Monday, August 3, 2026
Monday, August 3, 2026

ಸೋಲೊಪ್ಪದೇ ದೊಡ್ಡ ಸಂಕಲ್ಪದಿಂದ ಗುರಿಯನ್ನ ಸಾಧಿಸುವವರಿಗೆ ಭಗೀರಥ ಮಾದರಿ- ನಾಗರಾಜ್ ಕಂಕಾರಿ

Date:

ನಮ್ಮೂರ ಬಳಗದ ವತಿಯಿಂದ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಗೌರವ ಸಂಚಾಲಕರು ಮಾಜಿ ಮೇಯರ್ ನಾಗರಾಜ್ ಕಂಕಾರಿ ರವರು ಭಗೀರಥರ ಜೀವನ ಕೇವಲ ಪುರಾಣವಲ್ಲ ಅದು ಮನುಷ್ಯನ ಇಚ್ಛಾಶಕ್ತಿ ಮತ್ತು ಛಲದ ಸಂಕೇತ ಕುಟುಂಬದ ಏಳಿಗೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಒಬ್ಬ ವ್ಯಕ್ತಿ ಎಷ್ಟು ಕಷ್ಟಪಡಬಲ್ಲ ಎಂಬುದು ಇವರ ಜೀವನ ಒಂದು ಉತ್ತಮ ನಿರ್ದೇಶನ ಅಸಾಧ್ಯವಾದುದನ್ನು ಸಾಧಿಸಲು ಮಾಡುವ ಅತ್ಯಂತ ಕಠಿಣ ಪರಿಶ್ರಮವನ್ನು ಇಂದಿಗೂ ‘ಭಗೀರಥ ಪ್ರಯತ್ನ’ ಎಂದು ಕರೆಯಲಾಗುತ್ತದೆ ಸೋಲೊಪ್ಪದೆ ದೊಡ್ಡ ಸಂಕಲ್ಪದಿಂದ ಗುರಿಯನ್ನು ತಲುಪುವವರಿಗೆ ಭಗೀರಥ ಮಹರ್ಷಿ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಶ್ರೀ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್ .ಪಿ. ಗಿರೀಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಎಂ. ರಾಕೇಶ್, ಕೆ ಎಲ್ ಪವನ್, , ಮುರುಳಿ ಸಣ್ಣಕ್ಕಿ, ಬೊಮ್ಮನಕಟ್ಟೆ ಮಾಲ್ತೇಶ್ ,ಶ್ರೀಕಾಂತ್ ,ರವಿ ಶಾಸ್ತ್ರಿ , ಕೇಶವ ಸೀಗೆಹಟ್ಟಿ, ಪ್ರಶಾಂತ್ ರಾಯ್ ,ಜಯಪ್ರಕಾಶ್, ಕೇಶವಮೂರ್ತಿ, ಆಟೋ ನಂದನ್ , ಪೈಂಟರ್ ಕೃಷ್ಣಪ್ಪ, ಭವಾನಿ ರಾವ್, ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...