Wednesday, August 12, 2026
Wednesday, August 12, 2026

ಬಸವೇಶ್ವರ ಸೊಸೈಟಿ ಮಹಿಳಾ ಸದಸ್ಯರಿಗೆ ಮೇ 10ರಂದು ವಿವಿಧ ಕ್ರೀಡಾಸ್ಪರ್ಧೆಗಳು

Date:

ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ನಿಮಿತ್ತ ಮೇ 10 ರ ಭಾನುವಾರ ಬೆಳಿಗ್ಗೆ 10ರಿಂದ ಹಳೆ ತಾಲೂಕು ಆಫೀಸ್ ರಸ್ತೆಯ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ಸಂಘದ ಮಹಿಳಾ ಸದಸ್ಯರು ಮತ್ತು ಅವರ ಕುಟುಂಬದ ಹೆಣ್ಣುಮಕ್ಕಳಿಗಾಗಿ ವಿವಿಧ ಕ್ರೀಡಾಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಹೊರಾಂಗಣ ಕ್ರೀಡೆಗಳಾದ ಲೆಮೆನ್ ಅಂಡ್ ಸ್ಪೂನ್, ತಲೆಮೇಲೆ ಪುಸ್ತಕ ಇಟ್ಟುಕೊಂಡು ವಾಕ್ ಮಾಡುವುದು, 50 ಮೀ. ರಿಲೇ, 40 ವರ್ಷ ಮೇಲ್ಪಟ್ಟವರಿಗೆ ಬಾಂಬ್ ಇನ್ ದಿ ಸಿಟಿ, ಮ್ಯೂಸಿಕಲ್ ಚೇರ್‍ಸ್, ಪಾಸಿಂಗ್ ದ ಬಾಲ್ ಸ್ಪರ್ಧೆಗಳಿರುತ್ತವೆ. ವಿಶೇಷವಾಗಿ ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಸಾಮಾನ್ಯ ಜ್ಞಾನದ ಪ್ರಶ್ನೆಗಳು, ಜೊತೆಗೆ ವಿನೂತನವಾದ ಶತಸಂಜೀವಿನಿ ಸ್ಪರ್ಧೆ ಇರುತ್ತದೆ. ವಿಜೇತರಿಗೆ ತಲಾ ೩ ಬಹುಮಾನ ಇರುತ್ತದೆ. ಸಂಘದ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಸಂತೋಷ್ ಬಳ್ಳೇಕೆರೆ ಕೋರಿದ್ದಾರೆ. ಹೆಸರು ನೊಂದಣಿ ಇನ್ನಿತರ ವಿವರಗಳಿಗಾಗಿ ಅನಿತಾ ರವಿಶಂಕರ್ 94498 34882 ಅಥವಾ ಶಾಂತಾ ಆನಂದ್ ೯9011 44081ರಲ್ಲಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...