Shimoga Pesit College ಕಳೆದ ಮಾ. 26ರಿಂದ 29ರವರೆಗೆ ತಿಪಟೂರು ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಇಂಟರ್ ಕಾಲೇಜು ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಶಿವಮೊಗ್ಗದ ಪೆಸಿಟ್ ಕಾಲೇಜಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿ ಆಕಾಶ್ ಎಸ್. ಅವರು 400ಮೀಟರ್ ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನ ಹಾಗೂ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ಪೆಸಿಟ್ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ನಾಗಾರ್ಜುನ ಅವರು ತರಬೇತುದಾರರಾಗಿದ್ದಾರೆ. ಈ ಪ್ರತಿಭಾನ್ವಿತ ಕಾಳಿಕಾ ಪರಮೇಶ್ವರಿ ಸಹಕಾರ ಸಂಘದ ಉಪಾಧ್ಯಕ್ಷರಾದ ಎ. ಸತೀಶ್ ಮತ್ತು ಸುನಿತಾ ದಂಪತಿಗಳ ಪುತ್ರರಾಗಿದ್ದಾರೆ.
Shimoga Pesit College ಅಂತರ ಕಾಲೇಜು ಅಥ್ಲೆಟ್ಸ್ ಸ್ಪರ್ಧೆಯಲ್ಲಿ ಪೆಸಿಟ್ ಕಾಲೇಜಿಗೆ ಕೀರ್ತಿ ತಂದ ಎಸ್.ಆಕಾಶ್
Date:
