Thursday, October 8, 2026
Thursday, October 8, 2026

ಶಿವಮೊಗ್ಗ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರಬಂಧ) ಸಮಿತಿ ಸಭೆ

Date:

ದೌರ್ಜನ್ಯ ಪ್ರಕರಣಗಳ ತಡೆ, ಸಂತ್ರಸ್ತರಿಗೆ ತ್ವರಿತ ನ್ಯಾಯ ಹಾಗೂ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಪ್ರಕರಣಗಳ ತನಿಖೆ ಮತ್ತು ಪರಿಹಾರ ವಿತರಣೆಯಲ್ಲಿ ವಿಳಂಬವಾಗದAತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾವತಿ ತಾಲ್ಲೂಕಿನ ಕಾಚಗೊಂಡನಹಳ್ಳಿ ಗ್ರಾಮದ 49 ದಲಿತ ಕುಟುಂಬದವರಿಗೆ ಪಿಟಿಸಿಎಲ್ ದಾಖಲೆಯಂತೆ ಭೂಮಿ ಮಂಜೂರಾಗಿಲ್ಲವೆAಬ ಆದೇಶದ ಕುರಿತು ಜಂಟಿ ಸರ್ವೇ ನಡೆಸಿ ಶೀಘ್ರದಲ್ಲೇ ವರದಿ ನೀಡಬೇಕು ಎಂದು ತಿಳಿಸಿದ ಅವರು ಸಂತ್ರಸ್ತರಿಗೆ ಶೀಘ್ರವಾಗಿ ಭೂಮಿ ಸಿಗಲು ಅನುವಾಗುವಂತೆ ಈ ಕುರಿತು ಭದ್ರಾವತಿ ತಹಶೀಲ್ದಾರ್ ಮತ್ತು ಎಸಿಯವರೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.
ಭದ್ರಾವತಿಯಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ರತ್ನಮ್ಮ ಎಂಬ ಪೌರಕಾರ್ಮಿಕರಿಗೆ ಹಂಚಿಕೆಯಾದ ಗೃಹದಲ್ಲಿ ಬೇರೆಯವರು ವಾಸಿಸುತ್ತಿದ್ದು, ಇನ್ನು 20 ದಿನಗಳ ಒಳಗೆ ನಗರಸಭೆ ಪೌರಾಯುಕ್ತರು ಕ್ರಮ ವಹಿಸಿ ಅವರನ್ನು ಮನೆ ಖಾಲಿ ಮಾಡಿಸಿ ಫಲಾನುಭವಿಗೆ ನೀಡದಿದ್ದಲ್ಲಿ ಆಯುಕ್ತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.
ಹಾಗೂ ಶಿವಮೊಗ್ಗದ ಬುದ್ದನಗರ ಮತ್ತು ಅಂಬೇಡ್ಕರ್ ನಗರದಲ್ಲಿ ಸ್ಲಂ ಎಂದು ಘೋಷಣೆ ಮಾಡಿರುವ ಪ್ರದೇಶದ ನಿವಾಸಿಗಳಿಗೆ ರಸ್ತೆ ಮತ್ತು ಖಾತೆ ಮಾಡಿಕೊಡುವಂತೆ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಸೂಕ್ತ ಕ್ರಮ ವಹಿಸದ ಕಾರಣ, ನಾಳೆಯೇ ತಹಶೀಲ್ದಾರರು, ಎಡಿಎಲ್‌ಆರ್ ಮತ್ತು ಪಾಲಿಕೆ ಪ್ರತಿನಿಧಿಗಳು ಸದರಿ ಸ್ಥಳ ಪರಿಶೀಲನೆ ಮಾಡಿ 3 ದಿನಗಳ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದರು.
ಸಮಿತಿ ಸದಸ್ಯರಾದ ಬಸವರಾಜ್ ಮಾತನಾಡಿ, ಗ್ರಾಮೀಣ ಭಾಗದ ದೇವಸ್ಥಾನಗಳಲ್ಲಿ ಈಗಲೂ ಎಸ್ ಸಿ, ಎಸ್ ಟಿ ಜನಾಂಗದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತಾರತಮ್ಯ ಮಾಡಲಾಗುತ್ತಿದೆ. ಆದ್ದಂದ ದೇವಸ್ಥಾನಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶವಿರುವ ಬಗ್ಗೆ ನಾಮಫಲಕಗಳನ್ನು ಎಲ್ಲರಿಗೂ ಕಾಣುವಂತೆ ಅಳವಡಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು, ಎಸಿ ಯವರು ಈ ಬಗ್ಗೆ ಪರಿಶೀಲನೆ ನಡೆಸಿ, ಮುಜರಾಯಿ ಇಲಾಖೆಯಿಂದ ನಾಮಫಲಕ ಸಿದ್ದಪಡಿಸಿ ಹಾಕಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಭದ್ರಾವತಿ ತಾಲ್ಲೂಕಿನ ಅರಹಳ್ಳಿ ಗ್ರಾಮದ ಶಾಲಾ ಮುಖ್ಯಸ್ಥೆ ಎಸ್‌ಸಿ ಜನಾಂಗಕ್ಕೆ ಸೇರಿದ್ದು, ಎಸ್‌ಡಿಎಂಸಿ ಸಮಿತಿಯವರು ಅವರನ್ನು ಜಾತಿಯ ಕಾರಣಕ್ಕಾಗಿ ಹಲವಾರು ರೀತಿಯಲ್ಲಿ ತಾರತಮ್ಯ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಕೋರಿದರು. ಹಾಗೂ ಸಂತೇಕಡೂರಿನಲ್ಲಿ ದೇವರು/ಮೌಢ್ಯದ ಹೆಸರಿನಲ್ಲಿ ಜನರಿಂದ ಲಕ್ಷ ಲಕ್ಷ ವಸೂಲಿ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿರುದ್ದ ಕ್ರಮ ವಹಿಸುವಂತೆ ಕೋರಿದರು.
ಜಾತಿ ನಿಂಧನೆ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದವರ, ಸಮಸ್ಯೆಗಳೊಗಾದವರ ಬಗ್ಗೆ ಕಾಳಜಿ ವಹಿಸಬೇಕು. ತೀರ್ಥಹಳ್ಳಿಯ ನಿರ್ಮಲಾ ಎಂಬುವವರಿಗೆ, ಈಶ್ವರ್ ಎಂಬುವವರಿಗೆ ಜಾತಿನಿಂಧನೆ ಪ್ರಕರಣಗಳಲ್ಲಿ ನ್ಯಾಯ ವಿಳಂಬವಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಸದಸ್ಯರಾದ ಶಿವಬಸಪ್ಪ ಮಾತನಾಡಿ, ಡಿಸಿಆರ್‌ಇ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯ ಬಹಳ ವಿಳಂಬವಾಗುತ್ತಿದೆ. ನಗರದಲ್ಲಿ ವ್ಯಾಪಾರ ಮಾಡುತ್ತಿದ್ದ ಎಸ್‌ಸಿ ಯುವಕನೋರ್ವನಿಗೆ ಬೆದರಿಕೆ ಹಾಕಿದ್ದ ಬಗ್ಗೆ ಸೆ.8 ರಂದು ದೂರು ದಾಖಲಿಸಿದ್ದು ಸೆ.30 ಕ್ಕೆ ಎಫ್‌ಐಆರ್ ಆಗಿದೆ ಎಂದು ದೂರಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮಾತನಾಡಿ, ಪ್ರಕರಣ ದಾಖಲಾದ ನಂತರ 15 ದಿನಗಳ ಕಾಲ ಪರಿಶೀಲನಾ ಅವಧಿ ಇರುತ್ತದೆ. ಈ ಅವಧಿಯೊಳಗೇ ಎಫ್‌ಐಆರ್ ದಾಖಲಾಗುತ್ತದೆ. ಇಲ್ಲವಾದಲ್ಲಿ ಹಿಂಬರಹ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಯಡಿ ಡಿಸಿಆರ್‌ಇ ಠಾಣೆಗಳಲ್ಲಿ 23, ಇತರೆ ಠಾಣೆಗಳಲ್ಲಿ 138 ಒಟ್ಟು 161 ಪ್ರಕರಣ ದಾಖಲಾಗಿದ್ದು 73 ಪ್ರಕರಣ ಚಾರ್ಜ್ಶೀಟ್ ಆಗಿದೆ. 26 ಬಿ ರಿಪೋರ್ಟ್ ಆಗಿದೆ. 2026 ರಲ್ಲಿ ದಾಖಲಾದ 123 ಪ್ರಕರಣಗಳಲ್ಲಿ ಪ್ರ.ವ.ವ ಹಂತದಲ್ಲಿ ರೂ.52 ಲಕ್ಷ ಮತ್ತು ಚಾರ್ಜ್ ಶೀಟ್ ಹಂತದಲ್ಲಿ 16 ಲಕ್ಷ ಪರಿಹಾರ ಧನ ಮಂಜೂರು ಮಾಡಲಾಗಿದೆ. ಈ ಪ್ರಕರಣಗಳಲ್ಲಿ ವಿಚಾರಣಾ ಅಧಿಕಾರಿ ಕೂಲಂಕುಷವಾಗಿ ತನಿಖೆ ನಡೆಸುತ್ತಾರೆ. ಈಗ ಐಜಿ ಯವರೇ ಪರಿಶೀಲಿಸಿ ಬಿ ರಿಪೋರ್ಟ್ ನೀಡುತ್ತಾರೆ ಎಂದು ತಿಳಿಸಿದರು.
ಸದಸ್ಯರಾದ ಓಂ ಪ್ರಕಾಶ್ ಮಾತನಾಡಿ, ಸೊರಬ ತಾಲ್ಲೂಕಿನ ಉಳವಿಯಲ್ಲಿ ಎಸ್‌ಸಿ ಎಸ್‌ಟಿ ಜನಾಂಗಕ್ಕೆ ಸ್ಮಶಾನವಿಲ್ಲದೇ ತುಂಬಾ ಸಂಕಷ್ಟವಾಗಿದೆ. ಕಳೆದ ಸಭೆಯಲ್ಲಿ ಸಹ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಈಗಿರುವ ಹಿಂದೂ ರುದ್ರಭೂಮಿ ಸುಮಾರು 3 ಎಕರೆ ಜಾಗದಲ್ಲಿದ್ದರೂ ಮೇಲ್ಜಾತಿಯವರು ಮಾತ್ರ ಅಂತ್ಯ ಸಂಸ್ಕಾರ ಮಾಡುತ್ತಿದ್ದು ಎಸ್‌ಸಿ ಎಸ್‌ಟಿ ಜನಾಂಗದವರಿಗೆ ಅವಕಾಶ ದೊರಕುತ್ತಿಲ್ಲ. ಆದ್ದರಿಂದ ಅದರ ಬಳಿಯೇ ಎರಡೂವರೆ ಎಕರೆ ಸರ್ಕಾರಿ ಬಂಜರು ಭೂಮಿ ಇದ್ದು ಈ ಭೂಮಿಯನ್ನು ಎಸ್‌ಸಿ ಎಸ್‌ಟಿ ಜನಾಂಗದವರಿಗೆ ಸ್ಮಶಾನಕ್ಕಾಗಿ ನೀಡಬೇಕೆಂದು ಕೋರಿದರು.
ಸದಸ್ಯರಾದ ರುದ್ರಪ್ಪನವರು ಈಗಿರುವ ರುದ್ರಭೂಮಿಯಲ್ಲೇ ಅಂತ್ಯಸAಸ್ಕಾರ ಮಾಡಲು ಅವಕಾಶ ಮಾಡಿಕೊಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳು, ಕೂಡಲೇ ತಹಶೀಲ್ದಾರರು ಸ್ಥಳ ಪರಿಶೀಲನೆ ಮಾಡಿ, ಎಸ್‌ಸಿ ಎಸ್‌ಟಿ ಜನಾಂಗದವರಿಗೆ ಸ್ಮಶಾನಕ್ಕೆ ಜಾಗ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸದಸ್ಯರಾದ ಮಂಜುನಾಥ್ ಮಾತನಾಡಿ, ಸೂಗೂರು ಗ್ರಾಮದಲ್ಲಿ 10 ಎಕರೆ ಕರಾಬ್ ಭೂಮಿಯನ್ನು ಬಡವರಿಗೆ ಹಂಚಬೇಕೆAದು ಮಂಜೂರಾಗಿದ್ದ್ದು, ಮನೆ/ಬಂಗಲೆ ಇರುವವರಿಗೇ 50100 ನಿವೇಶನ ನೀಡಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಯವರಿಗೆ 3040 ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕು. ಹಾಗೂ ಭದ್ರಾವತಿಯಲ್ಲಿ ತಮಿಳುನಾಡಿನಿಂದ ವಲಸೆ ಬಂದು, 70 ವರ್ಷದಿಂದ ಇಲ್ಲೇ ವಾಸವಾಗಿರುವ ಭೋವಿ ಜನಾಂಗದ ಕುಟುಂಬಕ್ಕೆ ಮೈಗ್ರೇಷನ್ ಪ್ರಮಾಣ ಪತ್ರ ನೀಡಿಲ್ಲವೆಂದು ಇನ್ನೂ ಜಾತಿ ಪ್ರಮಾಣ ಪತ್ರ ನೀಡಿಲ್ಲ. ಈ ಬಗ್ಗೆ ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳ ಕುರಿತು ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡರು. ಸಂತ್ರಸ್ತರಿಗೆ ಕಾಯ್ದೆಯನ್ವಯ ಸಿಗಬೇಕಾದ ಪರಿಹಾರ ಧನ, ಪುನರ್ವಸತಿ ಸೌಲಭ್ಯ ಹಾಗೂ ಕಾನೂನು ನೆರವು ವಿಳಂಬವಿಲ್ಲದೆ ತಲುಪುವಂತೆ ನೋಡಿಕೊಳ್ಳಲು ಸಂಬAಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಕರಣಗಳ ಶೀಘ್ರ ವಿಲೇವಾರಿ: ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೌರ್ಜನ್ಯ ತಡೆ ಕಾಯ್ದೆಯಡಿಯ ಪ್ರಕರಣಗಳ ತನಿಖೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ನಿರ್ದೇಶಿಸಲಾಯಿತು.
ಸಮಸ್ಯೆಗಳ ಆಲಿಕೆ: ಸಭೆಯಲ್ಲಿದ್ದ ಸಮಿತಿಯ ನಾಮ ನಿರ್ದೇಶಿತ ಸದಸ್ಯರಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಇವನ್ನು ನಿವಾರಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಎಸಿ ಡಾ.ಮೈತ್ರಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಶಿವಬಸಪ್ಪ, ರುದ್ರಪ್ಪ ಹೆಚ್., ಬಸವರಾಜು ಡಿ., ಎಂ. ಮಂಜುನಾಥ್, ನಾಗರಾಜ, ಓಂ ಪ್ರಕಾಶ್ ಬಿ.ಎಂ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...