ದೇಶದ ವಿವಿಧ ಬ್ಯಾಂಕಿಂಗ್, ಎಸ್ಎಸ್ಸಿ ಹಾಗೂ ಆರ್ಆರ್ಬಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಆಕಾಂಕ್ಷಿಗಳಿಗೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಅರ್ಹ ಅಭ್ಯರ್ಥಿಗಳಿಗೆ 45 ದಿನಗಳ ಕಾಲ ವಿಶೇಷ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.
ತರಬೇತಿ ನೊಂದಾವಣೆಗೆ 17.10.2026 ಕೊನೆಯ ದಿನಾಂಕವಾಗಿದ್ದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನೋಂದಾಯಿಸಿಕೊಳ್ಳಬೇಕು.
ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಎಂ.ಪಿ. ಸದಾಶಿವ ತಿಳಿಸಿದ್ದಾರೆ..ಅ.29 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ
ಶಿವಮೊಗ್ಗ, ಅ. 14: (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಭಾರತ್ ಹಾಗೂ ಎನ್.ಎಸ್.ಎಸ್. ಘಟಗಳ ಸಹಯೋಗದಲ್ಲಿ ಅ.29 ರಂದು ಬೆಳಗ್ಗೆ 9 ಗಂಟೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಯುವಜನೋತ್ಸವದಲ್ಲಿ ಜಾನಪದ ನೃತ್ಯ: 7+3 10 ಜನರ ಗುಂಪು ಸ್ಪರ್ಧೆ,5 ರಿಂದ 8 ನಿಮಿಷಗಳ ನೃತ್ಯ, (ಕ್ಯಾಸೆಟ್, ಪೆನ್ಡ್ರೈವ್, ಸಿಡಿ ಹಾಡುಗಳಿಗೆ ಅವಕಾಶವಿರುವುದಿಲ್ಲ).ಪ್ರಥಮ ಬಹುಮಾನ-ರೂ.8000/-, ದ್ವಿತೀಯ ರೂ.3000/-, ತೃತೀಯ-ರೂ.2000/-.
ಜಾನಪದ ಗೀತೆ: 7+3 10 ಜನರ ತಂಡವು 5 ರಿಂದ 8 ನಿಮಿಷಗಳ ಗೀತೆ (ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವಂತಿಲ್ಲ ಹಾಗೂ ಹಾಡುಗಳಲ್ಲಿ ಸಿನಿಮಾ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ). ಪ್ರಥಮ ಬಹುಮಾನ ರೂ.5000/-, ದ್ವಿತೀಯ-ರೂ.3000/-, ತೃತೀಯ ರೂ.2000/-.
ಚಿತ್ರಕಲೆ: ಒಬ್ಬರಿಗೆ ವೈಯಕ್ತಿಕ 6 ಗಂಟೆಗಳ ಅವಧಿ. ಪ್ರಥಮ ಬಹುಮಾನ-ರೂ.3000/-, ದ್ವಿತೀಯ-ರೂ.2000/-, ತೃತೀಯ-ರೂ.1000/-.
ಕವಿತೆ ಬರೆಯುವುದು ವೈಯಕ್ತಿಕ 90 ನಿಮಿಷಗಳ ಅವಧಿ ಇರುತ್ತದೆ. ಪ್ರಥಮ ಬಹುಮಾನ-ರೂ.3000/-, ದ್ವಿತೀಯ-ರೂ.2000/-, ತೃತೀಯ-ರೂ.1000/-.
ನುಕ್ಕಾಡ್ ನಾಟಕ: ‘ನಶಾ ಮುಕ್ತ ಯುವ’ಎಂಬ ವಿಷಯ ಕುರಿತು 10 ಜನರ ಗುಂಪು ಸ್ಫರ್ಧೆ, 7ನಿಮಿಷಗಳ ಅವಧಿ ಇರುತ್ತದೆ.ಪ್ರಥಮ ಬಹುಮಾನ-ರೂ.8000/-, ದ್ವಿತೀಯ-ರೂ.3000/-, ತೃತೀಯ-ರೂ.2000/- ಇರುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕ/ಯುವತಿಯರು 15 ರಿಂದ 29 ವರ್ಷ ವಯೋಮಿತಿಯೊಳಗಿರಬೇಕು. ನೋಂದಣಿ ಸಮಯದಲ್ಲಿ ವಯಸ್ಸಿನ ದೃಢೀಕರಣ, ಆಧಾರ್ ಕಾರ್ಡ್/ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಜನನ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಸಲ್ಲಿಸಬೇಕು. ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಅಥವಾ ಅನ್ಯ ಜಿಲ್ಲೆಯವರು ಭಾಗವಹಿಸಿದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ, ಕರ್ತವ್ಯ ಮಾಡುತ್ತಿರುವ ಬಗ್ಗೆ ಸಂಸ್ಥೆಯಿಂದ ಗುರುತಿನ ಚೀಟಿ/ದೃಢೀಕರಣ ಪತ್ರ ಸಲ್ಲಿಸಬೇಕು. ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸತತವಾಗಿ ಮೂರು ವರ್ಷಗಳು ಭಾಗವಹಿಸಿದ್ದು, ಅಥವಾ ಒಂದು ಬಾರಿ ಪದಕ ಪಡೆದಿದ್ದರೆ, ಅಂತಹ ಯುವ ಜನರು ಭಾಗವಹಿಸುವಂತಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ.
ಭಾಗವಹಿಸುವವರು ದಿ: 29/10/2026 ರ ಬೆಳಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.:9845863549/7619638472 ಗಳನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ಕರಾಮು ವಿವಿ ಉಚಿತ ತರಬೇತಿ. ನೋಂದಾವಣೆಗೆ ಅಕ್ಟೋಬರ್ 17 ಅಂತಿಮ ದಿನ
Date:
