Sunday, October 11, 2026
Sunday, October 11, 2026

ಶಿವಮೊಗ್ಗ ದಸರಾ ಸ್ವಾಗತ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ರಘು ಬಾಲರಾಜ್ ಆಕ್ಷೇಪ

Date:

ಶಾಸಕ ಚನ್ನಬಸಪ್ಪ ಅವರ ಹತೋಟಿಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾ ಆಚರಣೆಯಲ್ಲಿ ಅವರ ಗಮನಕ್ಕೆ ಬಾರದೇ ಕೆಲ ಕಾಂಗ್ರೆಸ್ ಮುಖಂಡರು ಪಾಲಿಕೆ ಹಾಗೂ ಶಾಸಕರ ಗತ್ತಿಗೆ ಕುತ್ತು ತರುತ್ತಿದ್ದಾರೆ. ಕೆಲ ಕಾಂಗ್ರೆಸ್ ನವರಿಂದ ಪಾಲಿಕೆ ಸ್ವಾಗತ ಸರಿಯೇ ಎಂದು ಪಾಲಿಕೆಯ ಮಾಜಿ ಕಾರ್ಪೊರೇಟರ್ ಹಾಗೂ ಜೆಡಿಎಸ್ ನಾಯಕ ರಘು ಬಾಲರಾಜ್ ಪ್ರಶ್ನಿಸಿದ್ದಾರೆ.
ಪ್ರತಿ ವರುಷದಂತೆ ಈ ಬಾರಿಯೂ ಅತ್ಯಂತ ಯಶಸ್ವಿ ದಸರಾ ಆಚರಣೆ ನಡೆಸಲು ಶಾಸಕರು ಹಾಗೂ ಪಾಲಿಕೆ ಮುಂದಾಗಿರುವುದು ಸ್ವಾಗತಾರ್ಹ ಎಂದಿರುವ ರಘು ಅವರು ಈಗಿನ ಪಾಲಿಕೆಯಲ್ಲಿ ಕಾರ್ಪೊರೇಟರ್ ಗಳು ಇಲ್ಲದೆ ಇರುವುದರಿಂದ ಈ ಆಚರಣೆಯ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಚನ್ನಬಸಪ್ಪ, ಶಾರದಾಪೂರ್ಯಾನಾಯ್ಕ್ ಹಾಗೂ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮತ್ತು ಇತರ ಅಧಿಕಾರಿಗಳು, ನೌಕರರ ಮೇಲೆ ಇದೆ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಮೂಗು ತೋರಿಸಿ ವೈಯುಕ್ತಿಕ ಪ್ರಚಾರ ಪಡೆದು ಪಾಲಿಕೆಗೆ ಅಗೌರವ ತರುತ್ತಿರುವುದು ದುರಂತದ ಸಂಗತಿ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ದಸರಾ ಆಚರಣೆಯ ಯುವ ದಸರಾ ಅಂಗವಾಗಿ ಹಿರಿಯ ಚಿತ್ರನಟ, ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರಿಗೆ ಪಾಲಿಕೆ ವತಿಯಿಂದ ಆತ್ಮೀಯವಾದ ಸ್ವಾಗತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸಿ. ಯೋಗೇಶ್ ಹಾಗೂ ಬ್ಲಾಕ್ ಕಾಂಗ್ರೆಸ್ ತಂಡ ಫೋಟೋ ತೆಗೆಸಿಕೊಂಡು ಪಾಲಿಕೆಯಿಂದ ಸ್ವಾಗತಿಸಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಇಲ್ಲಿ ಅವರನ್ನು ಸ್ವಾಗತಿಸುವ ಹೊಣೆ ಸಚಿವರು, ಶಾಸಕರು ಅಥವಾ ಆಯುಕ್ತರದಾಗಿದೆ. ಆದರೆ ಇವರು ಪ್ರಚಾರಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎಂಬುದನ್ನು ಕೈ ಬಿಟ್ಟು ಮಹಾನಗರ ಪಾಲಿಕೆಯಿಂದ ಸ್ವಾಗತಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಅವರು ಪಾಲಿಕೆಯ ಕಾರ್ಯಕ್ರಮವನ್ನು ತಮ್ಮ ಮರ್ಜಿಗಳಿಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ರಘು ಆಕ್ಷೇಪಿಸಿದ್ದಾರೆ.
ಮುಂದೆ ಇಂತಹ ಯಾವುದೇ ಪ್ರಯತ್ನಗಳು ಆಗದಂತೆ ಸಚಿವರು, ಶಾಸಕರು ಹಾಗೂ ಆಯುಕ್ತರು ವಿಶೇಷವಾಗಿ ಶಾಸಕ ಚೆನ್ನಬಸಪ್ಪ ನೋಡಿಕೊಳ್ಳಬೇಕು ಹಾಗೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...