ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು ತೀರ್ಥಹಳ್ಳಿಯಲ್ಲಿ ಹುಲಿಕಲ್ ಘಾಟಿ ಕುಸಿತದಲ್ಲಿ 3 ಸಾವುಗಳಾಗಿರುವ ವಿಚಾರವಾಗಿ ಮಾತನಾಡಿದರು.
ನಾನು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಯಾವ ಕಾರಣಕ್ಕೆ ಆಗಿದೆ ಹಾಗೂ ಮುಂದೆ ಶಾಶ್ವತವಾಗಿ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಲು ಬೇಕಾದ ಚರ್ಚೆ ನಡೆಸಲಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡುವ ಕೆಲಸ ಈಗಾಗಲೇ ಆಗಿದೆ ಎಂದಿದ್ದಾರೆ.
ಇಲಾಖೆಯಿಂದ ಗೈಡ್ ಲೈನ್ಸ್ ಕೊಡಲಾಗಿದ್ದು, ಅದನ್ನ ಗುತ್ತಿಗೆದಾರರು ಅನುಸರಿಸಬೇಕಿತ್ತು. ಎರಡು ಕಡೆಯಿಂದಲೂ ತಪ್ಪಾಗಿದೆ ಎಂದರು.
