ಈಕೆ ನಮ್ಮ ಕರ್ನಾಟಕದ ಸೊಸೆ . ಯುವ ನಾಯಕ , ಬೆಂಗಳೂರು ದಕ್ಷಿಣ ಕ್ಷೇತ್ರದ ಜನಾನುರಾಗಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ .
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ಈಕೆ ಹಾಡಿದ ಎರಡು ಕನಸು ಕನ್ನಡ ಚಲನ ಚಿತ್ರದ “ ಪೂಜಿಸಲೆಂದೇ…. ಹೂಗಳ ತಂದೆ” ಗೀತೆಯನ್ನು ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು !!! . ಅಂದೇ ಈ ಕಲಾವಿದೆಯ ಕಂಠ ಮಾಧುರ್ಯಕ್ಕೆ ದೇಶವೇ ಮಾರುಹೋಗಿತ್ತು !!! .
ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ (ಶಿವಶ್ರೀ ಸ್ಕಂದಪ್ರಸಾದ್) ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಕಲಾವಿದೆ . ಸಂಗೀತ ಮಾತ್ರವಲ್ಲದೇ ಭರತ ನೃತ್ಯದಲ್ಲೂ ಪ್ರವೀಣೆ . ಈಕೆಯ ಧ್ವನಿ ಮಾರ್ದವತೆಯನ್ನು ಮೆಚ್ಚಿ ಸಂಗೀತ ಮಾಂತ್ರಿಕ A R ರೆಹಮಾನ್ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್” ಚಿತ್ರದಲ್ಲಿ ಹಾಡಿಸಿದ್ದಾರೆ.
ಎಲ್ಲಾ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯವಿರುವ ಈ ಕಲಾವಿದೆಯ ವಿಶೇಷ ಆಸಕ್ತಿ ಎಂದರೆ ಅದು ಭಕ್ತಿ ಸಂಗೀತ . ಭಜನೆ, ನಾಮಾವಳಿ, ದಾಸರ ಪದಗಳನ್ನು ಅಮೋಘವಾಗಿ ಹಾಡುವ ಶಿವಶ್ರೀ ತನ್ನ ಭಕ್ತಿಪೂರ್ಣ ಗಾಯನದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .
ಇಂತಹ ಅಪರೂಪದ ಕಲಾವಿದೆಯ ಸಂಗೀತ ಕಾರ್ಯಕ್ರಮ “ನಾಮಾಮೃತ”ಪ್ರಪ್ರಥಮ ಬಾರಿಗೆ ಇದೇ ಗುರುವಾರ 9ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ .
ಶಿವಮೊಗ್ಗದ ಪ್ರಸಿದ್ಧ ಪಂಚತಾರ ಐಸ್ರೀಮ್ಮ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಪ್ರಕಾಶ್ ಪ್ರಭು ಅವರ ನೇತೃತ್ವದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಈ ಭಕ್ತಿ-ಭಾವದ ಸಂಗೀತಮಯ ಕಾರ್ಯಕ್ರಮಕ್ಕೆ ಸಿಹಿಮೊಗೆಯ ಸಂಗೀತ ರಸಿಕ ಮನಸ್ಸುಗಳಿಗೆ ಆತ್ಮೀಯ ಆಹ್ವಾನ 🙏
~ ವಿನಯ್ ಶಿವಮೊಗ್ಗ. ಸಂಚಾಲಕರು, – ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್
