ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ಕಲ್ಪತರು ಶ್ರೀ ಚೌಡೇಶ್ವರಿ ದೇವಿಯ ೬ನೇ ವರ್ಷದ ವಾರ್ಷಿಕೋತ್ಸವವನ್ನು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವು ಪುಣ್ಯಾಹವಾಚನ, ದೇವರ ಪ್ರಾರ್ಥನೆ, ಪ್ರಧಾನ ದೇವರುಗಳ ಕಲಶ ಸ್ಥಾಪನೆ, ದಿಕ್ಕು ಶುದ್ಧಿ ಹಾಗೂ ದಿಕ್ಬಲಿ ಪೂಜೆಯೊಂದಿಗೆ ಪ್ರಾರಂಭವಾಗಿ ಗಣಹೋಮ, ನವಗ್ರಹ ಹೋಮ, ಪರಿವಾರ ಹೋಮ, ದುರ್ಗಾ ಹೋಮ ಮತ್ತು ಶ್ರೀ ಲಲಿತಾ ಸಹಸ್ರನಾಮ ಹೋಮಗಳನ್ನು ನೆರವೇರಿಸಿ ಮಹಾಪೂರ್ಣಾಹುತಿಯನ್ನು ಸಮರ್ಪಿಸಲಾಯಿತು. ನಂತರ ಅಮ್ಮನವರಿಗೆ ಫಲ-ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಹಾಗೂ ಬ್ರಹ್ಮಕಳಶಾಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ದೇವಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಧರ್ಮಪತ್ನಿ ಜಯಲಕ್ಷ್ಮಿ, ಕೆ. ಇ. ಕಾಂತೇಶ್ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್, ಸಹ ಅರ್ಚಕರಾದ ಹೃತಿಕ್ ಭಟ್ ಅವರ ನೇತೃತ್ವದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಸಿ.ಎನ್. ಮಲ್ಲೇಶ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಅತ್ಯಂತ ವೈಭವದಿಂದ ನಡೆಸಿಕೊಟ್ಟರು.
ವೈಭವದಿಂದ ಜರುಗಿದ ಕಲ್ಪತರು ಶ್ರೀ ಚೌಡೇಶ್ವರಿ ದೇವಿಯ 6 ನೇ ವಾರ್ಷಿಕೋತ್ಸವ
Date:
