Wednesday, November 27, 2024
Wednesday, November 27, 2024

ಯುದ್ಧವೊಂದೇ ಪರಿಹಾರವಲ್ಲ

Date:

ರಷ್ಯಾ ಉಕ್ರೇನ್ ಮೇಲೆ ಯಾಕೆ ದಾಳಿ ಮಾಡಲಾಗುತ್ತಿದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.

ಇದು ಇವತ್ತು ನಿನ್ನೆಯ ವಿಷಯವಲ್ಲ. ಉಕ್ರೇನ್ 1991ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ಅದಾದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಶುರುವಾಯಿತು.

ರಷ್ಯಾ ದಾಳಿ ಮಾಡಿದ ಉದ್ದೇಶವಾದ್ರು ಏನು?

ಸಾಮಾನ್ಯವಾಗಿ ಎರಡು ದೇಶಗಳ ನಡುವೆ ಯುದ್ಧ ಆಗುತ್ತೆ ಅಂದ್ರೆ , ಅದು ಉಳಿದ ಎಲ್ಲಾ ದೇಶಗಳ ಮೇಲೂ ಪರಿಣಾಮ ಬೀರುತ್ತೆ.
ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. 2014ರಲ್ಲಿ ರಷ್ಯಾ ಬೆಂಬಲಿತ ಅಧ್ಯಕ್ಷನ ಪದಚ್ಯುತಿಯಾಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧಕ್ಕೆ ಪ್ರಮುಖ ಕಾರಣ.

ಪ್ರಸ್ತುತ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷ ರಾಗಿದ್ದಾರೆ. ಇವರು ಮಾರ್ಚ್ 19 , 2018 ರಂದು ರಷ್ಯಾ ಅಧ್ಯಕ್ಷರಾಗಿ 4ನೇ ಬಾರಿ ಆಯ್ಕೆಯಾದರು. ಹಾಗೆಯೇ ಟಿವಿ ಸೀರಿಸ್ ನಲ್ಲಿ ಪ್ರೆಸಿಡೆಂಟ್ ಪಾತ್ರ ಮಾಡಿ ಜನಮನ ಗೆದ್ದಿದ್ದ ವೊಲೊಡಿಮಿರ್ ಝೆಲೆನ್ ಸ್ಕಿ ಉಕ್ರೇನ್ ನ ಅಧ್ಯಕ್ಷರಾಗಿದ್ದು ರೋಚಕ ಸಂಗತಿ.

ರಷ್ಯಾ ಉಕ್ರೇನ್ ಬಿಕ್ಕಟ್ಟಿನ ಕೇಂದ್ರಬಿಂದು ನ್ಯಾಟೋ…
ಒಂದರ್ಥದಲ್ಲಿ ರಷ್ಯಾ ಉಕ್ರೇನ್ ಯುದ್ಧಕ್ಕೆ ನ್ಯಾಟೋ ವಿವಾದವು ಪರೋಕ್ಷ ಕಾರಣವಾಗಿದೆ.

ಏನಿದು ನ್ಯಾಟೋ ಅಂದ್ರೆ.. ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಸೇಷನ್. ಇದು 1949ರಲ್ಲಿ ಎರಡನೇ ವಿಶ್ವಯುದ್ಧದ ಬಳಿಕ ರಚನೆಗೊಂಡ 12 ದೇಶಗಳ ಮೈತ್ರಿಕೂಟ. ಪ್ರಸ್ತುತ ಈ ಮೈತ್ರಿಕೂಟದಲ್ಲಿ ಸದಸ್ಯ ದೇಶಗಳ ಸಂಖ್ಯೆ 30 ಇದೆ. ಇದರಲ್ಲಿ 27 ಐರೋಪ್ಯ ದೇಶಗಳು, ಎರಡು ಉತ್ತರ ಅಮೆರಿಕ ದೇಶಗಳು ಹಾಗೂ 1 ಯುರೇಷಿಯಾ ದೇಶ ಸೇರಿಕೊಂಡಿದೆ. ಹಿಂದೆ ರಷ್ಯಾದ ಭಾಗವಾಗಿದ್ದ ಹಳೆ ಸೋವಿಯತ್ ಒಕ್ಕೂಟದ ದೇಶಗಳು ಇದರ ಭಾಗವಾಗಿವೆ. ವ್ಲಾಡಿಮಿರ್ ಪುಟಿನ್ ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ನ್ಯಾಟೊ ಸದಸ್ಯ ದೇಶಗಳ ಸಂಖ್ಯೆ ದುಪ್ಪಟ್ಟಾಗಿರುವುದು ಗಮನಾರ್ಹ.

ನ್ಯಾಟೋ ಉದ್ದೇಶವೇನು?
ಸದಸ್ಯ ರಾಷ್ಟ್ರದ ಪೈಕಿ ಯಾವುದೇ ಒಂದು ದೇಶದ ಹಿತಾಸಕ್ತಿಗೆ ಮಿಲಿಟರಿ ದಾಳಿ, ಅತಿಕ್ರಮಣ ಮುಂತಾದ ಯಾವುದೇ ರೀತಿಯಲ್ಲಿ ತೊಂದರೆಯಾದರೂ ಇಡೀ ಮೈತ್ರಿಕೂಟವು ಒಂದುಗೂಡಿ ಸಮರ ಸಾರುತ್ತದೆ.
ಈಗಿನ ಸಂದರ್ಭದಲ್ಲಿ ಉಕ್ರೇನ್ ನ್ಯಾಟೊ ಸದಸ್ಯ ದೇಶವಲ್ಲ. ನ್ಯಾಟೊ ಸದಸ್ಯ ರಾಷ್ಟ್ರಗಳ ಮಿತ್ರ ಮಾತ್ರ. ಆದರೆ 2008ರಲ್ಲಿ ನ್ಯಾಟೊ ಮೈತ್ರಿಕೂಟ ಸೇರ್ಪಡೆಗೆ ಉಕ್ರೇನ್ ಅರ್ಜಿ ಸಲ್ಲಿಸಿದ್ದರೂ ಅರ್ಹತೆ ವಿಚಾರವಾಗಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೂ ಉಕ್ರೇನ್ ಬೆಂಬಲಕ್ಕೆ ನ್ಯಾಟೋ ಮುಂದಾಗಿದೆ.

ಉಕ್ರೇನ್ NATO, EU ಕಡೆ ವಾಲಿದ್ದು, ಕೂಡ ರಷ್ಯಾ ದೇಶದ ಅಕ್ರೋಶಕ್ಕೆ ಕಾರಣವಾಗತ್ತೆ.
ಈ ಎರಡೂ ಪ್ರದೇಶ ಉಕ್ರೇನ್ ಗೆ ಸೇರಿದ್ದು ಎಂದು ಉಲ್ಲೇಖಿಸಲಾಗಿದೆ.

ಇದು 1949ರಲ್ಲಿ ನಡೆದಂತಹ ಘಟನೆ. ಉಕ್ರೇನ್ ಮತ್ತು ರಷ್ಯಾ ನಡುವೆ ಕ್ರಿಮಿಯಾ ಎನ್ನುವಂತಹ ಚಿಕ್ಕ ಪ್ರದೇಶವಿದೆ.

ಏನಿದು ಕ್ರಿಮಿಯಾ? ಏನಿದರ ಕಥೆ ಎನ್ನುವುದಾದರೆ?

ಕ್ರಿಮಿಯಾ ಎಂಬುದು 27,000 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಉಕ್ರೇನ್ ಹಾಗೂ ರಷ್ಯಾದ ನಡುವಿರುವ ಒಂದು ಭೂಭಾಗ . ಇಲ್ಲಿ 65% ರಷ್ಯನ್ನರು ಮತ್ತು 35% ಉಕ್ರೇನಿಯನ್ನರು ಇದ್ದಾರೆ. ಜಾಗತಿಕ ಸಮುದಾಯವು ಇದನ್ನು ಉಕ್ರೇನ್ ದೇಶದ ಒಂದು ಭಾಗವಾಗಿಯೇ ಪರಿಗಣಿಸಿದೆ.

ಆದರೆ, 2014ರಲ್ಲಿ ರಷ್ಯಾ ಪರ ಅಧ್ಯಕ್ಷರನ್ನು ಉಕ್ರೇನಿಯನ್ನರು ಕೆಳಗಿಳಿಸಿದ ಕೂಡಲೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೈನ್ಯವನ್ನು ಕಳುಹಿಸಿ, ಉಕ್ರೇನ್ ನ ವಶದಲ್ಲಿದ್ದ ಕ್ರಿಮಿಯಾವನ್ನು ಬಲವಂತವಾಗಿ ಸ್ವತಂತ್ರಗೊಳಿಸಿದರು.

ನಂತರ ಕ್ರಿಮಿಯಾದಲ್ಲಿ ಹಲವು ಬಂಡುಕೋರ ಸಂಘಟನೆಗಳು ಈ ಸಂದರ್ಭದಲ್ಲಿ ಹುಟ್ಟಿಕೊಂಡವು. ಅವುಗಳ ಬೆನ್ನಿಗೆ ರಷ್ಯಾ ನಿಂತಿತ್ತು. ಅದು ಶಸ್ತ್ರಾಸ್ತ್ರ, ಮದ್ದು, ಗುಂಡು ಒದಗಿಸಿತು. ಈ ಬಂಡುಕೋರರು ಉಕ್ರೇನ್ ಗೆ ನುಗ್ಗಿ ಹಾವಳಿ ಎಬ್ಬಿಸ ತೊಡಗಿದರು.

ಇದುವರೆಗೂ ಉಕ್ರೇನ್ ಹಾಗೂ ಕ್ರಿಮಿಯಾ ನಡುವಿನ ಸಂಘರ್ಷ, ಗಲಭೆ, ಗಲಾಟೆಗಳಲ್ಲಿ ಸುಮಾರು 14 ಸಾವಿರಕ್ಕೂ ಅಧಿಕ ಮಂದಿ ಸತ್ತಿದ್ದಾರೆ.

1949ರಲ್ಲಿ ಜೋಸೆಫ್ ಟ್ರಾಲನ ಅವರು ಕ್ರಿಮಿಯಾ ಪ್ರದೇಶದಲ್ಲಿ ಇರುವಂತಹ ಡಾಕ್ಟರ್ ಗಳನ್ನು ಓಡಿಸಿ ರಷ್ಯಿಯನ್ ಮೂಲದವರನ್ನು ನೇಮಕ ಮಾಡುತ್ತಾರೆ.
ಇದು ಉಕ್ರೇನ್ ಮತ್ತೆ ರಷ್ಯಾ ನಡುವೆ ಬಿರುಕು ಮೂಡಲು ಕಾರಣವಾಗತ್ತೆ.

ಹಲವಾರು ದೇಶಗಳು ದಾಳಿ ಮಾಡುವುದು ಬೇಡ ಅಂತ ಮನವಿ ಮಾಡಿಕೊಂಡರೂ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದರು.

ಉಕ್ರೇನ್ ನಲ್ಲಿ ಸೇನಾ ಬಲವನ್ನು ನಾಶ ಮಾಡುವುದಕ್ಕಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೊಲೆನ್ ಸ್ಕಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಉಕ್ರೇನ್ ನ ಸೇನಾ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಎರಡೂ ದೇಶಗಳ ನಡುವಿನ ಯುದ್ಧದಿಂದಾಗಿ ಹಲವಾರು ಅಮಾಯಕರು ಬಲಿಯಾಗಿದ್ದಾರೆ.
ಇದುವರೆಗೆ ಉಕ್ರೇನ್ ನ 74 ಸೇನಾ ನೆಲೆಗಳನ್ನು ನಾಶಮಾಡಲಾಗಿದೆ. ಅದರಲ್ಲಿ 11 ವಾಯುನೆಲೆಗಳು ಸೇರಿವೆ ಅಂತ ರಷ್ಯಾ ಹೇಳಿಕೊಂಡಿದೆ.

ಯಾವ ದೇಶವು ಕೂಡ ಮಧ್ಯ ಪ್ರವೇಶಿಸಬಾರದು ಎಂದು ಪುಟಿನ್ ಅವರು ಎಚ್ಚರಿಕೆ ನೀಡಿದ್ದಾರೆ.
ಆದರೆ, ರಷ್ಯಾದ ದಾಳಿಯನ್ನು ತಡೆಯಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಎರಡು ದೇಶಗಳ ನಡುವಿನ ಯುದ್ಧ ಭಾರತದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರಲಿದೆ.
ಉಕ್ರೇನ್ ಹಾಗೂ ರಷ್ಯಾದಿಂದ ಪೂರೈಕೆಯಾಗುವ ಸೂರ್ಯಕಾಂತಿ ಎಣ್ಣೆ ಹಾಗೂ ಗೋಧಿ ಸೇರಿದಂತೆ ಹಲವು ಧವಸಧಾನ್ಯಗಳ ಮೇಲೆ ಭಾರತ ಅವಲಂಬಿತವಾಗಿದೆ. ದ್ರವೀಕೃತ ನೈಸರ್ಗಿಕ ಅನಿಲವನ್ನು ಈ ಎರಡು ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಜಗತ್ತಿನ ಅತಿದೊಡ್ಡ ಗೋಧಿ ರಫ್ತು ದೇಶ ರಷ್ಯಾ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಔಷಧ ಉದ್ಯಮದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಭಾರತದ ಔಷಧ ಕಂಪನಿಗಳು ಉಕ್ರೇನ್ ಮತ್ತು ರಷ್ಯಾಗೆ ಹೆಚ್ಚಿನ ಪ್ರಮಾಣದ ಔಷಧವನ್ನು ರಪ್ತು ಮಾಡುತ್ತವೆ.

ತೈಲ ರಫ್ತು ದೇಶಗಳ ಒಕ್ಕೂಟ ಹೊರತುಪಡಿಸಿ, ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಎರಡನೇ ದೊಡ್ಡ ದೇಶ ರಷ್ಯಾ. ರಷ್ಯಾ ಈಗ ಯುದ್ಧ ಘೋಷಿಸಿದ ಬೆನ್ನಲ್ಲೇ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾತೈಲದ ಬೆಲೆ 100 ಡಾಲರ್ ಗಡಿದಾಟಿದೆ.

ಹೀಗಾಗಿ ಇದರ ನೇರ ಪರಿಣಾಮ ಭಾರತದ ಇಂದಿನ ಬಳಕೆದಾರರ ಮೇಲೆ ಆಗಲಿದೆ.
ಇದರೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧವು ಭಾರತದ ಭದ್ರತಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಅಪಾಯಗಳಿವೆ. ಭಾರತವು ಈಗ ಉಕ್ರೇನ್ ಮತ್ತು ರಷ್ಯಾದಿಂದ ಹೊಸ ಸೇನಾ ಸಲಕರಣೆಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಆದರೆ ಭಾರತೀಯ ಸೇನೆಯ ಮೂರು ಪಡೆಗಳಲ್ಲಿ ಈಗ ಬಳಕೆಯಲ್ಲಿರುವ ಹೆಲಿಕಾಪ್ಟರ್ಗಳು, ವಿಮಾನಗಳು, ಯುದ್ಧ ವಿಮಾನಗಳು, ಹಡಗುಗಳು, ಫಿರಂಗಿಗಳು, ರೈಫಲ್ ,ಸೇನೆ ವಾಹನಗಳ ಬಿಡಿ ಭಾಗಗಳು ಹಾಗೂ ಹಲವು ಮದ್ದುಗುಂಡು ಗಳಿಂದಾಗಿ ರಷ್ಯಾ ಮತ್ತು ಉಕ್ರೇನ್ ನನ್ನು ಅವಲಂಬಿಸಿದೆ.

ಇದರೊಂದಿಗೆ ವಾಹನ, ಮೊಬೈಲ್ ಉದ್ಯಮಕ್ಕೂ ಪೆಟ್ಟು ಬೀಳುವ ಸಾಧ್ಯತೆ ಇದೆ.

ಸ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಹಾಗೂ ಪ್ರಪಂಚ ನಾಶದ ಪರಿಕಲ್ಪನೆಗಳೊಂದಿಗೆ ಕುವೆಂಪು ಯುದ್ಧದಿಂದ ಆಗುವ ಪರಿಣಾಮಗಳು ಹಾಗೂ ವಿನಾಶದ ಬಗ್ಗೆ ವಿವರಿಸುತ್ತಾರೆ.

ಯುದ್ಧ ಸಂಸ್ಕೃತಿ ಎಂಬುದು ವಿನಾಶವೇ ಸರಿ. ಹೌದು, ಯುದ್ಧದಿಂದ ನಾವು
ಗಳಿಸಿಕೊಳ್ಳುವ ಅಂಶವಾದರೂ ಏನು ?
ಸಾವು, ನೋವು, ದುಃಖ, ಪರಸ್ಪರ ವಿಮುಖ ಚಲನ ಗಳಷ್ಟೇ….

ಒಟ್ಟಾರೆಯಾಗಿ ಕೊಲ್ಲುವ ಒಂದು ಸಂಸ್ಕೃತಿಯೇ ನಮ್ಮ ಮುಂದೆ ತೆರೆದು ನಿಲ್ಲುತ್ತದೆ…

ಯುದ್ದವೊಂದೇ ಪರಿಹಾರವಲ್ಲ. ಸೃಷ್ಟಿಯಲ್ಲಿ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯನಿಗೆ ವಿವೇಚನಾ ಶಕ್ತಿ ಇದೆ.
ಅದರ ಪೂರ್ಣ ಉಪಯೋಗ ಮಾಡಿಕೊಳ್ಳಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ- ಮಧು ಬಂಗಾರಪ್ಪ

Constitution Day ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ...

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...