Friday, September 11, 2026
Friday, September 11, 2026

ಶಿವಮೊಗ್ಗ ಕಾಟನ್ ಜಾವಾ ವರ್ಲ್ಡ್ ಮಳಿಗೆಯಲ್ಲಿ ಸ್ವಾತಂತ್ರ್ಯೋತ್ಸವ

Date:

80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಪ್ರಖ್ಯಾತ ಬಟ್ಟೆ ಅಂಗಡಿ ಕಾಟನ್ ಜಾವ ವರ್ಲ್ಡ್ ಉದ್ಯಮದಲ್ಲಿ ವಿಜೃಂಭಣೆಯಿಂದ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ, ಯೋಗ ಶಿಕ್ಷಕರಾದ ವಿಜಯ ಕೃಷ್ಣ, ಹರೀಶ್ ಸರ್, ಅಯೋಗ್ಯ 2 ಚಿತ್ರದಲ್ಲಿ ಅಭಿನಯಿಸಿರುವ ಶಿವಮೊಗ್ಗದ ಶ್ವೇತಾ ಕೆ.ಎಸ್. ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರಾದ ರಮೇಶ್ ಹಾಗೂ ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಟನ್ ಜಾವ ವರ್ಲ್ಡ್ ಮಾಲೀಕರಾದ ಕಾಟನ್ ಜಗದೀಶ್ ರವರು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದಂತಹ ಪ್ರತಿಯೊಬ್ಬರನ್ನ ನೆನೆಯುವಂತಹ ದಿನ ಇದಾಗಿದೆ. ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಹೆಮ್ಮೆ ಪಡುವಂತಹ ದಿನ. ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದಿವೆ. ಇಂದು ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದಲ್ಲಿಯೇ ಅತ್ಯಂತ ಮುಂದುವರಿದ ದೇಶಗಳಲ್ಲಿ ಭಾರತ ದೇಶವು ಒಂದಾಗಿದೆ. ಕೈಗಾರಿಕಾ ಕ್ಷೇತ್ರ, ಸಾರಿಗೆ, ನೀರಾವರಿ, ಕೃಷಿ ಕ್ಷೇತ್ರ, ರೈಲ್ವೆ, ವಿಮಾನಯಾನ, ರಕ್ಷಣಾ ಕ್ಷೇತ್ರ, ಮಿಲಿಟರಿ, ಸಾಫ್ಟ್ ವೇರ್ ಉದ್ಯಮ, ಕ್ರೀಡೆ ಹೀಗೆ ನಾನಾವಿಧದ ಕ್ಷೇತ್ರಗಳಲ್ಲಿ ಭಾರತ ಮುಂಚುಣಿಯಲ್ಲಿದೆ.
ಪ್ರಪಂಚದ ಭೂಪಟದಲ್ಲಿ ಭಾರತವನ್ನ ನೋಡುವ ದೃಷ್ಟಿಯೇ ಬದಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿಯವರು ಮಾತನಾಡಿ, ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುವುದರ ಜೊತೆಗೆ ಅವರ ಆದರ್ಶವನ್ನು ಪಾಲಿಸಬೇಕು. ಅದರ ಜೊತೆಗೆ ಸ್ವಚ್ಛ ಸುಂದರ ಭಾರತವನ್ನು ಮಾಡಲು ಪ್ರತಿಯೊಬ್ಬರು ಪರಿಶ್ರಮಿಸಬೇಕು. ಪರಿಸರವನ್ನ ಉಳಿಸಿ ಬೆಳೆಸುವಂತಹ ಕಾರ್ಯಗಳು ಹೆಚ್ಚು ಹೆಚ್ಚು ಆಗಬೇಕು ಎಂದು ನುಡಿದರು.

ಶ್ರೀಮತಿ ವಸುಂದರಾ ಜಗದೀಶ್, ಉದಯ್ ಕಡಂಬ, ವಿಜಯಲಕ್ಷ್ಮಿ, ಎಲೆಕ್ಟ್ರಿಷಿಯನ್ ರಾಜು, ನವೀನ, ಪುಷ್ಪ , ಆಶಾ, ಕವಿತಾ, ಮೇಘನಾ, ನೇತ್ರ, ಕಾಟನ್ ಜಾವ ವರ್ಲ್ಡ್ ಹಾಗೂ ಕಾಟನ್ ಫ್ಯಾಶನ್ ಪೀಪಲ್ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಟನ್ ಜಾವ ವರ್ಲ್ಡ್ ಗೆ ಆಗಮಿಸಿದ ಎಲ್ಲಾ ಗ್ರಾಹಕರಿಗೂ ಸಿಹಿಯನ್ನು ಹಂಚಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಕಾಟನ್ ಜಾವಾ ವರ್ಲ್ಡ್ ನಲ್ಲಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...