Wednesday, October 28, 2026
Wednesday, October 28, 2026

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ: ಲಕ್ಷಾಂತರ ಫಲಾನುಭವಿಗಳಿಗೆ ನೇರ ಲಾಭ-ಇನ್ನೂ ಹೆಚ್ಚಿನ ಪ್ರಚಾರ ನೀಡಲು ಸೂಚನೆ

Date:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಲಕ್ಷಾಂತರ ಫಲಾನುಭವಿಗಳಿಗೆ ಇದರ ನೇರ ಲಾಭ ತಲುಪುತ್ತಿದೆ. ಈ ಯೋಜನೆಗಳನ್ನು ಜಿಲ್ಲೆಯಲ್ಲಿ ಇನ್ನೂ ಪರಿಣಾಮಕಾರಿಗೊಳಿಸಲು ಹೆಚ್ಚಿನ ಪ್ರಚಾರ ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್. ಮೆಹರೋಜ್ ಖಾನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಶೇ. ೯೭ ರಿಂದ ೯೮ ರಷ್ಟು ಯಶಸ್ವಿಯಾಗಿದ್ದು, ಗ್ಯಾರಂಟಿ ಪ್ರಾಧಿಕಾರ, ಸಮಿತಿ ಸದಸ್ಯರು ಮತ್ತು ಅಧಿಕಾರಿಗಳ ಪಾತ್ರ ಗಣನೀಯವಾಗಿದೆ ಎಂದು ಶ್ಲಾಘಿಸಿದರು.
ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಹಾಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದ್ದು ಎಲ್ಲಾ ತಾಲೂಕುಗಳಲ್ಲಿ ಮುಂದಿನ ೩-೪ ದಿನಗಳಲ್ಲಿ ಸಮಿತಿಗಳ ರಚನೆ ಪೂರ್ಣವಾಗಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆ:
ಗೃಹಲಕ್ಷ್ಮಿ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಅರ್ಹ ಮಹಿಳೆಯರ ಖಾತೆಗೆ ಕೋಟ್ಯಂತರ ರೂಪಾಯಿ ಜಮೆಯಾಗಿದೆ.
ವರ್ಷವಾರು ಅನುದಾನ ವಿವರ: ೨೦೨೩-೨೪: ₹೫೮೪,೨೩,೨೬,೦೦೦
೨೦೨೪-೨೫: ₹೭೬೮,೩೦,೫೮,೦೦೦
೨೦೨೫-೨೬: ₹೮೪೧,೧೩,೫೮,೦೦೦
ರಿಕವರಿಗೆ ಸೂಚನೆ: ಮರಣ ಹೊಂದಿದ ಫಲಾನುಭವಿಗಳಿಂದ ಸರ್ಕಾರಕ್ಕೆ ಜಮೆಯಾಗಬೇಕಾದ ₹೭೩,೭೫,೭೪೭ ಬಾಕಿ ಇರುವುದು ವರದಿಯಾಗಿದ್ದು, ಬ್ಯಾಂಕ್‌ಗಳ ಜೊತೆ ಸಭೆ ನಡೆಸಿ, ಖಾತೆಯಲ್ಲಿ ಹಣ ಇರುವವರಿಂದ ಹಣ ರಿಕವರಿ ಮಾಡಲು ಸೂಚಿಸಲಾಯಿತು.
ಪ್ರತಿ ಗೃಹಲಕ್ಷ್ಮಿ ಫಲಾನುಭವಿ ತಮ್ಮದೇ ಸಿಮ್ ಹೊಂದಬೇಕು ಎಂದು ಈಗಾಗಲೇ ತಿಳಿಸಲಾಗಿದ್ದು, ಯಾವುದೇ ಅರ್ಹ ಫಲಾನುಭವಿಗೆ ಯೋಜನೆ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆ:
ಶಕ್ತಿ ಯೋಜನೆಯು ಮಹಿಳೆಯರಿಗೆ ವರದಾನವಾಗಿದ್ದು, ಧಾರ್ಮಿಕ ಕ್ಷೇತ್ರ, ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ೮,೬೯,೦೪,೬೮೬ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಜೂನ್ ೨೦೨೩ ರಿಂದ ಸೆಪ್ಟೆಂಬರ್ ೨೦೨೬ ರವರೆಗೆ ಸರ್ಕಾರದಿಂದ ಕೆಎಸ್‌ಆರ್‌ಟಿಸಿಗೆ ರೂ.೩,೩೬,೧೮,೯೫,೪೬೪ ಆದಾಯ ಬಂದಿದೆ.
ಜಿಲ್ಲೆಯಲ್ಲಿ ಪ್ರಸ್ತುತ ೪೦೧ ಬಸ್‌ಗಳಿವೆ. ಆದರೆ ಸೊರಬ, ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ಡಿಪೋಗಳಿಲ್ಲದೆ ಅಲ್ಲಿ ಬಸ್ ಕೊರತೆ ಉಂಟಾಗಿದೆ ಎಂದು ಕೆ ಎಸ್ ಆರ್ ಟಿಸಿ ಡಿ ಸಿ ನವೀನ್ ತಿಳಿಸಿದರು.
ನಗರದಲ್ಲಿ ಸುಮಾರು ೪೦ ಸಾವಿರ ವಿದ್ಯಾರ್ಥಿಗಳು ಹಾಗೂ ಮಹಿಳಾ ಕಾರ್ಮಿಕರು ಸಂಚರಿಸುತ್ತಿದ್ದು, ಖಾಸಗಿ ಬಸ್‌ಗಳು ಹೆಚ್ಚಾಗಿವೆ ಎಂದು ಸದಸ್ಯ ಶಿವಾನಂದ್ ಗಮನಕ್ಕೆ ತಂದರು.
ತೀರ್ಥಹಳ್ಳಿಯಲ್ಲಿ ‘ಸಹಕಾರ ಸಾರಿಗೆ’ ಕೊರೊನಾ ಅವಧಿಯಲ್ಲಿ ಸ್ಥಗಿತಗೊಂಡ ನಂತರ ಕೆಲವು ಗ್ರಾಮಗಳಲ್ಲಿ ಜನರು ೧೦-೧೫ ಕಿ.ಮೀ ನಡೆಯುವ ಪರಿಸ್ಥಿತಿ ಬಂದೊದಗಿದೆ.
ಹೊಸನಗರ ತಾಲೂಕಿನ ಗ್ರಾಮಾಂತರ ಭಾಗಕ್ಕೆ ಕನಿಷ್ಠ ೫ ಹೊಸ ಬಸ್‌ಗಳನ್ನು ನೀಡುವಂತೆ ಸದಸ್ಯರು ಮನವಿ ಮಾಡಿದರು.
ಕೆಎಸ್ಆರ್‌ಟಿಸಿ ಡಿಸಿ ನವೀನ್ ಮಾಹಿತಿ: ಕೇಂದ್ರ ಸರ್ಕಾರದ ಯೋಜನೆಯಡಿ ೫೦ ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಆಗಿದ್ದು ಮಗರ ಸಾರಿಗೆ ಸಮಸ್ಯೆ ಬಗೆಹರಿಯಲಿದೆ. ೧೫ ವರ್ಷ ಮೇಲ್ಪಟ್ಟ ೮೫ ಬಸ್‌ಗಳು ಸ್ಕ್ರಾಪ್ ಆಗಿವೆ. ಹೊಸ ರೂಟ್‌ಗೆ ೬೫ ಅರ್ಜಿ ಬಂದಿದ್ದು, ಸಂಪನ್ಮೂಲ ಕೊರತೆ ಇದೆ ಎಂದು ತಿಳಿಸಿದರು.
ಉಪಾಧ್ಯಕ್ಷರ ಭರವಸೆ: ಜಿಲ್ಲೆಯ ಸಾರಿಗೆ ತೊಡಕುಗಳ ಕುರಿತು ಸಾರಿಗೆ ಸಚಿವರಿಗೆ ಪತ್ರ ಬರೆಯುವುದಾಗಿ ಮೆಹರೋಜ್ ಖಾನ್ ತಿಳಿಸಿದರು.
ಅನ್ನಭಾಗ್ಯ ಯೋಜನೆ:
ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳಿಗೆ ನೇರ ನಗದು ಮತ್ತು ಆಹಾರ ಧಾನ್ಯ ವಿತರಣೆ ಸುಗಮವಾಗಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ರೂ.೩೬೦,೫೪,೭೬,೯೬೦ ವೆಚ್ಚ ಮಾಡಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಸಮಯ: ಕಾರ್ಮಿಕರಿಗೆ ಅನುಕೂಲವಾಗುವಂತೆ ಬೆಳಿಗ್ಗೆ ೭:೦೦ ಗಂಟೆಗೆ ಸರಿಯಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಮತ್ತು ಪಡಿತರ ಲಭ್ಯತೆಯ ಮಾಹಿತಿ ಫಲಕ ಅಳವಡಿಸಲು ಹಾಗೂ ಕಳಪೆ ರಾಗಿ ಸರಬರಾಜು ದೂರಿನನ್ವಯ ಕ್ರಮ ವಹಿಸುವಂತೆ, ಮುಖ್ಯ ವಾಗಿ ಕಾಳಸಂತೆಯಲ್ಲಿ ಅಕ್ಕಿ ಖರೀದಿ, ಅನಧಿಕೃತ ಪಡಿತರ ಸಾಗಾಣಿಕೆ ಬಗ್ಗೆ ಸೂಕ್ತ ನಿಗಾ ವಹಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.
ಹಾಗೂ ಗ್ರಾಮಾಂತರ ಭಾಗದಲ್ಲಿ ಅಂಗಡಿಗಳಿಗೆ ಪಡಿತರ ಅಕ್ಕಿ ನೀಡಿ ಬೇರೆ ವಸ್ತು ಖರೀದಿಸುವ ಬಗ್ಗೆ ತಿಳಿದುಬಂದಿದ್ದು ಇದನ್ನು ತಡೆಯಲು ಶಿಸ್ತಿನ ಕ್ರಮ ಮತ್ತು ಗೋದಾಮುಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ದೇಶಿಸಿದರು.
ಆಹಾರ ಇಲಾಖೆ ಡಿಡಿ ಸತೀಶ್, ಅನಧಿಕೃತ ಪಡಿತರ ಸಾಗಾಣಿಕೆಗೆ ಸಂಬಂಧಿಸಿದಂತೆ ೩ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ: ೯೬% ಸಾಧನೆ
ಸಾಧನೆ: ೨೦೦ ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಜಿಲ್ಲೆಯ ೪,೭೩,೬೮೨ ಕುಟುಂಬಗಳಿಗೆ ಸೌಲಭ್ಯ ತಲುಪಿದ್ದು, ಶೇ. ೯೬ ರಷ್ಟು ಸಾಧನೆಯಾಗಿದೆ.
ಸರ್ಕಾರದಿಂದ ಒಟ್ಟು ರೂ. ೮೨,೩೬೮.೬೭ ಲಕ್ಷ ವೆಚ್ಚ ಮಾಡಲಾಗಿದೆ.
ಮನೆ ಮನೆ ಭೇಟಿ ನೀಡಿ ಪರಿಶೀಲನೆ ಪ್ರಗತಿಯಲ್ಲಿದ್ದು ಇನ್ನು ೧೫,೨೬೨ ಮನೆ ಬಾಕಿ ಇದ್ದು, ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸ್ಮಾರ್ಟ್ ಮೀಟರ್ ಹಾಗೂ ತಾಂತ್ರಿಕ ದೋಷಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಯುವನಿಧಿ ಹಾಗೂ ‘ಯುವನಿಧಿ ಪ್ಲಸ್’ ಪ್ರಚಾರಕ್ಕೆ ಸೂಚನೆ
ಜಿಲ್ಲೆಯಲ್ಲಿ ಒಟ್ಟು ರೂ.೧,೩೧,೩೯೫ ಡಿಬಿಟಿ ಖಾತೆಗಳಿದ್ದು, ಇದುವರೆಗೆ ರೂ.೩೯,೦೮,೬೪,೦೦೦ ಭತ್ಯೆ ನೀಡಲು ವೆಚ್ಚ ಮಾಡಲಾಗಿದೆ ಎಂದು ಅಧಿಕಾತಿ ಮಾಹಿತಿ ನೀಡಿದರು.
ತರಬೇತಿಗೆ ಒತ್ತು: ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳ ಮಾಹಿತಿ ಪಡೆದು, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಹಾಗೂ ‘ಯುವನಿಧಿ ಪ್ಲಸ್’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕಾಲೇಜುಗಳಲ್ಲಿ ಯುವನಿಧಿ‌ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳ ಮೂಲಕ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸಲು ಪದಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು..
ಫಲಾನುಭವಿಗಳೊಂದಿಗೆ ಸಂವಾದ-ಯಶೋಗಾಥೆ :
ರಿಪ್ಪನ್‌ಪೇಟೆಯ ಕಲಾವತಿ ಮಾತನಾಡಿ ತಾವು ಮೊದಲು ಇಸ್ತ್ರಿ ಕೆಲಸ ಮಾಡುತ್ತಿದ್ದವರು, ಗೃಹಲಕ್ಷ್ಮಿ ಹಣದಿಂದೀಗ ಬಟ್ಟೆ ಮತ್ತು ಸೀರೆ ತಂದು ವ್ಯಾಪಾರ ಆರಂಭಿಸಿದ್ದು, ಲಾಭ ಸಿಗುತ್ತಿದೆ. ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಚಿರ ಋಣಿ ಎಂದು ತಿಳಿಸಿದರು.
ಉಂಬ್ಳೇಬೈಲಿನ ಸವಿತಾ: ಕೂಲಿ ಕೆಲಸ ಬಿಟ್ಟು, ಗೃಹಲಕ್ಷ್ಮಿ ಹಣ ಒಟ್ಟುಗೂಡಿಸಿ ಸ್ವಂತ ಚಿಕನ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದು, ಅನುಕೂಲಕರವಾಗಿದೆ. ಕುಟುಂಬ ನಿರ್ವಹಣೆ ಉತ್ತಮವಾಗಿ ಮಾಡುತ್ತಿದ್ದೇನೆ. ಗ್ಯಾರಂಟಿ ಯೋಜನೆಗಳು‌ ಮತ್ತು ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಭದ್ರಾಪುರದ ನೀಲಮ್ಮ: ಗೃಹಲಕ್ಷ್ಮಿ
ಹಣದಿಂದ ಹಸು ಖರೀದಿಸಿ, ಸ್ವತಃ ಹುಲ್ಲು ಬೆಳೆದು, ಹಾಲು ಹಾಕುತ್ತಿದ್ದೇನೆ. ಇದರಿಂದ ಸಂಸಾರ ನಡೆಸಲು ಅನುಕೂಲವಾಗಿದೆ. ಧನ್ಯವಾದಗಳು.
ಆನಂದಪುರದ ಸವಿತಾ: ಮೊದಲು ಕೋರೆ ಕೆಲಸ ಮಾಡುತ್ತಿದ್ದು, ಅದು ಅನಿಶ್ಚಿತವಾಗಿತ್ತು. ಗೃಹಲಕ್ಷ್ಮಿ ಹಣ ಕೂಡಿಟ್ಟು ಈಗ ದಿನಸಿ ಅಂಗಡಿ ಆರಂಭಿಸಿದ್ದು, ಅಂಗಡಿ ನೋಡಿಕೊಳ್ಳುತ್ತಿದ್ದೇನೆ. ಲಾಭವಾಗುತ್ತಿದೆ. ಜೀವನಕ್ಕೆ ಅನುಕೂಲವಾಗಿದೆ.
ಗೋವಿಂದಪುರದ ಮಂಜುಳಾಬಾಯಿ: ಮೊದಲು ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಪಂಚ ಗ್ಯಾರಂಟಿ ಯೋಜನೆಗಳಿಂದ ತುಂಬಾ ಸಹಾಯ ಆಗಿದೆ. ಗೃಹಲಕ್ಷ್ಮಿ ಹಣದಿಂದ
ಬುಟ್ಟಿ ಹೆಣೆದು ಮಾರಾಟ ಮಾಡುತ್ತಿದ್ದೇನೆ.
ಸೊರಬದ ರೇಖಾ ಸತೀಶ್: ತಮ್ಮ ಪತಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಬಿಪಿಎಲ್ ಕಾರ್ಡ್‌ನಿಂದ ಅವರ ಆಪರೇಷನ್, ರೇಷನ್ ಗೆ ತುಂಬಾ ಸಹಾಯ ಆಗಿದೆ ಹಾಗೂ ಗೃಹಲಕ್ಷ್ಮಿ ಹಣದಿಂದ ಹೊಲಿಗೆ ಮಷೀನ್ ಪಡೆದು, ಬಟ್ಟೆ ಹೊಲಿಯುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ನೆರವಾಗಿದೆ. ಸರ್ಕಾರಕ್ಕೆ ಋಣಿ.
ತೀರ್ಥಹಳ್ಳಿಯ ಫರ್ಜಾನಾ ಖಾನಂ: ಹಣ ಕೂಡಿಟ್ಟು ಕಾಯಿ ವ್ಯಾಪಾರ ಹಾಗೂ ಸಣ್ಣ ಅಂಗಡಿ ನಡೆಸುತ್ತಿದ್ದೇನೆ. ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ವಂದನೆಗಳು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಜಿ.ಪಂ. ಸಿಇಓ ರಿಷಿ ಆನಂದ್, ಜಿಲ್ಲಾ ಹಾಗೂ ತಾಲೂಕುಗಳ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Radio Shivamogga ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಿಂದ 24 ಗಂಟೆಗಳ ನಿರಂತರ ನೇರಪ್ರಸಾರ

‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ...

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...

Hartalu Halappa ರಾಜ್ಯದಲ್ಲಿ ವಿದ್ಯುತ್ ಕೊರತೆ: ಸರ್ಕಾರದ ಅಸಮರ್ಥತೆ- ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಪ್ರಶ್ನೆ.

Hartalu Halappa ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ...

Shimoga Pes College ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧ ಮಂಡನೆ: ಎಂಬಿಎ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ.

Shimoga Pes College ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಪಿಇಎಸ್‌ಐಟಿ‌ಎಂ...