ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಆಸ್ತಿ’ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಾರ್ಡ್ ಗಳಲ್ಲಿ ‘ಇ-ಆಸ್ತಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ.
ಆಸ್ತಿ ಮಾಲೀಕರು ಪ್ರಜಾ ಸೇವಾ ಕೇಂದ್ರ (ಕರ್ನಾಟಕ ಒನ್/ಶಿವಮೊಗ್ಗ ಒನ್), ಪಾಲಿಕೆಯ 3 ವಲಯ ಕಚೇರಿಗಳು, ‘Citizen Portal’ (https://eaasthi.karnataka.gov.in/) ಹಾಗೂ ವಾರ್ಡ್ವಾರು ‘ಇ-ಖಾತಾ ಮೇಳ’ಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನವೆಂಬರ್ ಮತ್ತು ಡಿಸೆಂಬರ್ ಮಾಹೆಗಳ ಅವಧಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ವಾರ್ಡ್ಗಳಲ್ಲಿ ಇ-ಖಾತಾ ಮೇಳಗಳು ನಡೆಯಲಿವೆ. ಅದರ ವಿವರ ಹೀಗಿದೆ:
24-11-2026: ವಲಯ-1, ವಾರ್ಡ್-1 — ಗುರುಸಿದ್ದೇಶ್ವರ ಮಠ, ತಮಿಳ್ತಾಯ್ ಸಮುದಾಯ ಭವನ, ಸೋಮಿನಕೊಪ್ಪ ಮುಖ್ಯರಸ್ತೆ.
25-11-2026: ವಲಯ-3, ವಾರ್ಡ್-14 — ಚನ್ನಬಸವೇಶ್ವರ ಸಮುದಾಯ ಭವನ, ಮಲವಗೊಪ್ಪ, ಬಿ.ಹೆಚ್.ರಸ್ತೆ.
26-11-2026: ವಲಯ-2, ವಾರ್ಡ್-26 — ದ್ರೌಪದಮ್ಮ ದೇವಸ್ಥಾನ, ಗೋಪಾಳ.
02-12-2026: ವಲಯ-1, ವಾರ್ಡ್-8 — ಶಾಂತಿನಗರ, ಸರ್ಕಾರಿ ಶಾಲೆ.
03-12-2026: ವಲಯ-2, ವಾರ್ಡ್-20, 21, 22 — ರಾಮಣ್ಣ ಶ್ರೇಷ್ಠಿ ಪಾರ್ಕ್.
05-12-2026: ವಲಯ-3, ವಾರ್ಡ್-18, 19 — ಕೋಟೆ ಮಾರಿಕಾಂಬ ಸಮುದಾಯ ಭವನ, ಕೋಟೆ ರಸ್ತೆ.
09-12-2026: ವಲಯ-1, ವಾರ್ಡ್-34 — ಕೆ.ಹೆಚ್.ಬಿ. ಕಛೇರಿ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ.
11-12-2026: ವಲಯ-2, ವಾರ್ಡ್-10, 11 — ಮಾರಿಕಾಂಬ ದೇವಸ್ಥಾನ, ಟ್ಯಾಂಕ್ ಮೊಹಲ್ಲಾ.
16-12-2026: ವಲಯ-1, ವಾರ್ಡ್-3, 4, 6, 7 — ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ರವೀಂದ್ರನಗರ.
17-12-2026: ವಲಯ-3, ವಾರ್ಡ್-27 — ಭಾರತೀಯ ಸಭಾ ಭವನ, ಆರ್.ಎಂ.ಎಲ್. ನಗರ ಮುಖ್ಯ ರಸ್ತೆ.
18-12-2026: ವಲಯ-2, ವಾರ್ಡ್-30 — ಪ್ರಸನ್ನ ಗಣಪತಿ ದೇವಸ್ಥಾನ, ನಾಗರಾಜಪುರ ಬಡಾವಣೆ.
22-12-2026: ವಲಯ-2, ವಾರ್ಡ್-35 — ಅಗಮುಡಿ ಕಲ್ಯಾಣ ಮಂದಿರ, ಗೋಪಾಲಗೌಡ ಬಡಾವಣೆ.
23-12-2026: ವಲಯ-1, ವಾರ್ಡ್-32, 33 — ವೀಣಾ ಶಾರದಾ ಶಾಲೆ, ಹೊಸಮನೆ.
24-12-2026: ವಲಯ-3, ವಾರ್ಡ್-16, 17 — ಚೌಡೇಶ್ವರಿ ಸಮುದಾಯ ಭವನ, 6ನೇ ತಿರುವು, ಎಡಭಾಗ, ವಿದ್ಯಾನಗರ.
29-12-2026: ವಲಯ-2, ವಾರ್ಡ್-5, 29 — ಕಾಮಾಕ್ಷಿಬೀದಿ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಗಣಪತಿ ದೇವಸ್ಥಾನ ಹತ್ತಿರ.
30-12-2026: ವಲಯ-1, ವಾರ್ಡ್-34 — ಕೆ.ಹೆಚ್.ಬಿ. ಕಛೇರಿ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ.
31-12-2026: ವಲಯ-3, ವಾರ್ಡ್-28 — ಗೌಡಸಾರಸ್ವತ ಕಲ್ಯಾಣ ಮಂದಿರ, ಜಿ.ಎಸ್.ಕೆ.ಎಂ. ರಸ್ತೆ.
ಅರ್ಜಿಯೊಂದಿಗೆ ಮಾಲೀಕತ್ವ ಸಾಬೀತುಪಡಿಸುವ ದಾಖಲೆ (ನೋಂದಾಯಿತ ಆಸ್ತಿ ದಾಖಲಾತಿ ಪತ್ರ), ಮಾಲೀಕರ ಭಾವಚಿತ್ರ ಮತ್ತು ಆಧಾರ್ ಕಾರ್ಡ್, ವೋಟರ್ ಐಡಿ, ಕಟ್ಟಡ/ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ವಿದ್ಯುತ್ ಬಿಲ್ ಹಾಗೂ ಚಾಲ್ತಿ ಸಾಲಿನ ಕಂದಾಯ ಪಾವತಿ ರಶೀದಿಯನ್ನು ಸಲ್ಲಿಸಬೇಕು. ಇನ್ನು ಇಸಿ ಕಡ್ಡಾಯವಿರುವುದಿಲ್ಲವಾಗಿದ್ದು, ಇಸಿ ನೀಡಿದಲ್ಲಿ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ಮತ್ತು ಇಸಿ ಇಲ್ಲದಿದ್ದಲ್ಲಿ ನಾನ್ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು(ಕಂದಾಯ) ತಿಳಿಸಿದ್ದಾರೆ.
ನವೆಂಬರ್-ಡಿಸೆಂಬರ್ ನಲ್ಲಿ ಇ-ಖಾತಾ ಮೇಳ ವಾರ್ಡ್ ವಾರು ನಡೆಯಲಿದೆ, ನಗರ ಪಾಲಿಕೆ ಪ್ರಕಟಣೆ
Date:
