ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದ ಆನೆ ದಾಳಿಯ ಹಿನ್ನೆಲೆಯಲ್ಲಿ, ಕಾಡಾನೆ ಸೆರೆ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಕುಮ್ಕಿ ಆನೆಗಳನ್ನು ರವಾನಿಸಲಾಗಿದೆ.
ಸಕ್ರೆಬೈಲಿನ ಜ್ಯೂನಿಯರ್ ಅರ್ಜುನ, ಭೀಷ್ಮ ಹಾಗೂ ಸಾಗರ್ ಆನೆಗಳು ಕಾರ್ಯಾಚರಣೆಗಾಗಿ ತೆರಳಿವೆ. ಕಳೆದ ರಾತ್ರಿ ಸಕ್ರೆಬೈಲು ಆನೆ ಬಿಡಾರದಿಂದ ಹೊರಟಿರುವ ಆನೆಗಳು ಇಂದು ಬೇಲೂರು ತಲುಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಈ ಮೂರು ಕುಮ್ಕಿ ಆನೆಗಳು ಪ್ರಮುಖ ಪಾತ್ರ ವಹಿಸಲಿವೆ.
