Friday, September 11, 2026
Friday, September 11, 2026

ಶಾಂತಿ,ನೆಮ್ಮದಿ ,ತೃಪ್ತಿಯು ಸೇವಾ ಮನೋಭಾವನೆಯಲ್ಲಿ ಸಿಗುತ್ತದೆ- ಆರ್.ಕೆ.ಸಿದ್ಧರಾಮಣ್ಣ

Date:

ರೊಟೇರಿಯನ್ಸ್ ಗಳ ಸೇವೆಯಲ್ಲಿ ಸಾಮಾಜಿಕ ಸಾಮರಸ್ಯ ಇದೆ, ಸಂಘರ್ಷ ಇಲ್ಲವೇ ಇಲ್ಲ. ರೊಟೇರಿಯನ್ಸ್ ಗಳ ಸೇವಾ ಮನೋಭಾವನೆ ಸದಾ ಸ್ಮರಣೀಯ, ಅದು ಅನುಕರಣೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಆರ್.ಕೆ.ಸಿದ್ಧರಾಮಣ್ಣ ತಿಳಿಸಿದರು.

ನಗರದ ರೋಟರಿ ಈಸ್ಟ್ ಶಾಲೆ ರಾಜೇಂದ್ರ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ “ಸೇವಾಭಾವವೇ ಸಂಸ್ಕಾರ” ಎಂಬ ವಿಷಯದ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ನೆರಿದಿದ್ದ ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಂತಿ, ನೆಮ್ಮದಿ, ತೃಪ್ತಿಯು ಸೇವಾ ಮನೋಭಾವನೆಯಲ್ಲಿ ಸಿಗುತ್ತದೆ. ಸೇವೆ ಎನ್ನುವುದು ಸ್ವಾಭಾವಿಕವಾಗಿ ಇರುವಂತದ್ದು, ಅದು ಪ್ರತಿಯೊಬ್ಬರಲ್ಲೂ ಸಹ ಇರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಭ್ರಷ್ಟಾಚಾರ ಇಲ್ಲದ ಜಾಗವೇ ಇಲ್ಲ ಎನ್ನುವಂತಾಗಿದೆ. ತಂತ್ರಜ್ಞಾನ ಬೆಳೆದು ಬಂದ ಬಗ್ಗೆ ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕುಟುಂಬ, ಪರಿಸರ ಸೇವೆ ಅವಶ್ಯಕತೆ ಇದೆ. ಸಮಾನತೆ ಸಹೋದರತೆ ಸಾಂಸ್ಕೃತಿಕ ಅವಶ್ಯಕತೆ ಇದೆ. ರೋಟರಿಯಲ್ಲಿನ ಸೇವಾ ಸಂಸ್ಕೃತಿಯು, ಸಾಮೂಹಿಕ ಕ್ರಿಯೆ ಮತ್ತು ನೈತಿಕ ವೃತ್ತಿಪರ ಮಾನದಂಡದ ಮೂಲಕ ಸ್ಥಳೀಯ ಮತ್ತು ಜಾಗತಿಕ ಸಮುದಾಯದ ಅಗತ್ಯಗಳನ್ನು ಪೂರೈಸಲು ಸದಸ್ಯರನ್ನು ಪ್ರೇರೇಪಿಸುತ್ತದೆ. ಸದಸ್ಯರ ತೊಡಗಿಸಿಕೊಳ್ಳುವಿಕೆ ಮತ್ತು ಸಕಾರಾತ್ಮಕ, ಒಳಗೊಳ್ಳುವ ಸ್ವಾಗತಾರ್ಹ ಸಾಪ್ತಾಹಿಕ ಕ್ಲಬ್ ಸಂಸ್ಕೃತಿಯನ್ನು ರೋಟರಿ ಅತ್ಯಗತ್ಯವೆಂದು ಗುರುತಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ರವರು, ಸೇವಾ ಸಂಸ್ಕಾರ ಒಂದು ಸಾಂಸ್ಥಿಕ ಪರಿಸರವಾಗಿದ್ದು, ಅಲ್ಲಿ ಇಡೀ ರೋಟರಿ ಕ್ಲಬ್ ಮೌಲ್ಯಗಳು, ನಂಬಿಕೆಗಳು ಮತ್ತು ನಡವಳಿಕೆಗಳು ಸದಸ್ಯರಿಗೆ ಅಸಾಧಾರಣ ಮೌಲ್ಯ ಮತ್ತು ತೃಪ್ತಿಯನ್ನು ತಲುಪಿಸುವುದರ ಮೇಲೆ ಕೇಂದ್ರೀಕರಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಸಂದಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ.ವಿಜಯ್ ಕುಮಾರ್, ಝೋನಲ್ ಲೆಫ್ಟಿನೆಂಟ್ಸ್ ಮಹೇಶ್ ಆಲೆಮನೆ, ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಹೆಚ್.ಬಿ., ಗಣೇಶ್.ಎಸ್., ಶ್ರೀಕಾಂತ್ ಎನ್.ಹೆಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಸುಮತಿ ಕುಮಾರಸ್ವಾಮಿ, ಕೃಷ್ಣಮೂರ್ತಿ, ಬಿ.ಸತೀಶ್ ಚಂದ್ರ, ಸಂತೋಷಕುಮಾರ್ ಬಿ.ಎನ್., ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್.ಧನಂಜಯ್ , ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಜಗದೀಶ್, ರವಿಶಂಕರ್.ಡಿ.ಎಸ್., ಸಂಜೀವ್ ಎಸ್.ಎನ್., ಅಜಿತ್ ಹೆಚ್.ಎಸ್, ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಹೊಸ ಸದಸ್ಯರಾದ ಗುರುಮೂರ್ತಿ ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...