Friday, August 21, 2026
Friday, August 21, 2026

ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಶೇ.90ರಷ್ಟು ಪೂರ್ಣ- ಸಿ.ಎಸ್.ಚಂದ್ರಭೂಪಾಲ್

Date:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಗಳಲ್ಲಿ ಒಂದಾಗಿರುವ ಗೃಹಜೋತಿ ಯೋಜನೆಗೆ ಸಂಬಂಧಿಸಿದಂತೆ
ಅರ್ಹ ಫಲಾನುಭವಿಗಳ ದಾಖಲೆಗಳನ್ನು ಮರು ಪರಿಶೀಲನೆ ಮಾಡುವ ಕಾರ್ಯಾಚ ರಣೆಯಲ್ಲಿ ” ಮೆಸ್ಕಾಂ ” ವಿದ್ಯುತ್ ಇಲಾಖೆ ಸಿಬ್ಬಂದಿಗಳು ಮನೆ-ಮನೆಗಳಿಗೆಭೇಟಿನೀಡಿ ನಿಗದಿತವಾಗಿದ್ದ ಅವಧಿ ಒಳಗೆ ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡ 90 ರಷ್ಟು ಮುಕ್ತಾಯದ ಸಾಧನೆಯನ್ನು ಮಾಡುವುದರ ಮೂಲಕ ಕರ್ತವ್ಯವನ್ನು ಯಾವುದೇ ಗೊಂದಲಗಳು ಇಲ್ಲದೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ. ವಿದ್ಯುಚ್ಛಕ್ತಿ ಸರಬರಾಜು ಇಲಾಖೆಯ ಮೆಸ್ಕಾಂ ವಿಭಾಗದ ಅಧಿಕಾರಿಗಳು ಆಗಸ್ಟ್ 19 ರಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ರವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗಜಿಲ್ಲೆ ಯಲ್ಲಿ ಮರುಪರಿಶೀಲನೆ ಕಾರ್ಯಾಚರಣೆ

ಅನುಷ್ಠಾನಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿ ಸಾಧನೆಯ ಮಾಹಿತಿ ನೀಡಿದರು.
ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ (ವಿ) ಎಂ.ಆರ್.ಜಯದೇವಪ್ಪ ಮತ್ತುಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ (ವಿ) ರವೀಂದ್ರ . ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ (ವಿ) ಸುರೇಶ್ ಹಾಗೂ ಮೆಸ್ಕಾಂ ಲೆಕ್ಕಾಧಿಕಾರಿ ಟಿ.ಸಿ. ರಾಜೇಶ್ ರವರು ಸೇರಿದಂತೆ ಇತರರು ವರದಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು

ಮೆಸ್ಕಾಂ ಅಧಿಕಾರಿಗಳ ಮಾಹಿತಿ ಪ್ರಕಾರ,200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದ ಫಲಾನುಭವಿಗಳ ಗೃಹಗಳ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ 509133 ಮನೆಗಳು ನೊಂದಣಿಯಾಗಿದ್ದು ಈ ಪೈಕಿ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಫಲಾನುಭವಿಗಳು 88814 ಸಂಖ್ಯೆಗಳ ಮನೆಗಳು ಇರುತ್ತವೆ .ಸರ್ವೆ ಕಾರ್ಯವನ್ನು ಪೂರ್ಣಗೊಂಡಿರುವ 420794 ಮನೆಗಳು ಮರುಪರಿಶೀಲನೆಗೆ ಅಳವಡಿಸಲಾಗಿದೆ . ಇನ್ನುಳಿದ ಮನೆಗಳು ಬೀಗ ಹಾಕಿದ್ದ ಖಾಲಿ ಮನೆಗಳು , ಸೋಲಾರ್ ಅಲವಡಿಕೆಯ ಮನೆಗಳು , ಖಾಯಂ ಮೀಟರ್ ರದ್ಧತಿ ಮನೆಗಳು, ಪರಿಶೀಲನೆಗೆ ನಿರಾಕರಿಸಿರುವ ಮನೆಗಳು ಸೇರಿದಂತೆ ವಿವಿಧ ಕಾರಣಗಳು ಇರುವ 47943 ಮನೆಗಳು ಮಾತ್ರ ಬಾಕಿ ಉಳಿದಿರುವ ಈ ಮನೆಗಳಿಗೆ ಭೇಟಿ ನೀಡಿ ಕಾರ್ಯಚರಣೆ ನಡೆಸುವ ಕೆಲಸ ಆಗಸ್ಟ್ ತಿಂಗಳ ಅಂತ್ಯದ ವರೆಗೆ ಮುನ್ನಡೆಯುತ್ತದೆ
ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮರು ಪರಿಶೀಲನೆ ಕಾರ್ಯಾಚರಣೆಯು Mದಿನಾಂಕ‌ 31-08-2026 ರ ಸೋಮವಾರ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಮರು ಪರಿಶೀಲನೆಗೆ ಒಳಪಡಿಸದೇ ಇರುವವರು ತಮ್ಮ ವ್ಯಾಪ್ತಿಯ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ
ಮಾಡಿಸಬಹುದು ಅಥವಾ ಅಗತ್ಯ ದಾಖಲೆ ಗಳನ್ನು ಸಿದ್ಧವಾಗಿಟ್ಟುಕೊಂಡು ತಮ್ಮ ಮನೆ ಬಾಗಿಲ ಮೇಲೆ ಅಂಟಿಸಿರುವ ಮೆಸ್ಕಾಂ ನ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿದರೆ ಅವರೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಮೀಟರ್ ಸಂಖ್ಯೆಯನ್ನು ಮರು ಪರಿಶೀಲನೆಗೆ ಒಳಪಡಿಸುತ್ತಾರೆ. ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಯೋಜನೆಯಸೌಲಭ್ಯ ನಿರಂತರವಾಗಿ ದೊರೆಯುವಂತೆ ಮಾಡಲು ಹಾಗೂ ತಪ್ಪು ಮಾಹಿತಿಯು ಸರಿಪಡಿಸುವ ಉದ್ದೇಶದಿಂದ ವಿದ್ಯುತ್ ಸಂಪರ್ಕ ಮತ್ತು ಇತರ ದಾಖಲೆಗಳು ಪರಿಶೀಲಿಸುವ ಕೆಲಸ

ಕಾರ್ಯಾಚರಣೆ ಪ್ರಕ್ರಿಯೇ ಸುಗಮವಾಗಿ ಮೆಸ್ಕಾಂ ನಡೆಸಿದೆ ಎಂದು ಸಿ.ಎಸ್. ಚಂದ್ರ ಭೂಪಾಲ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...