Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ಹಾಗೂ ಶಿವಗಂಗಾ ಯೋಗ ಕೇಂದ್ರ ಸಂಸ್ಥೆಗಳ ವತಿಯಿಂದ “ಮನೆ ಮನೆಗಳಲ್ಲಿ ಶ್ರಾವಣ ಚಿಂತನ-2026” ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಅರ್ಥಪೂರ್ಣವಾಗಿ ರಿವರ್ಸ್ ಸೈಡ್ ಭವನ ಕೃಷಿ ನಗರ ಇಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಘನ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡಿ, ಶ್ರಾವಣ ಚಿಂತನ ಕಾರ್ಯಕ್ರಮಗಳು ಮನೆಮನಗಳನ್ನು ಬೆಳಗುತ್ತವೆ. ಆಧ್ಯಾತ್ಮಿಕ ಭಾವನೆಗಳ ಜೊತೆಗೆ ಉತ್ತಮ ಸಂಸ್ಕಾರವನ್ನು ಸಹ ದೊರಕಿಸುತ್ತವೆ. ಜೀವನದ ಮೌಲ್ಯಗಳನ್ನು ಈ ಶ್ರಾವಣ ಚಿಂತನ ಮೂಡಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಕೆ.ಚಂದ್ರಪ್ಪನವರು ಮಾತನಾಡಿ, 49 ವರ್ಷಗಳಿಂದ ಬೆಕ್ಕಿನ ಕಲ್ಮಠದ ಮುಖಾಂತರ ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಶ್ರಾವಣ ಚಿಂತನದಿಂದ ಪ್ರತಿಯೊಂದು ಮನೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ವಚನಗಳು ನಮ್ಮ ಬಾಳಿಗೆ ಬೆಳಕಾಗುವ ಜೊತೆಗೆ ಇಂದಿಗೂ ಸಹ ಪ್ರಸ್ತುತವಾಗಿವೆ. ಮಾತಿನ ಮೌಲ್ಯಗಳು ನಮ್ಮ ಬದುಕನ್ನು ಬದಲಾಯಿಸುತ್ತವೆ. ಪ್ರತಿಯೊಂದು ಹಂತದಲ್ಲೂ ಒಳ್ಳೆಯ ಮಾತು ನಮ್ಮ ಜೀವನದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.
Rotary Club of Shivamogga ರೋಟರಿ ಕ್ಲಬ್ ರಿವರ್ಸ್ ಸೈಡ್ ನ ಅಧ್ಯಕ್ಷರಾದ ರೋ. ರವಿ ಮೂಡುಬಾಗಿಲು, ಕಾರ್ಯದರ್ಶಿ ರೋ. ನಟರಾಜ ಎಸ್.ಪಿ., ಸದಸ್ಯರಾದ ಎಂ.ಪಿ. ಆನಂದಮೂರ್ತಿ, ವಿಜಯಕುಮಾರ್ ಹಾಗೂ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರು, ಕಾರ್ಯದರ್ಶಿ ಚಂದ್ರಶೇಖರ್ ದಂಪತಿಗಳು ಮತ್ತಿತರು ಉಪಸ್ಥಿತರಿದ್ದರು.
