Tuesday, October 20, 2026
Tuesday, October 20, 2026

ಸಾಹಿತಿ ಬಿ.ಎನ್.ಜ್ವಾಲನಪ್ಪ ಅವರಿಗೆ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಪುರಸ್ಕಾರ

Date:

ನರಸಿಂಹರಾಜಪುರದ ಅತಿಶಯ ಕ್ಷೇತ್ರ ಶ್ರೀ ಸಿಂಹನಗದ್ದೆ ಕುರಿತಾಗಿ ‘ನಿರಂಜನ ಲಹರಿ’ ವತಿಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ–20ರ ಫಲಿತಾಂಶ ಪ್ರಕಟಗೊಂಡಿದೆ.

‘ಅತಿಶಯ ಕ್ಷೇತ್ರ ಶ್ರೀ ಸಿಂಹನಗದ್ದೆ, ನರಸಿಂಹರಾಜಪುರ ವಿಷಯದ ಮೇಲೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಂಪದ ಎನ್. ಅವರು ಪಡೆದುಕೊಂಡಿದ್ದಾರೆ. ಕಡಬ ತಾಲ್ಲೂಕಿನ ನೆಲ್ಯಾಡಿಯ ಸಂಪದ ಎನ್. ಅವರು ‘ರತ್ನತ್ರಯ’ ವಿಳಾಸದ ನಿವಾಸಿಯಾಗಿದ್ದಾರೆ.

ದ್ವಿತೀಯ ಬಹುಮಾನವನ್ನು ಮೈಸೂರಿನ ಬಿ.ಎನ್. ಜ್ವಾಲನಪ್ಪಅವರು ಪಡೆದುಕೊಂಡಿದ್ದಾರೆ. ವಿಜಯನಗರ 2ನೇ ಹಂತದ ‘ಪರ್ವ’ ನಿವಾಸಿಯಾಗಿರುವ ಜ್ವಾಲನಪ್ಪ ಅವರು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ತೃತೀಯ ಬಹುಮಾನವನ್ನು ಮೈಸೂರಿನ ಅಭಿನಂದನ್ ಕುಮಾರ್ ಪಿ. ಅವರು ಪಡೆದುಕೊಂಡಿದ್ದಾರೆ. ವಿಜಯನಗರ 2ನೇ ಹಂತದ ‘ಶ್ರೀ ಸಾನಿಧ್ಯ’ ನಿವಾಸಿಯಾಗಿರುವ ಅಭಿನಂದನ್ ಕುಮಾರ್ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ಇನ್ನು ಸಮಾಧಾನಕರ ಬಹುಮಾನಕ್ಕೆ ಐದು ಮಂದಿ ಆಯ್ಕೆಯಾಗಿದ್ದಾರೆ. ಕಾರ್ಕಳದ ಪ್ರಾಂಜಲಿ ಜೈನ್ ಹುಬ್ಬಳ್ಳಿಯ ನಂದಿನಿ ಮಹಿಪಾಲ ಗೋಟುರಿ ಬೆಂಗಳೂರಿನ ಬಿ. ಜಯಲಕ್ಷ್ಮಿ ಜ್ವಾಲಕುಮಾರ್, ಕೊಪ್ಪಳ ಜಿಲ್ಲೆಯ ಹುಲಗಿಯ ಶೃತಿ ಸನ್ಮತಿ ಇಜಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸಮ್ಯಕ್ ಜೈನ್ ಕಡಬ ಅವರು ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀ ಸಿಂಹನಗದ್ದೆ ಕ್ಷೇತ್ರದ ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಪ್ರಬಂಧ ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ‘ನಿರಂಜನ ಲಹರಿ’ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...