Monday, October 12, 2026
Monday, October 12, 2026

ನಾಡಹಬ್ಬ ಒಂದು ಜಸತಿ,ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರೂ ಸೇರಿ ಸಂಭ್ರಮಿಸುವ ಹಬ್ಬ- ಸಚಿವ ರಿಜ್ವಾನ್ ಆರ್ಷದ್

Date:

ನಾಡ ಹಬ್ಬ ದಸರಾ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮದವರು ಸೇರಿ ಸಂಭ್ರಮಿಸುವಂತಹ ಹಬ್ಬವಾಗಿದೆ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರು ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೈಸೂರು ದಸರಾ ಮಹೋತ್ಸವ 2026ರ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಮಹಾರಾಜರು ನಡೆಸುತ್ತಿದ್ದ ರೀತಿಯಲ್ಲಿ ಎಲ್ಲಾ ಪಕ್ಷಗಳು ದಸರಾ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿವೆ. ಮಾನ್ಯ ಮುಖ್ಯಮಂತ್ರಿಗಳು ಈ ಬಾರಿ ಇನ್ನೂ ವಿಶೇಷವಾಗಿ ಮಾಡುವ ಉದ್ದೇಶದಿಂದ ವಿಶೇಷವಾಗಿ ಸಿದ್ದತೆ ಮಾಡಿದ್ದಾರೆ ಎಂದರು.

ಅ.25ರವರೆಗೂ ಆಹಾರ ಮೇಳ ನಡೆಯಲಿದ್ದು, 39 ವಿಶೇಷ ಆಹಾರ ಸ್ಟಾಲ್ ಸೇರಿದಂತೆ 140 ಸ್ಟಾಲ್ ಗಳಿವೆ. ಆಹಾರ ಮೇಳದಲ್ಲಿ ಕುಡಿಯುವ ನೀರು ಸೇರಿದಂತೆ ಆಹಾರವು ಗುಣಮಟ್ಟದಿಂದ ಕೂಡಿರಬೇಕು. ಆಹಾರ ಮೇಳಕ್ಕೆ ಆಗಮಿಸುವ ಜನರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿ 50 ಕಿ.ಮೀ ಗೆ ಆಹಾರ ಪದ್ಧತಿ ಬದಲಾಗುತ್ತದೆ. ಮೈಸೂರು, ಕರಾವಳಿ, ಉತ್ತರ ಕನ್ನಡ ಹೀಗೆ ಆಹಾರ ಪದ್ಧತಿಯಲ್ಲಿ ಬದಲಾವಣೆಯಿದೆ. ಆಹಾರ ಮೇಳದಲ್ಲಿ ಎಲ್ಲಾ ತರಹದ ಊಟ ದೊರೆಯುವುದು ವಿಶೇಷ ಎಂದರು.

ಆಹಾರ ಮೇಳ ಉದ್ಘಾಟನೆ ನನ್ನ ಭಾಗ್ಯ. ನಾನು ಮೈಸೂರಿನವನಾಗಿದ್ದು, ಮೈಸೂರು ಜನರ ಸೇವೆ ಸಲ್ಲಿಸಲು ಇದು ಸದವಕಾಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ದಸರಾ ಆಹಾರ ಮೇಳ ವಿಶೇಷಾಧಿಕಾರಿ ಬಿ..ಎನ್‌. ವೀಣಾ ಅವರು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...