Tuesday, July 21, 2026
Tuesday, July 21, 2026

ಎಸ್.ಜಾನಕಿ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ-ಮಲ್ಲಿಕಾರ್ಜುನ ಕಾನೂರ್

Date:

ಹಿನ್ನೆಲೆ ಗಾಯಕಿ ಹಾಗೂ ಬಹು ಭಾಷಾ ಗಾಯಕಿಯಾದ ಎಸ್.ಜಾನಕಿ ರವರು ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ, ಯಾವುದು ಸಹ ಶಾಶ್ವತವಲ್ಲ ಬದುಕಿದಾಗ ಒಳ್ಳೆಯ ಕೆಲಸ ಮಾಡುವುದು ಎಷ್ಟು ಮುಖ್ಯ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ ಎಂದು ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಹೇಳಿದರು.

ಭಾನುವಾರ ಸಂಜೆ ಫ್ರೆಂಡ್ಸ್ ಸೆಂಟರ್ ಗೋಪಾಳದಲ್ಲಿ ನಡೆದ ದಿ. ಎಸ್.ಜಾನಕಿ ಯವರ ಭಾವಪೂರ್ಣ ಶ್ರದ್ದಾoಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಧದ ಗುಡಿ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯತೆ “ಎಲ್ಲೂ ಹೋಗೋಲ್ಲ ಮಾಮ, ಎಲ್ಲೂ ಹೋಗೋಲ್ಲ” ಎಂದು ಹಾಡುವ ಧಾಟಿ, ಡಾಕ್ಟರ್ ರಾಜಕುಮಾರ್ ಮೊದಲ ಚಿತ್ರ ಪ್ರೇಮದ ಕಾಣಿಕೆ, ದಕ್ಷಿಣ ಭಾರತದ ಕೋಗಿಲೆ ಎಂದು ಹಲವು ಗೌರವಗಳನ್ನು ತಂದುಕೊಟ್ಟಿದೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ 48000 ಇವರ ಗಾಯನಕ್ಕೆ 4 ರಾಷ್ಟ್ರ ಪ್ರಶಸ್ತಿಗಳು, 30 ರಾಜ್ಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ದೊರಕಿದೆ. ಜಾನಕಮ್ಮ ಅವರ ಅಗಲಿಕೆ ನಮ್ಮ ರಾಜ್ಯ ಹಾಗೂ ದೇಶದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪೂರ್ವಧ್ಯಕ್ಷರಾದ ವಿ.ನಾಗರಾಜ್ ರವರು ನುಡಿ ನಮನ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಸದಸ್ಯರು ಅವರು ಹಾಡಿದ ಗೀತೆಗಳನ್ನು ಹೇಳುವ ಮೂಲಕ ಮತ್ತು ಮೌನಚಾರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾoಜಲಿ ಸಲ್ಲಿಸಲಾಯಿತು.

ಕಾರ್ಯದರ್ಶಿ ರಮೇಶ್ ಬಾಬು ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕುಮಾರ್ ರವರು ಎಲ್ಲರನ್ನು ವಂದಿಸಿದರು, ರಂಜನಿ ದತ್ತಾತ್ರಿ ನಿರೂಪಿಸಿದರು. ಖಜಾಂಚಿ ಉಮಾ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷಿಣಿ ಸುನೀತ ಚೇತನ್, ಜಿ.ವಿಜಯಕುಮಾರ್, ಸತ್ಯನಾರಾಯಣ.ಜಿ.,ರವೀಂದ್ರನಾಥ್ ಐತಾಳ್, ಪಂಚಾಕ್ಷರಯ್ಯ ಹಿರೇಮಠ್, ಟಿ.ಎಲ್.ಸುರೇಶ್,
ರಾಜೇಶ್.ಆರ್., ರೂಪ ರವಿ ಮೂಡಬಾಗಿಲು, ಸಂದ್ಯಾ ಸತ್ಯನಾರಾಯಣ, ವೀಣಾ ಗುರುನಾಥ್, ಶ್ರೀನಿವಾಸ್ ಕಾಮತ್, ಮನೋಹರ್, ಅನಿತಾ ಸುರೇಂದ್ರ ಕಾಸಲ, ಬಿಂದು ವಿಜಯಕುಮಾರ್, ಉಷ ರಮೇಶ್, ಸುವರ್ಣ ವಿಜಯ ಕುಮಾರ್, ಲಕ್ಷ್ಮೀ ಸತ್ಯನಾರಾಯಣ, ಸುನಂದಾ ವೆಂಕಟೇಶ್, ರಜನಿ ಅಶೋಕ್, ಉಮೇಶ್ ಹಿರೇಮಠ್, ವಿರೂಪಾಕ್ಷ ಲತಾ ಶಂಕರ್, ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...

Rotary Club of Shivamogga ಮಹಿಳಾ ಉದ್ಯಮಿಗಳೆ, ನಿಮ್ಮ ಕನಸುಗಳನ್ನ ಆತ್ಮ ವಿಶ್ವಾಸದಿಂದ ಹಂಚಿಕೊಳ್ಳಿ : ಎನ್.ಗೋಪಿನಾಥ್

Rotary Club of Shivamogga ಆತ್ಮವಿಶ್ವಾಸದಿಂದ ಕನಸುಗಳನ್ನು ಹಂಚಿಕೊಳ್ಳಿ ಎಂದು ರೋಟರಿ...