ಸೆ. 17 ರಂದು ಶಿವಮೊಗ್ಗ ಗೋಪಾಳದ ಡಿ.ವಿ.ಜಿ. ಸರ್ಕಲ್ ಬಸ್‌ಸ್ಟ್ಯಾಂಡ್ ಬೆಂಚ್ ಮೇಲೆ ಮಲಗಿದ್ದ ಸುಮಾರು 45 ರಿಂದ 50 ವರ್ಷದ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಮೃತ ಮಹಿಳೆಯ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಸುಳಿವು ಇರುವುದಿಲ್ಲ.
ಮೃತಳು ಸುಮಾರು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಗಾಲಿನ ಪಾದದ ಮೇಲ್ಭಾಗ ಮೊಣಕಾಲಿನ ಕೆಳಭಾಗದಲ್ಲಿ ಬ್ಯಾಂಡೇಜ್ ಹಾಕಲಾಗಿರುತ್ತದೆ. ಮೈಮೇಲೆ ಕಪ್ಪು ಲಂಗ ಹಾಗೂ ಹಸಿರು ಜಾಕೇಟ್ ಇರುತ್ತದೆ.
ಈ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ತಿಳಿಸಿದೆ.
ಅಪರಿಚಿತ ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ
Date:
