Friday, September 11, 2026
Friday, September 11, 2026

ಹವಾಮಾನ ವೈಪರೀತ್ಯ,ಆರೋಗ್ಯದಲ್ಲಿ ಏರುಪೇರು ಕಾರಣ ಎಲ್ಲರಿಗೂ ವಿಮೆಯ ಅಗತ್ಯವಿದೆ- ಉಪೇಂದ್ರ ಕುಮಾರ್ ನಾಯಕ್

Date:

ಪ್ರಸ್ತುತ ದಿನಮಾನಗಳಲ್ಲಿ ಹವಾಮಾನದ ವೈಪರೀತ್ಯದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಹಜವಾಗಿದೆ. ಆದ ಕಾರಣ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆಯ ಅವಶ್ಯಕತೆ ಇದೆ ಎಂದು ಗ್ಯಾಲಕ್ಸಿ ಹೆಲ್ತ್ ಇನ್ಶೂರೆನ್ಸ್ ಕಂ ಲಿಮಿಟೆಡ್ ಝೋನಲ್ ಹೆಡ್ ಉಪೇಂದ್ರ ಕುಮಾರ್ ನಾಯಕ್ ತಿಳಿಸಿದರು.

ಶಿವಮೊಗ್ಗ ನಗರದ ರೋಟರಿ ಈಸ್ಟ್ ಶಾಲೆ ರಾಜೇಂದ್ರ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ “ಅರೋಗ್ಯ ಮತ್ತು ವಿಮೆ” ಎಂಬ ವಿಷಯದ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ರೋಟರಿ ಸದಸ್ಯರುಗಳನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಹಕರ ರಕ್ಷಣೆಯನ್ನು ಗರಿಷ್ಠಗೊಳಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆರೋಗ್ಯ ವಿಮೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು.

ಅತ್ಯುತ್ತಮ ಆರೋಗ್ಯ ವಿಮಾ ರಕ್ಷಣೆಯನ್ನು ಆಯ್ಕೆ ಮಾಡಲು, ನಿಮ್ಮ ಪ್ರಸ್ತುತ ಆರೋಗ್ಯ ಸ್ಥಿತಿ, ವೈದ್ಯಕೀಯ ಇತಿಹಾಸ ಮತ್ತು ನಿರೀಕ್ಷಿತ ವೈದ್ಯಕೀಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ, ನಿಮ್ಮ ಆರೋಗ್ಯ ರಕ್ಷಣಾ ಅಗತ್ಯಗಳನ್ನು ಮೌಲ್ಯಮಾಪನ ಮಾಡಿ ಪಾಲಿಸಿ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಿ. ವಿಮಾ ಪೂರೈಕೆದಾರರನ್ನು ಸಂಶೋಧಿಸಿ, ವೃತ್ತಿಪರ ಮಾರ್ಗದರ್ಶನವನ್ನು ಪರಿಗಣಿಸಿ ಮತ್ತು ಅತ್ಯುತ್ತಮ ಆರೋಗ್ಯ ವಿಮಾ ಕಂಪನಿಯನ್ನು ಹುಡುಕಿ. ಯೋಜನೆಯ ಗುಣಲಕ್ಷಣಗಳು ಮತ್ತು ಪ್ರಯೋಜನಗಳನ್ನು ಪರೀಕ್ಷಿಸಿ. ನಿಮ್ಮ ಆರೋಗ್ಯ ವಿಮಾ ರಕ್ಷಣೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ. ಸರಿಯಾದ ಆರೋಗ್ಯ ವಿಮಾ ಯೋಜನೆಯನ್ನು ಆಯ್ಕೆ ಮಾಡುವುದು ಅತ್ಯಗತ್ಯ ಎಂಬುದನ್ನು ಯಾವಾಗಲೂ ನೆನಪಿಡಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ರವರು, ಆರೋಗ್ಯ ವಿಮೆಯು ನಿಮ್ಮ ವೈಯಕ್ತಿಕ ಉಳಿತಾಯವನ್ನು ಹೆಚ್ಚಿನ ವೈದ್ಯಕೀಯ ವೆಚ್ಚಗಳಿಂದ ರಕ್ಷಿಸುತ್ತದೆ. ಆರೋಗ್ಯ ವಿಮೆಯ ಪ್ರಮುಖ ಅನುಕೂಲಗಳೆಂದರೆ ಅರ್ಹ ವೈದ್ಯಕೀಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ, ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಆರೋಗ್ಯ ವಿಮೆಯು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ರಕ್ಷಣೆ ನೀಡುವ ಮೂಲಕ ಮನಸ್ಸಿನ ಶಾಂತಿಯನ್ನು ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್.ಮನೋಹರ, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ.ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಎಚ್.ಬಿ., ಗಣೇಶ್.ಎಸ್, ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಎಚ್.ಎಂ ಮಧು, ಕೃಷ್ಣಮೂರ್ತಿ, ಬಿ.ಸತೀಶ್ ಚಂದ್ರ, ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್ ಧನಂಜಯ್, ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್ , ಸಂಜೀವ್ ಎಸ್.ಎನ್, ಅಜಿತ್ ಎಚ್.ಎಸ್, ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಹೊಸ ಸದಸ್ಯ ಗುರುಮೂರ್ತಿ ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಆನ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...