ಸೌಹಾರ್ದತೆ ಶಾಂತಿ ರಾಷ್ಟ್ರೀಯ ಏಕತೆಗಳ ಮಹತ್ವವನ್ನು ಸಾರುವ ಈ ಸದ್ಭಾವನ ದಿನಾಚರಣೆ ಈಗಿನ ದಿನಕ್ಕೆ ಅತಿ ಅಗತ್ಯವಾಗಿದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಕೌಟ್ ಪ್ರಧಾನಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅಭಿಮತ ವ್ಯಕ್ತಪಡಿಸಿದರು. ಇಂದು ದೇಶ ದೇಶಗಳ ಮಧ್ಯೆ ಯುದ್ಧಗಳು ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವುದರಿಂದ ಸಾಕಷ್ಟು ಸಾವು ನೋವುಗಳು ಉಂಟಾಗುತ್ತಿವೆ ಪ್ರಕೃತಿ ಪರಿಸರ ಹಾಗೂ ವಾತಾವರಣ ಸಂಪೂರ್ಣ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಎಲ್ಲವನ್ನೂ ಮರೆತು ಪರಸ್ಪರರಲ್ಲಿ ಪ್ರೀತಿ ವಿಶ್ವ ಶಾಂತಿ ನೆಲೆಸುವಂತಹ ಕಾರ್ಯದಲ್ಲಿ ಮುಂದಾಗೋಣ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಅವರ ಜನ್ಮದಿನವೂ ಕೂಡ ಹೌದು ಎಂದು ನುಡಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸ್ತಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಈ ದಿನ ರಾಜೀವ್ ಗಾಂಧಿ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಸಹ ಗೌರವಿಸಲಾಗುತ್ತದೆ ಅಲ್ಲದೆ ತಮ್ಮ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ಶ್ರಮಿಸಿದ ಅವರಿಗೆ ಗೌರವ ನೀಡುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿತ್ತು ಎಂದು ನುಡಿದರು . ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಅವರು ಮಾತನಾಡುತ್ತಾ ಜಾತಿ ಧರ್ಮ ಭಾಷೆ ಹೆಸರಿನಲ್ಲಿ ಒಡೆದು ಹೋಗುತ್ತಿರುವ ನಮ್ಮ ದೇಶಕ್ಕೆ ಏಕತೆಯ ತಂದು ಕೊಡುವುದೇ ಈ ಸೌಹಾರ್ದತೆ ಮತ್ತು ಸದ್ಭಾವನೆಗಳು ದೇಶದ ಪ್ರತಿಯೊಬ್ಬ ಪ್ರಜೆಗಳು ಈ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ವಿಶ್ವದಲ್ಲೇ ಒಂದು ಪ್ರಬಲ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ನುಡಿದರು. ಜಿಲ್ಲಾ ಆಯುಕ್ತರಾದ ಕೆ ರವಿಯವರು ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸ್ ಅವರ ದಿನಾಚರಣೆಯ ಮಹತ್ವವನ್ನು ತಿಳಿಸಿದರು ಅವರ ತತ್ವ ಆದರ್ಶ ಗುಣಗಳು ಸಾಧನೆ ಗಳು ಇಂದಿಗೂ ಸಹ ಪ್ರಸ್ತುತವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಕಾನೂರ್. ತರಬೇತಿ ಆಯುಕ್ತರಾದ ಹೆಚ್ ಶಿವಶಂಕರ್. ಕೃಷ್ಣಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
ಯುದ್ಧಗಳಿಂದ ಸಾವುನೋವು. ಈ ನಿಟ್ಟಿನಲ್ಲಿ ನಾವು ಪರಸ್ಪರ ಪ್ರೀತಿ, ವಿಶ್ವಶಾಂತಿ ನೆಲೆಸುವಂತೆ ಕಾರ್ಯ ಮಾಡೋಣ- ಶಕುಂತಲಾ ಚಂದ್ರಶೇಖರ್
Date:
