Thursday, August 27, 2026
Thursday, August 27, 2026

ಶಿವಮೊಗ್ಗದ ಸಿ.ಜಿ.ಮಧುಸೂದನ್ ಗೆ 11 ಜಿಲ್ಲೆಗಳ ಭಾರತ್ ಜೋಡೋ ಯುವ ಸಂಘಗಳ ಸಂಯೋಜಕರ ಹೊಣೆ

Date:

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಸಂಯೋಜಕರಾಗಿ ಸಿ.ಜಿ. ಮಧುಸೂದನ್ ಅವರನ್ನು ನೇಮಕ ಮಾಡಲಾಗಿದ್ದು, ಭಾರತ ಜೋಡೋ ಯುವ ಸಂಘ ರಚನೆ, ಯುವಕರ ನೋಂದಣಿ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಸೇರಿದಂತೆ ರಾಜ್ಯದ 11 ಜಿಲ್ಲೆಗಳ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಂಘಟನೆಯನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಹಾಗೂ ಸಕ್ರಿಯಗೊಳಿಸುವ ಉದ್ದೇಶದಿಂದ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನಿರ್ದೇಶನದಂತೆ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಅವರ ಅನುಮೋದನೆಯೊಂದಿಗೆ ರಾಜ್ಯ ಸಂಯೋಜಕರ ನೇಮಕ ಮಾಡಲಾಗಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಅವರು 25/08/2026ರಂದು ಹೊರಡಿಸಿರುವ ಆದೇಶದಲ್ಲಿ ನಾಗೇಶ್ ಕರಿಯಪ್ಪ, ಸಿ.ಜಿ. ಮಧುಸೂದನ್ ಹಾಗೂ ಸಿದ್ದು ಹಾಲೇಗೌಡ ಅವರನ್ನು ರಾಜ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಈ ಪೈಕಿ ಸಿ.ಜಿ. ಮಧುಸೂದನ್ ಅವರಿಗೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ರಾಜ್ಯಾದ್ಯಂತ ‘ಭಾರತ ಜೋಡೋ ಯುವ ಸಂಘ’ಗಳನ್ನು ರಚಿಸುವುದು, ಯುವಕರನ್ನು ನೋಂದಾಯಿಸುವುದು ಹಾಗೂ ತಮಗೆ ವಹಿಸಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಸಂಘಟನಾ ಕಾರ್ಯವನ್ನು ಚುರುಕುಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಸಂಯೋಜಕರಿಗೆ ವಹಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯ ಕಾರ್ಯವನ್ನು ಚುರುಕುಗೊಳಿಸಿ ಯುವಕರನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.ನಾಗೇಶ್ ಕರಿಯಪ್ಪ ಅವರಿಗೆ ಮೈಸೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ನಗರ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಕೇಂದ್ರದ ಜವಾಬ್ದಾರಿ ವಹಿಸಲಾಗಿದೆ. ಸಿದ್ದು ಹಾಲೇಗೌಡ ಅವರಿಗೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಹೊಣೆ ನೀಡಲಾಗಿದೆ. ಈ ನೇಮಕಾತಿ ಆದೇಶವನ್ನು ಸಂಬಂಧಪಟ್ಟ ಎಲ್ಲ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ರವಾನಿಸಲಾಗಿದೆ.

ಸಿಜಿ ಮಧುಸೂದನ್ 2010 ನೇ ಸಾಲಿನಿಂದಲೇ ವಿದ್ಯಾರ್ಥಿಯ ಸಂಘಟನೆಯಲ್ಲಿ ಎನ್ಎಸ್ಯುಐನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಸಂಘಟನೆಯಲ್ಲಿ ದುಡಿದಿದ್ದರು. ಎನ್ಎಸ್ಯುಯ ರಾಜ್ಯಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಆನಂತರ ಶಿವಮೊಗ್ಗ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಮಧುಸೂದನ್ರಿಗೆ ಇದೀಗ ರಾಜ್ಯ ಸಂಯೋಜಕ ಹುದ್ದೆಯನ್ನ ನೀಡಿ ಗೌರವಿಸಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

-ಡಾ. ರವಿ ಎಂ. ಸಿದ್ಲಿಪುರ Klive Special Article ಕನ್ನಡ ಸಣ್ಣಕಥಾ ಪರಂಪರೆಯಲ್ಲಿ...

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa “ಮನರಂಜನೆ” ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...