Monday, November 2, 2026
Monday, November 2, 2026

ಮಲೆನಾಡಿನ ರೈಲ್ವೆ ಇತಿಹಾಸದಲ್ಲಿ ಸುವರ್ಣಾಧ್ಯಾಯ: ಹೊಸ ಶಕೆಯತ್ತ ಶಿವಮೊಗ್ಗ

Date:

​ನಮ್ಮ ಹೆಮ್ಮೆಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಜನತೆಯ ಬಹುದಿನಗಳ ಕನಸ ಸಾಕಾರಗೊಳ್ಳುವ ಐತಿಹಾಸಿಕ ಕ್ಷಣ ಹತ್ತಿರದಲ್ಲಿದೆ. ರಾಜ್ಯದ 4ನೇ ಅತಿ ದೊಡ್ಡ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿಯು ಕೋಟೆಗಂಗೂರಿನಲ್ಲಿ ಶರವೇಗದಲ್ಲಿ ಮುಗಿಯುತ್ತಿದ್ದು, ಮಲೆನಾಡಿನ ರೈಲು ಸಂಚಾರಕ್ಕೆ ಮುಂಬರುವ ದಿನಗಳಲ್ಲಿ ಅಮೃತ ಕಾಲ ಪ್ರಾರಂಭವಾಗಲಿದೆ! ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

​ಮೂಲೆಗುಂಪಾಗಿದ್ದ ಮಲೆನಾಡಿನ ರೈಲು ಸಂಪರ್ಕಕ್ಕೆ ಕಾಯಕಲ್ಪ ನೀಡಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಪ್ರಮುಖ ಮುಖಾಮುಖಿಗಳು ಇಲ್ಲಿವೆ:

ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ: ಅಂದಾಜು ₹76.01 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪಿಟ್ ಲೈನ್‌ಗಳು, ಫ್ಲಾಟ್‌ಫಾರ್ಮ್‌ಗಳು ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳುತ್ತಿದ್ದು, ಇನ್ನು ಮುಂದೆ ನಮ್ಮ ಶಿವಮೊಗ್ಗದಿಂದಲೇ ನೇರವಾಗಿ ಎಕ್ಸ್‌ಪ್ರೆಸ್ ರೈಲುಗಳ ನಿರ್ವಹಣೆ ಮತ್ತು ಸಂಚಾರ ಆರಂಭವಾಗಲಿದೆ!

ಅಮೃತ್ ಭಾರತ್Stations ಅಭಿವೃದ್ಧಿ: ₹21.97 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಟೌನ್, ₹24.04 ಕೋಟಿ ವೆಚ್ಚದಲ್ಲಿ ಸಾಗರ ಜಂಬೂಗಾರ ಮತ್ತು ₹25.47 ಕೋಟಿ ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಂಗೊಳಿಸಲಿವೆ.

ಹೆಚ್ಚಿದ ಸಂಪರ್ಕ ಹಾಗೂ ಹೊಸ ರೈಲುಗಳ ಆಗಮನ: ಡಿಪೋ ಕಾರ್ಯಾರಂಭದ ಬಳಿಕ ಬೆಂಗಳೂರು, ತಿರುಪತಿ ಸೇರಿದಂತೆ ದೇಶದ ಇತ್ತೀಚಿನ ಪ್ರಮುಖ ನಗರಗಳಿಗೆ ಶಿವಮೊಗ್ಗದಿಂದಲೇ ನೇರ ರೈಲು ಸಂಪರ್ಕ ಸಿಗಲಿದ್ದು, ಪ್ರಯಾಣಿಕರ ದಶಕಗಳ ಬೇಡಿಕೆ ಈಡೇರಲಿದೆ.

​ಪ್ರಧಾನಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಜೀ, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರ ದೃಢಸಂಕಲ್ಪದಿಂದ ಮಲೆನಾಡು ಇಂದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ ಎಂದು ಸಂಸದ ರಾಘವೇಂದ್ರ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...