Friday, August 7, 2026
Friday, August 7, 2026

ಏಪ್ರಿಲ್ 22 ರಂದು ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪಿಂಚಣಿದಾರ ಕುಂದು ಕೊರತೆ ಆನ್ ಲೈನ್ ಮೂಲಕ ಕೇಳಬಹುದು

Date:

ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ನಿವೃತ್ತ/ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ನಿವಾರಣೆಗಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಏ.22 ರಂದು ಬೆಳಗ್ಗೆ 11.00ಕ್ಕೆ “ಪಿಂಚಣಿ ಅದಾಲತ್” ಹಾಗೂ ಮಧ್ಯಾಹ್ನ ಜಿಪಿಎಫ್ ಚಂದಾದಾರರ ಕುಂದುಕೊರತೆಗಳ ನಿವಾರಣೆಗಾಗಿ ”ಜಿಪಿಎಫ್ ಅದಾಲತ್” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪಿಂಚಣಿದಾರರು ಬೆಳಿಗ್ಗೆ 11 ಗಂಟೆಗೆ ಎ.ಸಿ.ಕಚೇರಿಯ ಕೆ-ಸ್ವಾನ್-ವಿ.ಸಿ. ಸಭಾಂಗಣದಲ್ಲಿ ನಡೆಯುವ ಪಿಂಚಣಿ ಮತ್ತು ಜಿಪಿಎಫ್ ಅದಾಲತ್‌ನಲ್ಲಿ ಭಾಗವಹಿಸಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ. ಅಥವಾ ಶಿವಮೊಗ್ಗ ಜಿಲ್ಲಾ ಖಜಾನೆಯ ಉಪನಿರ್ದೇಶಕರ ಕಚೇರಿಯಲ್ಲಿ ಮುಂಚಿತವಾಗಿ ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...

Car Accident ಸಿಗಂದೂರಿಗೆ ಹೊರಟ ಪ್ರವಾಸಿಗರ ಕಾರು ಚೋರಡಿ ಸೇತುವೆ ಬಳಿ ಪಲ್ಟಿ: ಆರು ಮಂದಿಗೆ ಗಾಯ.

Car Accident  ಶಿವಮೊಗ್ಗ ಜಿಲ್ಲೆಯ ಚೋರಡಿ ಬ್ರಿಡ್ಜ್ ಸಮೀಪ ಈ ಭೀಕರ...