Thursday, October 8, 2026
Thursday, October 8, 2026

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ: ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ಪರಿಸರ ಸಂರಕ್ಷಣೆಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳು ಪೂರಕವಾಗಿವೆ :ಶ್ರೀ.ರಾಜೇಶ್ ಜಿ.

Date:

ಶಿವಮೊಗ್ಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಸರ್ಕಾರಿ ಸಿ ವೃಂದದ ನೌಕರರು ಮತ್ತು ಅಧಿಕಾರಿಗಳಿಗೆ ದಿನಾಂಕ 08/10/2026 ರಿಂದ 09/10/2026 ವರೆಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರು ಶ್ರೀ.ರಾಜೇಶ್ ಜಿ. ರವರು ವಹಿಸಿದ್ದರು. ಮುಖ್ಯ ಅಥಿತಿಗಳು ಮತ್ತು ತರಬೇತಿಯ ಉದ್ಘಾಟಕರಾಗಿ ಭಾಗವಹಿಸಿದ್ದ ತರಬೇತಿಯ ಸಂಯೋಜಕರು ಮತ್ತು ಬೋಧಕರಾಗಿ ಡಾ.ಸಿದ್ದರಾಮ. ಹೆಚ್ ಎಮ್, ಸುಸ್ಥಿರ ಅಭಿವೃದ್ಧಿ ಗುರಿಗಳು ಕರ್ನಾಟಕ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ರವರು ಭಾಗವಹಿಸಿದ್ದರು.
ಪ್ರಾಚಾರ್ಯರಾದ ಶ್ರೀ ರಾಜೇಶ್ ಜಿ ರವರು ತರಬೇತಿಯನ್ನು ಉದ್ಘಾಸಿ ಮಾತನಾಡುತ್ತಾ, ಜೀವವೈವಿಧ್ಯತೆಯಿಂದ ಕೂಡಿದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿ ಬಿಳಿ ಹುಲಿ, ಆಫ್ರಿಕನ್ ಸಿಂಹ, ಅಪರೂಪದ ವನ್ಯಜೀವಿಗಳ ಸಂರಕ್ಷಿತ ಕೇಂದ್ರ, ಶರಾವತಿ ಅಭಯಾರಣ್ಯಯು ಪಶ್ಚಿಮ ಘಟ್ಟದ ಮಳೆಕಾಡು, ಅಪರೂಪದ ಸಸ್ಯ–ಪ್ರಾಣಿ ಸಂಪತ್ತು, ಭದ್ರಾ ಹುಲಿ ಸಂರಕ್ಷಿತ ಪ್ರದೇಶ – 492 ಚ.ಕಿ.ಮೀ. ವ್ಯಾಪ್ತಿಯ ಪ್ರಾಜೆಕ್ಟ್ ಟೈಗರ್ ಮೀಸಲು ಪ್ರದೇಶ ಹುಲಿ, ಚಿರತೆ, ಆನೆ, 250ಕ್ಕೂ ಹೆಚ್ಚು ಪಕ್ಷಿ ಪ್ರಜಾತಿಗಳು. ಸಕ್ಕರೆಬೈಲು ಆನೆಗಳಿಗೆ ತರಬೇತಿ ನೀಡುವ ಹಾಗೂ ಅವುಗಳ ರಕ್ಷಣೆಗೆ ಹೆಸರಾದ ಪ್ರಸಿದ್ಧ ಆನೆ ಬಿಡಾರವಾಗಿದೆ ಎಂದು ಪರಿಚಯಿಸಿದರು. ಜಿಲ್ಲೆಯ ತುಂಗಾ, ಭದ್ರಾ ಮತ್ತು ಶರಾವತಿ ನದಿಗಳು ಜಿಲ್ಲೆಯ ಪ್ರಮುಖ ನದಿಗಳು. ಶರಾವತಿ ನದಿಯಿಂದ ನಿರ್ಮಾಣವಾಗುವ ಭಾರತದ ಅತ್ಯಂತ ಎತ್ತರದ ಜೋಗ್ ಜಲಪಾತ, ಅಬ್ಬಿ ಹಾಗೂ ಕುಂಚಿಕಲ್ ಜಲಪಾತಗಳು ಪ್ರಮುಖವಾಗಿವೆ. ದಕ್ಷಿಣ ಭಾರತದ “ಚಿರಾಪುಂಜಿ” ಎಂದೇ ಪ್ರಸಿದ್ಧವಾಗಿರುವ ಆಗುಂಬೆಯು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಆಗುಂಬೆಯು ಏಷ್ಯಾದ ಅತೀ ಹೆಚ್ಚು ಕಾಳಿಂಗ ಷರ್ಪಗಳು ಇದೇ ವಲಯದಲ್ಲಿ ಕಂಡುಬರುತ್ತವೆ ಎಂದು ಮಾಹಿತಿ ನೀಡಿದರು.
ಶ್ರೀ ಗಣೇಶ್ ಹೆಚ್. ಬಿ, ಉಪ-ಪ್ರಾಚಾರ್ಯರು ಮಾತನಾಡುತ್ತಾ, ತುಂಗಾ ಮತ್ತು ಭದ್ರಾ ನದಿಗಳ ನದಿನೀರು ಜಿಲ್ಲೆಯ ಕೃಷಿಗೆ ಪ್ರಮುಖ ಆಧಾರವಾಗಿದೆ. ಶಿವಮೊಗ್ಗ ಜಿಲ್ಲೆಯು ಕರ್ನಾಟಕದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ಜಿಲ್ಲೆ, ಅಡಿಕೆ ಜೊತೆಗೆ ಭತ್ತ, ಶುಂಠಿ, ಮೆಣಸು ಮತ್ತು ಬಾಳೆ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಸಾಗರದ “ಅಪ್ಪೆ ಮಿಡಿ” ಉಪ್ಪಿನಕಾಯಿ – ಎಳೆ ಮಾವಿನಕಾಯಿ ಉಪ್ಪಿನಕಾಯಿ, ದೀರ್ಘಕಾಲದ ಬಾಳಿಕೆ ಮತ್ತು ವಿಶಿಷ್ಟ ರುಚಿಯಿಂದ ಪ್ರಸಿದ್ಧ ಎಂದು ವಿವರಿಸಿದರು.
ಬೋದಕರಾದ ಶ್ರೀ ಮೇಘರಾಜ ಹೆಚ್.ಕೆ ಮಾತನಾಡುತ್ತಾ, ರಾಷ್ಟ್ರಕವಿ ಕುವೆಂಪು ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು. ಆರ್. ಅನಂತಮೂರ್ತಿ ಹಿರಿಯ ಸಾಹಿತಿಗಳನ್ನು ನೀಡಿದ ಹಿರಿಮೆ ಈ ಜಿಲ್ಲೆಗೆ ಸಲ್ಲುತ್ತದೆ. ಶಿವಮೊಗ್ಗ ನಗರಕ್ಕೆ ಸಮೀಪದಲ್ಲಿರುವ ‘ಮತ್ತೂರು’ ಗ್ರಾಮವು ದೈನಂದಿನ ವ್ಯವಹಾರದಲ್ಲಿ ಸಂಸ್ಕೃತ ಭಾಷೆಯನ್ನು ಬಳಸುವ ವಿಶ್ವದ ಅಪರೂಪದ ಗ್ರಾಮವಾಗಿದೆ. ಕರ್ನಾಟಕದ ಏಕೈಕ ಸಂಸ್ಕೃತ ಭಾಷೆ ಮಾತನಾಡುವ ಗ್ರಾಮ. ಮಲೆನಾಡಿನ ಪರಂಪರೆಯ ಭಾಗವಾದ ಯಕ್ಷಗಾನ ಕಲೆಗೆ ಜಿಲ್ಲೆ ಪ್ರಸಿದ್ಧವಾಗಿದೆ. ಸಿಗಂದೂರು ಚೌಡೇಶ್ವರಿ ದೇವಾಲಯ ಅತ್ಯಂತ ಜನಪ್ರಿಯ ಧಾರ್ಮಿಕ ಕ್ಷೇತ್ರ. ಬಳ್ಳಿಗಾವಿಯು ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯಂತಹ ವಚನಕಾರರ ಜನ್ಮಭೂಮಿ ಎಂದು ತಿಳಿಸಿದರು.
ಸದರಿ ತರಬೇತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ವಿಜಯಪುರ ರವರ ಅಧಿಕಾರ ವ್ಯಾಪ್ತಿಯ ವಿವಿಧ ಇಲಾಖೆಗಳ 20 ಜನ ಹಾಗೂ ಜಿಲ್ಲಾಧಿಕಾರಿಗಳು ವಿಜಯಪುರ ರವರ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ 10 ಜನ ಸಿ ವೃಂದದ ನೌಕರರು ಮತ್ತು ಸಿಬ್ಬಂದಿಗಳಿಗೆ ತರಬೇತಿಯಲ್ಲಿ ಭಾಗವಹಿಸಿ ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಚಯಾತ್ಮಕ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಬೋಧಕರುಗಳು, ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ಹಾಗೂ ತರಬೇತಿಯ ಸಂಯೋಜಕರಾಗಿ ಡಾ.ಸಿದ್ದರಾಮ. ಹೆಚ್ ಎಮ್, ಸುಸ್ಥಿರ ಅಭಿವೃದ್ಧಿ ಗುರಿಗಳು ಕರ್ನಾಟಕ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ ಮೈಸೂರಿನಿಂದ ಆಗಮಿಸಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳನ್ನು ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...