ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಸುವ ನಾಡಹಬ್ಬ ದಸರಾ-2026ರ ಮಕ್ಕಳ ದಸರಾ ಸಮಿತಿಯು ಅ.02 ರಂದು ಗಾಂಧಿ ಜಯಂತಿ ಪ್ರಯುಕ್ತ ಬೆಳಗ್ಗೆ 8.00 ಗಂಟೆಗೆ ಶಿವಮೂರ್ತಿ ಸರ್ಕಲ್ ನಿಂದ ಡಿ.ವಿ.ಎಸ್. ಶಾಲೆಯ ಮಾರ್ಗವಾಗಿ, ಕೃಷಿ ಇಲಾಖೆ ಕಚೇರಿಯಿಂದ ಓ.ಟಿ.ರಸ್ತೆಯ ಮಾರ್ಗವಾಗಿ, ಮಿಳಘಟ್ಟ ಕಡೆಯಿಂದ ಅಶೋಕವೃತ್ತದ ಮಾರ್ಗವಾಗಿ, ಹೊಳೆ ಬಸ್‌ಸ್ಟಾಪ್ (ಬೆಕ್ಕಿನ ಕಲ್ಮಠ) ರಸ್ತೆಯ ಮಾರ್ಗವಾಗಿ ಹಾಗೂ ಜೈಲ್ ರಸ್ತೆಯಿಂದ ಗೋಪಿ ವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅ. 12 ರಂದು ಬೆಳಗ್ಗೆ 9.00 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಹಾಗೂ ಎನ್.ಇ.ಎಸ್. ಮೈದಾನದಲ್ಲಿ 5 ರಿಂದ 7 ನೇ ತರಗತಿ ಮತ್ತು 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಪ್ರಬಂಧ ಸ್ಪರ್ಧೆ (ಶಿವಮೊಗ್ಗ ದಸರಾ ವೈವಿಧ್ಯತೆ), ದೇಶ ಭಕ್ತಿ ಗೀತೆ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಮತ್ತು ಅ.15 ರಂದು ಸಂಜೆ 5 ಗಂಟೆಗೆ ಶ್ರೀ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂಪಾರ್ಕ್) ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮಕ್ಕಳ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
ಮಕ್ಕಳ ದಸರಾ-2026: ವಿವಿಧ ಕಾರ್ಯಕ್ರಮಗಳ ಆಯೋಜನೆ
Date:
