Kuvempu Universiry ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಎಎನ್ ಆರ್ ಎಫ್ -ಐಆರ್ ಜಿ ಸಂಶೋಧನಾ ಯೋಜನೆ: “ಕ್ಯಾಸನೂರು ಅರಣ್ಯ ಕಾಯಿಲೆಗೆ (KFD) ಬಹು-ವೇದಿಕೆಯ ಲಸಿಕೆ ತಂತ್ರಗಳ ವೈಜ್ಞಾನಿಕ ವಿನ್ಯಾಸ: ಸಬ್ಯೂನಿಟ್ ಚಿಮೆರಾ ಮತ್ತು ವೈರಸ್ ಸದೃಶ್ಯ ಕಣ ಆಧಾರಿತ ವಿಧಾನಗಳು” ಯೋಜನೆಯಡಿ ಖಾಲಿ ಇರುವ ‘ಕಿರಿಯ ಸಂಶೋಧನಾರ್ಥಿ’ (ಜೆಆರ್ ಎಫ್ ) ಹುದ್ದೆಯ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಸೂಕ್ಷ್ಮಾಣು ಜೀವಶಾಸ್ತ್ರ (Microbiology), ಜೈವಿಕ ತಂತ್ರಜ್ಞಾನ (Biotechnology), ಜೀವರಸಾಯನಶಾಸ್ತ್ರ (Biochemistry) ಅಥವಾ ಜೀವವಿಜ್ಞಾನದ ಇತರ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ.ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಫೆಲೋಶಿಪ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಎ ಎನ್ ಆರ್ ಎಫ್ -ಐಆರ್ ಜಿ ಮಾರ್ಗಸೂಚಿಯನ್ವಯ 3 ವರ್ಷಗಳ ಅವಧಿಗೆ ಪ್ರತಿ ತಿಂಗಳು ರೂ. 37,000/- + ಹೆಚ್ ಆರ್ ಎ ನೀಡಲಾಗುವುದು.
Kuvempu Universiry ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ, ವಿದ್ಯಾರ್ಹತೆ ಹಾಗೂ ಅನುಭವದ ಧೃಢೀಕೃತ ದಾಖಲಾತಿಗಳೊಂದಿಗೆ ಪ್ರೊ. ಎನ್.ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – 577451 ಇಲ್ಲಿಗೆ ನೇರವಾಗಿ ಅಥವಾ ಇ-ಮೇಲ್ nbtmicro@gmail.com ಮೂಲಕ ದಿನಾಂಕ 28/10/2026ರ ಒಳಗಾಗಿ ತಲುಪುವಂತೆ ಸಲ್ಲಿಸಬೇಕು.
ಅರ್ಜಿಯ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.kuvempu.ac.in ನಲ್ಲಿ ಪಡೆಯಬಹುದು. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
Kuvempu Universiry ಕುವೆಂಪು ವಿವಿ ಯಲ್ಲಿ” ಕಿರಿಯ ಸಂಶೋಧನಾರ್ಥಿ” ಹುದ್ದೆಗೆ ಅರ್ಜಿ ಆಹ್ವಾನ
Date:
