Monday, May 25, 2026
Monday, May 25, 2026

amazon ಅಮೆಜಾನ್ ಸೆಲ್ಲರ್ ಸೇವಾ ನ್ಯೂನತೆ ದೀರು: ಪರಿಹಾರ ನೀಡಲು ಆಯೋಗದಿಂದ ಆದೇಶ.

Date:

amazon ಶಿವಮೊಗ್ಗ ಜಿಲ್ಲೆಯ ಗಾಜನೂರು ಡಾ. ಕಾರುಣ್ಯ ಜೆ.ಜೆ. ಇವರು ಬೆಂಗಳೂರು ಅಮೆಜಾನ್ ಸೆಲ್ಲರ್ ಸರ್ವಿಸ್ ಪ್ರೆöÊ.ಲಿ. ಹಾಗೂ ಹರಿಯಾಣ ಗುರಂಗಾವ್ ಕ್ಲಿಕ್‌ಟೆಕ್ ರೀಟೈಲ್ ಪ್ರೆöÊ.ಲಿ. ಇವರ ಮೇಲೆ ಗುಣಮಟ್ಟ ಸರಿಯಿಲ್ಲದ ಲಿಟ್‌ಮ್ಯಾನ್ ಸ್ಟೆತೋಸ್ಕೋಪ್ ನೀಡಿದ್ದು, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2023ರ ನವೆಂಬರ್‌ನಲ್ಲಿ ಅಮೆಜಾನ್ ಸೆಲ್ಲರ್‌ನಿಂದ ಲಿಟ್‌ಮ್ಯಾನ್ ಸ್ಟೆತೋಸ್ಕೋಪ್ ಆನ್‌ಲೈನ್ ಮೂಲಕ ರೂ. 10,024/-ಗಳನ್ನು ಪಾವತಿಸಿ ಬುಕ್ ತರಿಸಿದ್ದು, ಇದರ ಗುಣಮಟ್ಟ ಸರಿಯಿಲ್ಲದ್ದರಿಂದ ವಾಪಾಸ್ಸು ಮಾಡಿರುತ್ತಾರೆ. ಆದರೆ 3 ರಿಂದ 10 ದಿನಗಳೊಳಗಾಗಿ ಹಣ ವಾಪಸ್ಸು ಮಾಡಲಾಗುವುದೆಂದು ತಿಳಿಸಿದ್ದರೂ, ಹಣ ವಾಪಸ್ಸು ಮಾಡದಿದ್ದರಿಂದ ಲೀಗಸ್ ನೋಟೀಸ್‌ಗೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂಡು ಎರಡೂ ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ ಹಾಜರಾಗದಿರುವುದರಿಂದ ಏಕಪಕ್ಷೀಯವಾಗಿ ಆದೇಶವಾಗಿದ್ದು, ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಸ್ಟೆತೋಸ್ಕೋಪ್ ಅನ್ನು ಹಿಂಪಡೆದು, ಹಣವನ್ನು ಹಿಂತಿರುಗಿಸದೆ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಪಡೆದಿರುವ ರೂ. 10024/- ಗಳಿಗೆ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ 2025ರ ಏಪ್ರಿಲ್ ರೀಮದ ಅನ್ವಯವಾಗುವಂತೆ ಈ ಆದೇಶವಾದ 45 amazon ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 15,000/- ಗಳನ್ನು ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ. 17 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...