ಗುರುಪುರದ ಸಂದೀಪ್ ಎನ್.ವಿ. ಅವರು ತಮಿಳುನಾಡಿನ ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಡಾ. ಬಿ. ಹಿರಿಯಪ್ಪ ಅವರ ಮಾರ್ಗದರ್ಶನದಲ್ಲಿ “ಭಾರತದ ಆಯ್ದ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ಗಳ ಕಾರ್ಯಕ್ಷಮತೆಯ ಮೇಲೆ ವಿಲೀನ ಮತ್ತು ಸ್ವಾಧೀನದ ಪರಿಣಾಮಗಳು” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ, ಸಂಶೋಧನಾ ಪ್ರಬಂಧವನ್ನು ಮಂಡಿಸುವ ಮೂಲಕ ಈ ಪದವಿಗೆ ಭಾಜನರಾಗಿದ್ದಾರೆ.
ಇವರು ಪ್ರೇಮವತಿ ಮತ್ತು ದಿವಂಗತ ವೆಂಕಟೇಶ್ ಪಿ.ಎನ್. ಅವರ ಪುತ್ರರಾಗಿದ್ದಾರೆ.
