ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿರುವ ಪವಿತ್ರ ‘ದೀಕ್ಷಾ ಭೂಮಿ’ಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳಿಗೆ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಆಸಕ್ತರಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಭದ್ರಾವತಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿಯನ್ನು ವೆಬ್‌ಸೈಟ್ ಲಿಂಕ್: http://swdservices.karnataka.gov.in/ ಮೂಲಕ ದಿನಾಂಕ: 09.10.2026 ರೊಳಗೆ ಸಲ್ಲಿಸಬೇಕು.
ಆಸಕ್ತ ಅರ್ಹ ಯಾತ್ರಾರ್ಥಿಗಳು ನಿಗದಿತ ದಿನಾಂಕದೊಳಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅವರು ಕೋರಿದ್ದಾರೆ.
ಮಹಾರಾಷ್ಟ್ರದ ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನ
Date:
