ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಗರ ಚರ್ಚ್ ರಸ್ತೆಯ ವಾಸಿ ತಾಸಿನುಲ್ಲಾ ಎಂಬ 28 ವರ್ಷ ಯುವಕ ಜೂ. 25 ರಿಂದ ಕಾಣೆಯಾಗಿದ್ದಾರೆ. ಈ ವ್ಯಕ್ತಿಯು 4.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಮತ್ತು ಕಪ್ಪು ಬಣ್ಣದ ಚೌಕಳಿಯ ತುಂಬು ತೋಲಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ದೊರೆತಲ್ಲಿ ಹೊಸನಗರ ಪೊಲೀಸ್ ಠಾಣೆ ದೂ.ಸಂ.9480803337, ತೀರ್ಥಹಳ್ಳಿ ಪೊಲೀಸ್ ಠಾಣೆ ದೂ.ಸಂ.: 08181-220388, ಶಿವಮೊಗ್ಗ ಎಸ್ಪಿ ಕಚೇರಿ ದೂ.ಸಂ.: 08182-261400 / 9480803364 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.
ಹೊಸನಗರದಿಂದ ವ್ಯಕ್ತಿ ನಾಪತ್ತೆ: ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ
Date:
