Saturday, September 26, 2026
Saturday, September 26, 2026

ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಸೆಪ್ಟೆಂಬರ್ 26 ರಂದು ‘ಪ್ರಜಾಸೇವೆ ಆಂದೋಲನ ಸಭೆ’

Date:

ಸರ್ಕಾರದ ಸುತ್ತೋಲೆಯನ್ವಯ ಶಿವಮೊಗ್ಗ ಜಿಲ್ಲೆಯಾದ್ಯಂತ ದಿನಾಂಕ 26-09-2026 ರಂದು ಹೋಬಳಿ ಮಟ್ಟದಲ್ಲಿ ‘ಪ್ರಜಾಸೇವೆ ಆಂದೋಲನ ಸಭೆ’ಗಳನ್ನು ಆಯೋಜಿಸಲಾಗಿದೆ. ಈ ಕುರಿತು ಶಿವಮೊಗ್ಗ ಹಾಗೂ ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಾರ್ವಜನಿಕರ ಕುಂದುಕೊರತೆಗಳ ದಾಖಲಾತಿ ಮಾಡಿಕೊಂಡು ವರದಿ ಸಲ್ಲಿಸುವ ಉದ್ದೇಶದಿಂದ ಈ ಸಭೆಗಳನ್ನು ಕರೆಡಲಾಗಿದ್ದು, ನಿಗದಿಪಡಿಸಿದ ಸ್ಥಳಗಳಲ್ಲಿ ಅಗತ್ಯ ಪೂರ್ವಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಸಭೆ ನಡೆಯುವ ಸ್ಥಳಗಳ ವಿವರ:
ಶಿವಮೊಗ್ಗ ತಾಲ್ಲೂಕು, ಕಸಬಾ ಹೋಬಳಿ: ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣ
ಭದ್ರಾವತಿ ತಾಲ್ಲೂಕು, ಹೊಳೆಹೊನ್ನೂರು ಹೋಬಳಿ : ಸತ್ಯಧರ್ಮ ಕಲ್ಯಾಣ ಮಂಟಪ, ಹೊಳೆಹೊನ್ನೂರು.
ತೀರ್ಥಹಳ್ಳಿ ತಾಲ್ಲೂಕು ಅಗ್ರಹಾರ ಹೋಬಳಿ: ಗ್ರಾಮ ಪಂಚಾಯಿತಿ ಆವರಣ, ಕೋಣಂದೂರು.
ಶಿಕಾರಿಪುರ ತಾಲ್ಲೂಕು, ತಾಳಗುಂದ ಹೋಬಳಿ : ಗ್ರಾಮ ಪಂಚಾಯಿತಿ ಆವರಣ, ತಾಳಗುಂದ.
ಸೊರಬ ತಾಲ್ಲೂಕು ಉಳವಿ ಹೋಬಳಿ : ಗ್ರಾಮ ಪಂಚಾಯಿತಿ ಆವರಣ, ಉಳವಿ.
ಹೊಸನಗರ ತಾಲ್ಲೂಕು, ಹುಂಚ ಹೋಬಳಿ: ಪದ್ಮಾಂಬ ಪ್ರೌಢಶಾಲೆ ಸಭಾಭವನ, ಹುಂಚ ಇಲ್ಲಿ ಸಭೆಗಳನ್ನು ಆಯೋಜಿಸಲಾಗಿದ್ದು
ಸಾರ್ವಜನಿಕರು ಈ ಸಭೆಗಳ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...