DVS College of Arts, Science and Commerce ಮಾನವನ ಇತಿಹಾಸ ಮತ್ತು ಸಂಸ್ಕೃತಿಯನ್ನು ಭೌತಿಕ ಅವಶೇಷಗಳಾದ ಉತ್ಖನನಗೊಂಡ ವಸ್ತುಗಳು, ಶಾಸನಗಳು, ನಾಣ್ಯಗಳು ಮತ್ತು ಸ್ಮಾರಕಗಳ ಮೂಲಕ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದೇ ಪ್ರಾಕ್ತನಶಾಸ್ತç ಎಂದು ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಮಂಜುನಾಥ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ “ಪ್ರಾಕ್ತನಶಾಸ್ತ್ರ ಪರಿಚಯ” ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾತನ ವಿಧಾನಗಳ ಅಧ್ಯಯನದಿಂದ ಮಾನವನ ಇತಿಹಾಸ, ಸಂಸ್ಕೃತಿ ಮತ್ತು ವಿಕಾಸ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಾಕ್ತನ ಶಾಸ್ತ್ರದ ವೈಜ್ಞಾನಿಕ ವಿಧಾನಗಳ ಮೂಲಕ ಗತಕಾಲದ ಮಾನವನ ಸಾಂಸ್ಕೃತಿಕ ಚಟುವಟಿಕೆಗಳು, ಮಾನವನ ಬೆಳವಣಿಗೆಗಳು ಹಾಗೂ ಉತ್ಖನನದ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ ಚಿಮನೂರು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು.
DVS College of Arts, Science and Commerce ವಿದ್ಯಾರ್ಥಿಗಳು ವಿಶೇಷ ಮಾರ್ಗದರ್ಶನ ಕಾರ್ಯಕ್ರಮದ ಪ್ರಯೋಜನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಅವರು ಪ್ರಾಕ್ತನ ಶಾಸ್ತ್ರದ ಅಧ್ಯಯನದ ಮೂಲಕ ಅನೇಕ ಉದ್ಯೋಗಾವಕಾಶಗಳಿವೆ ಎಂಬುದರ ಅರಿವು ಮೂಡಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ರೂಪ.ಎಂ ಹಾಗೂ ಅಧ್ಯಾಪಕರಾದ ಅರುಣ್ ಕುಮಾರ್.ಕೆ.ಎಲ್, ಅಭಿಷೇಕ್.ಎನ್, ಪಲ್ಲವಿ ಬಿ.ಎಮ್ ಮತ್ತು ಚರಣ್.ಡಿ ಉಪಸ್ಥಿತರಿದ್ದರು.
