ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.
Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ “ಕ್ವೇದಮಭ್ರಂ ನಿವಿಶತೇ ಕ್ವಾಯಂ ಸಂವತ್ಸರೋ ಮಿಥಃ|ಕ್ವಾಹಃ ಕ್ವೇಯಂ ದೇವರಾತ್ರೀ ಕ್ವ ಮಾಸಾ ಋತವಃ ಶ್ರಿತಾಃ”||
ಹೇ ಭಗವಂತ ಆಕಾಶದಲ್ಲಿ ಮೋಡಗಳನ್ನು ಹಿಡಿದಿಟ್ಟು ನಿಲ್ಲಿಸಿರುವವರು ಯಾರು? ಸಂವತ್ಸರ ಗಳನ್ನು ನಿಯಮಿಸಿದವರು ಯಾರು? ಹಗಲಿರುಳು ಹೇಗೆ ಸಂಭವಿಸುತ್ತದೆ? ಮಾಸ ಮತ್ತು ಋತುಗಳಿಗೆ ಆಧಾರ ಯಾವುದು?.. ಶಾಲಿವಾಹನ ಶಕೆಯಲ್ಲಿ ಬರುವ ಅರವತ್ತು ಸಂವತ್ಸರದಲ್ಲೊಂದಾದ ಪರಾಭವ ಸಂವತ್ಸರದ ಆಗಮನವಾಗಿದೆ. ವಸಂತದಲ್ಲಿ ಹೊಸ ಚಿಗುರು ಮೂಡುವಂತೆ ಎಲ್ಲರಲ್ಲಿ ಹೊಸ ಬೆಳಕು, ಭರವಸೆ ಮೂಡಲಿ, ಭಾಸ್ಕರನ ಕಿರಣಗಳಂತೆ ಸಾಧನೆಗಳು ಶೋಭಿಸಲಿ, ಬೇವಿನ ಕಹಿಯೂ, ಬೆಲ್ಲದ ಸವಿಯೂ ಸೇರಿದಂತೆ ಸುಖ ದುಃಖ ಗಳು ಸಮವಾಗಿರಲಿ, ಪರಾಭವ ಸಂವತ್ಸರದಲ್ಲಿ ಶತೃಗಳ ಪರಾವಭವವಾಗಲಿ, ಗೆಲುವು ವಿಜೃಂಭಿಸಲಿ, ಭಗವಂತನಿಂದ ರಚಿತವಾದ ಪ್ರಕೃತಿಯ ನಿಯಮದಂತೆ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ, ಈ ಪರಾಭವ ಸಂತ್ಸರದಲ್ಲಿ ಆರೋಗ್ಯ, ಆಯುಷ್ಯ, ನೆಮ್ಮದಿ, ಸಂಪತ್ತು ವೃದ್ಧಿಸಲಿ.
ಜಂಬೂದ್ವೀಪದ ಭರತವರ್ಷ, ಭರತಖಂಡದ ಶಕಪುರುಷರಲ್ಲೊಬ್ಬನಾದ ಶಾಲಿವಾಹನ ಶಕಪುರುಷರುಷನು ಎಲ್ಲರಿಗೂ ಹರ್ಷವನ್ನುಂಟುಮಾಡಲಿ.
ಹೊಸ ಸಂವತ್ಸರ ಪರಾಭವ ಸಂವತ್ಸರದ ಹಾರ್ಧಿಕ ಶುಭಾಶಯ.🌹🌹🌹🙏🙏🙏
ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.
ಕ್ರಿ.ಪೂ 3102ರಲ್ಲಿ ಆರಂಭವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು (ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).
ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78ರ ತನಕ)
ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)
ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟುಬಿಡೋಣ.
ಜ್ಯೋತಿರ್ವಿಧಾಭರಣದಲ್ಲಿ
ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||
ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||
ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||
ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.
ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದಾನೆ.
ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |
ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತಃ
ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |
ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |
ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||
ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತಂತೆ. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಅದಕ್ಕಾಗಿ ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.
ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ಸಿಗಲಾರದು.
Klive Special Article ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ ! ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ಇತಿಹಾಸಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯನ್ನು ಬಳಸಿಕೊಂಡದ್ದು. ಶುದ್ಧ ವೈದಿಕ ಕಾಳಿದಾಸ ಕುರಿಕಾಯುವ ಪೆದ್ದನಾಗಿಬಿಟ್ಟ.
ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥದಲ್ಲಿ.
ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||
ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||
ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸುತ್ತಾನೆ.
ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಆಡಳಿತ ನಡೆಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.
ಇದು ಭಾರತದ ಇತಿಹಾಸ,
ಇದು ಶ್ರೇಷ್ಠ ಇತಿಹಾಸ.
ದಿಲೀಪ್ ನಾಡಿಗ್
