Monday, June 1, 2026
Monday, June 1, 2026

Manasadhara Trust ಮಕ್ಕಳಲ್ಲಿನ ಮಾನಸಿಕ ಒತ್ತಡ ದೂರಮಾಡಲು ಬೇಸಿಗೆ ಶಿಬಿರಗಳು ಸಹಕಾರಿ- ಡಾ.ಐಶ್ವರ್ಯ.

Date:

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮನಃಸ್ಫೂರ್ತಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಡಾ.ಐಶ್ವರ್ಯ ರವರು “ಮಕ್ಕಳಿಗೆ ಪ್ರಸ್ತುತ ಒತ್ತಡದ ಬದುಕಿದೆ. ಅದನ್ನು ದೂರಗೊಳಿಸಲು ಬೇಸಿಗೆ ಶಿಬಿರಗಳ ಪಾತ್ರ ಬಹಳ ಮುಖ್ಯ. ಪೋಷಕರು ಇದನ್ನು ಮನಗಂಡು ಇಂತಹ ಶಿಬಿರಗಳಿಗೆ ಮಕ್ಕಳನ್ನು ಸೇರಿಸಬೇಕು, ಹಾಗೆಯೇ ಶಿಬಿರಗಳು ಮಕ್ಕಳಿಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ಮಾನಸಿಕವಾಗಿ ಧೈರ್ಯವನ್ನು ತುಂಬುತ್ತದೆ ಮತ್ತು ಅವರನ್ನು ಮೊಬೈಲ್ ನಿಂದ ದೂರವಿಡುವುದಕ್ಕೆ ಸಹಕಾರಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಶಿಬಿರ ಬಹಳ ಉಪಯುಕ್ತವಾಗಿದೆ” ಎಂದರು.

Manasadhara Trust ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈ ರವರು ಮಾತನಾಡಿ “ಮನಃಸ್ಫೂರ್ತಿ ಬೇಸಿಗೆ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಇದು ಒಂಬತ್ತನೇ ವರ್ಷದ ಶಿಬಿರವಾಗಿದೆ. ಮುಖ್ಯವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಈ ಶಿಬಿರವು ರೂಪುಗೊಂಡಿದ್ದು ನಾಟಕ, ಚಿತ್ರಕಲೆ, ಹಾಡು, ಕ್ರಾಫ್ಟ್, ಪರಿಸರದ ಅರಿವು…. ಹೀಗೆ ಇತ್ಯಾದಿ ವಿಷಯಗಳನ್ನು ಇಂದಿನಿಂದ ಹೇಳಿಕೊಡಲಾಗುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕರಾದ ಶ್ರೀ ಯುತ ಮಂಜುನಾಥ ಸ್ವಾಮಿ, ಶಿಬಿರದ ಸಂಚಾಲಕರಾದ ಶ್ರೀ ಮತಿ ರಂಗನಾಯಕಿ, ಶ್ರೀ ಮತಿ ಜ್ಯೋತಿ ಅರುಣ್ ಕುಮಾರ್, ಶ್ರೀ ಯುತ ಪ್ರತೀಕ್.ಸಿ.ಎಂ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಾದ ಸ್ಫೂರ್ತಿ.ವೈ.ಹೆಚ್, ಮಂಜುಳ, ಜ್ಯೋತಿ, ರಾಹುಲ್, ಶಶಾಂಕ್, ಮಂಜು.ಆರ್.ಪಿ, ನಮ್ಮ ಹಳ್ಳಿ ಥಿಯೇಟರ್ ನ ಸದಸ್ಯರು, ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಅನ್ನಸಂತರ್ಪಣಾ ಸೇವೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಧಿಕ ಮಾಸದ ಪವಿತ್ರ ಸಂದರ್ಭದಲ್ಲಿ, ಇಂದುಸಂಸದ ಬಿ.ವೈ.ರಾಘವೇಂದ್ರ ಅವರು...

Klive Special Article ಭಕ್ತಿಭಾವಗಳಿಂದ ಜಗದ್ಗುರುಗಳನ್ನ ಬೀಳ್ಕೊಟ್ಟ ನೇಪಾಳ ಭಕ್ತವೃಂದ

ವಿಶೇಷ ವರದಿ: ಪ್ರಭಾಕರ ಕಾರಂತ. Klive Special Article ಜಗದ್ಗುರು ಶ್ರೀ...

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...