ಇಂಟರಾಕ್ಟ್ ಕ್ಲಬ್ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಮುದಾಯ ಸಂಪರ್ಕದ ಬಗ್ಗೆ ಕಲಿಸುತ್ತದೆ. ರೋಟರಿ ಸಂಸ್ಥೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಡಿ.ಕೆ. ರವರು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳು ಇವರು ಏರ್ಪಡಿಸಿದ್ದ ಕೊಮ್ಮನಾಳು, ಶಿವಮೊಗ್ಗ ಇಲ್ಲಿ ನಡೆದ 2026-27ನೇ ಸಾಲಿನ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳು ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಭಾಷಣ, ಯೋಜನೆ, ಬಜೆಟ್ ಮತ್ತು ತಂಡ ನಿರ್ವಹಣಾ ಕಾರ್ಯಾಗಾರಗಳ ಸಮುದಾಯ ಸಂಪರ್ಕ ಬಗ್ಗೆ ಕಲಿಸುತ್ತದೆ. ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಆರೋಗ್ಯದಂತಹ ಸ್ಥಳೀಯ ಸಮಸ್ಯೆಗಳ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾದ್ಯಾಯರಾದ ಗುರುರಾಜ್ ಎಂ.ಒ. ರವರು ಇಂಟರಾಕ್ಟ್ ಕ್ಲಬ್ ಮಹತ್ವದ ಬಗ್ಗೆ ವಿವರಿಸುತ್ತಾ ಇದರ ಮುಖಾಂತರ ವಿದ್ಯಾರ್ಥಿಗಳು ನಾಯಕತ್ವ ಕೌಶಲ್ಯಗಳನ್ನು ಬೆಳೆಸಬಹುದು. ಜೊತೆಗೆ ಟೀಂ ವರ್ಕ್ ಕಲಿಯಬಹುದು. ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬಹುದು. ಇದು ವ್ಯಕ್ತಿತ್ವ ನಿರ್ಮಾಣದ ಮಾರ್ಗವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್ ಮಾತನಾಡಿ, ರೋಟರಿಯ ಏಳು ಪ್ರಮುಖ ಕ್ಷೇತ್ರಗಳೆಂದರೆ ಶಾಂತಿಯನ್ನು ಉತ್ತೇಜಿಸುವುದು, ರೋಗಗಳ ವಿರುದ್ಧ ಹೋರಾಡುವುದು, ಶುದ್ಧ ನೀರು ಒದಗಿಸುವುದು, ನೈರ್ಮಲ್ಯ, ತಾಯಂದಿರು ಮತ್ತು ಮಕ್ಕಳನ್ನು ಉಳಿಸುವುದು, ಶಿಕ್ಷಣವನ್ನು ಬೆಂಬಲಿಸುವುದು, ಪರಿಸರವನ್ನು ರಕ್ಷಿಸುವುದು ಎಂದು ರೋಟರಿಯ ಮಹತ್ವವನ್ನು ವಿವರಿಸಿದರು.
ಮತ್ತೋರ್ವ ಅತಿಥಿಯಾದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್.ಮನೋಹರ ಮಾತನಾಡಿ, ರೋಟರಿ ಕ್ಲಬ್ ವಿವಿಧ ಸಾಮಾಜಿಕ ಸಂಪರ್ಕ, ಸಾಕ್ಷರತೆಯನ್ನು ಉತ್ತೇಜಿಸುವುದು, ನೈರ್ಮಲ್ಯ ಮತ್ತು ವೃತ್ತಿ ಸಮಾಲೋಚನೆ ಅವಧಿಗಳು, ಯುವ ವಿನಿಮಯ, ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರಗಳು, ಸಾಮಾಜಿಕ ಪರಿಸರ ಯೋಜನೆಗಳು, ಮರ ನೆಡುವ ಅಭಿಯಾನ ಸೇರಿದಂತೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಇಂಟರಾಕ್ಟ್ ಕ್ಲಬ್ ಗಳು ಮಾಡುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಇತರೆ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್-ಕನ್ನಡ ಡಿಕ್ಷನರಿ, ಪೆನ್, ನೋಟ್ ಬುಕ್ ಗಳನ್ನು ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ವತಿಯಿಂದ ಉಪಸ್ಥಿತ ಪದಾಧಿಕಾರಿಗಳು ವಿತರಿಸಿದರು.
ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳು ಶಾಲೆಯ ಮುಖ್ಯೋಪಾದ್ಯಾಯರಾದ ಗುರುರಾಜ್ ಎಂ.ಒ., ಹಿರಿಯ ಶಿಕ್ಷಕಿ ಇಂದಿರ ಎಸ್.ಪಿ., ರಾಘವೇಂದ್ರ ವಿ.ಟಿ., ಕಿರಣ್ ಎಚ್., ವೀಣಾ ಎಸ್, ಗಿರಿಧರ್ ಸಿ.ಪಿ., ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಪ್ರಿಯ, ಕಾರ್ಯದರ್ಶಿ ಹೇಮಂತ್, ಉಪಾಧ್ಯಕ್ಷೆ ಪಲ್ಲವಿ, ಇತರೆ ಸದಸ್ಯರುಗಳು, ಪದಾಧಿಕಾರಿಗಳು, ಶಾಲಾ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
