ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಿಳಕಿ ಹತ್ತಿರದ ಟೆಂಕೋಲ್ ಬಸ್ ನಿಲ್ದಾಣದ ಬಳಿ ದಿನಾಂಕ 05.07.2026 ರಂದು ಸುಮಾರು 10 ರಿಂದ 11 ದಿನದ ಅನಾಥ ಹೆಣ್ಣು ಮಗುವೊಂದು ಪತ್ತೆಯಾಗಿದೆ.
ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾಧಿಕಾರಿಗಳು ಮಗುವನ್ನು ರಕ್ಷಿಸಿ, ದಿನಾಂಕ 06.07.2026 ರಂದು ಪೋಷಕರ ಪತ್ತೆಗಾಗಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಗುವಿನ ಮುಂದಿನ ಪುನರ್ವಸತಿ ಮತ್ತು ಹಿತದೃಷ್ಟಿಯಿಂದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಪಡೆಯಲಾಗಿದೆ.
ಮಗುವಿನ ಮುಂದಿನ ಪುನರ್ವಸತಿ ಮತ್ತು ಹಿತದೃಷ್ಟಿಯಿಂದ, ಈ ಮಗುವಿನ ಪೋಷಕರು ಅಥವಾ ಸಂಬಂಧಿಕರು ಯಾರಾದರೂ ಇದ್ದಲ್ಲಿ, ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಛೇರಿ.
ದೂರವಾಣಿ ಸಂಖ್ಯೆ: 0182-295511 ಇವರನ್ನು ಸಂಪರ್ಕಿಸಬಹುದೆಂದು
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ರಿಪ್ಪನ್ ಪೇಟೆಯ ಬಿಳಕಿ ಬಳಿ ಅನಾಥ ಹೆಣ್ಣು ಮಗು ಪತ್ತೆ. ಪ್ರಕರಣ ದಾಖಲು
Date:
