ಶಿಕಾರಿಪುರ ತಾಲೂಕು ಆಡಳಿತ, ಬೇಗೂರು ಗ್ರಾಮ ಪಂಚಾಯಿತಿ ಹಾಗೂ ವಿವಿಧ ದೇವಾಲಯಗಳ ಉಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಬೇಗೂರಿನ ಶ್ರೀ ಗಾಳಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಬನ್ನಿ ಮುಡಿಯುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ವೈ. ರಾಘವೇಂದ್ರ ಅವರು ಸ್ಥಳೀಯ ಗ್ರಾಮಸ್ಥರು, ಹಿರಿಯರು ಹಾಗೂ ಯುವಕರಿಗೆ ಬನ್ನಿ ಮುಡಿಸಿ ವಿಜಯದಶಮಿಯ ಶುಭಾಶಯ ಕೋರಿದರು. ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರೀತಿ, ಸೌಹಾರ್ದತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಪ್ರದಾಯದ ಮಹತ್ವವನ್ನು ಸಾರಲಾಯಿತು.
ವಿಜಯದಶಮಿಯ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ವಿಜಯ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಬಿ.ವೈ. ರಾಘವೇಂದ್ರ ಆಶಿಸಿದರು.
