaking News ಸಿಡಿಲು ಬಡಿದು ಚಿಕನ್ ಅಂಗಡಿಯ ಮಾಲೀಕ ಸಾವನಪ್ಪಿದ್ದಾನೆ. ಸೋಮವಾರ...

Madhu Bangarappa ಸೊರಬದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಗಳನ್ನವಿತರಿಸಿದ ಸಚಿವ ಮಧು ಬಂಗಾರಪ್ಪ.

Madhu Bangarappa  ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ಜನತೆಯ ಸುರಕ್ಷತೆ ಹಾಗೂ...