Wednesday, September 9, 2026
Wednesday, September 9, 2026

ಪಟ್ರೋಲ್, ಡಿಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಭಟನೆ

Date:

ಶಿವಮೊಗ್ಗದಲ್ಲಿ ಮತ್ತೆ ಇಂಧನ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಸಾಮಾನ್ಯ ಪೆಟ್ರೋಲ್ ಹಾಗೂ ಪವರ್ ಪೆಟ್ರೋಲ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಮತ್ತೊಂದೆಡೆ ಸಾಮಾನ್ಯ ಡೀಸೆಲ್ ದರದಲ್ಲಿ ಅಲ್ಪ ಇಳಿಕೆ ದಾಖಲಾಗಿದೆ. ಇಂದಿನ ಹೊಸ ದರಗಳ ವಿವರ ಇಲ್ಲಿದೆ.

ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 95 ಪೈಸೆ ಏರಿಕೆಯಾಗಿದೆ. ನಿನ್ನೆ 107 ರೂಪಾಯಿ 11 ಪೈಸೆ ಇದ್ದ ಪೆಟ್ರೋಲ್ ದರ, ಇಂದು 108 ರೂಪಾಯಿ 6 ಪೈಸೆಗೆ ತಲುಪಿದೆ.

ಇನ್ನು ಪ್ರೀಮಿಯಂ ಆವೃತ್ತಿಯಾದ ಪವರ್ ಪೆಟ್ರೋಲ್ ದರದಲ್ಲೂ 94 ಪೈಸೆ ಏರಿಕೆ ಕಂಡುಬಂದಿದೆ. ನಿನ್ನೆ 117 ರೂಪಾಯಿ 5 ಪೈಸೆ ಇದ್ದ ದರ, ಇಂದು 117 ರೂಪಾಯಿ 99 ಪೈಸೆಗೆ ಏರಿಕೆಯಾಗಿದೆ.

ಮತ್ತೊಂದೆಡೆ ಸಾಮಾನ್ಯ ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ. ಪ್ರತಿ ಲೀಟರ್‌ಗೆ 6 ಪೈಸೆ ಇಳಿಕೆಯಾಗಿದ್ದು, ನಿನ್ನೆ 95 ರೂಪಾಯಿ 18 ಪೈಸೆ ಇದ್ದ ಡೀಸೆಲ್ ದರ ಇಂದು 95 ರೂಪಾಯಿ 12 ಪೈಸೆಯಾಗಿದೆ.

ಆದರೆ ಟರ್ಬೋಜೆಟ್ ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಪ್ರತಿ ಲೀಟರ್‌ಗೆ 94 ಪೈಸೆ ಹೆಚ್ಚಳವಾಗಿದ್ದು, ಇಂದಿನ ದರ 99 ರೂಪಾಯಿ 69 ಪೈಸೆಗೆ ತಲುಪಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...