Sunday, May 3, 2026
Sunday, May 3, 2026

H.M. Chandrashekariah ವ್ಯಕ್ತಿಯಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಪರಿಣಾಮ- ಹೆಚ್.ಎಂ.ಚಂದ್ರಶೇಖರಯ್ಯ

Date:

H.M. Chandrashekariah ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಉದ್ದೇಶ ಎಂದು ಕಾರ್ಯದರ್ಶಿ ಹೆಚ್.ಎಂ.ಚಂದ್ರಶೇಖರಯ್ಯ ತಿಳಿಸಿದರು.

ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರದ ಶಕ್ತಿ ಗಣಪತಿ ಯೋಗ ಶಾಖೆಯಲ್ಲಿ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮೃದ್ಧತೆಯ ಸಂಕೇತ, ಸಡಗರ ಸಂಭ್ರಮದ ಸಂಕೇತ, ಸ್ಥಿತ ಪ್ರಜ್ಞತೆಯ ಸಂಕೇತ. ಈ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಈ ಭೂಮಿಯಲ್ಲಿ ನಾಲ್ಕು ದಿನ ಬದುಕಿ ಹೋಗುವುದೇ ಈ ಯೋಗದ ಉದ್ದೇಶವೆಂದು ತಿಳಿಸಿದರು.

ಇಂದು ಎಲ್ಲಿ ನೋಡಿದರೂ ಅಶಾಂತಿ, ಅಭದ್ರತೆ, ಅಪನಂಬಿಕೆ, ಭಯ ತಾಂಡವವಾಡುತ್ತಿದೆ. ಬಹುತೇಕ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಕಾರಣ, ಮಿತಿ ಇಲ್ಲದ ಕಾಮನೆಗಳು, ಸ್ವಾರ್ಥಪರ ಚಿಂತನೆಗಳು, ಅಧಿಕಾರ, ಕೀರ್ತಿ, ಸಂಪತ್ತಿನ ಬೆನ್ನು ಹತ್ತಿರುವ ಜಗತ್ತು ಪ್ರಕ್ಷುಬ್ಧಗೊಂಡಿದೆ. ಹಿಂಸೆ, ಯುದ್ಧಗಳಿಂದ ಜಗತ್ತು ಜರ್ಜರಿತವಾಗುತ್ತಿದೆ. ನಾವೆಲ್ಲ ಜಗತ್ತು ಬದಲಾಗಲಿ ಎಂದು ಹೇಳುತ್ತೇವೆ. ಆದರೆ ನಮ್ಮಲ್ಲಿ ಬದಲಾವಣೆಯಾಗಲಿ ಎಂದು ಯಾರೂ ಬಯಸುತ್ತಿಲ್ಲ. ಮೊದಲು ನಮ್ಮಲಿನ ಚಿಂತನೆಗಳು, ಆಲೋಚನೆಗಳು, ದುರಾಸೆಗಳು, ಹಣ, ಕೀರ್ತಿಗಾಗಿ ಬೆನ್ನು ಹತ್ತಿರುವ ವ್ಯಕ್ತಿಯ ಮನಸ್ಸು ಬದಲಾಗಬೇಕಿದೆ. ಇದು ಯೋಗದ ಅಷ್ಟಾಂಗ ಮಾರ್ಗಗಳಾದ ಆಸನ, ಪ್ರಾಣಯಾಮ ಮತ್ತು ಧ್ಯಾನಗಳಿಂದ ಮಾತ್ರ ಸಾಧ್ಯವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷೆಯನ್ನು ಸಂಸ್ಥೆಯ ಖಜಾಂಚಿ ಸೂರ್ಯನಾರಾಯಣ ಹೊಸತೋಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳ್ಳೆಕೆರೆ ಸಂತೋಷ್ ಆಗಮಿಸಿದ್ದರು. ಹಿರಿಯ ಯೋಗ ಶಿಕ್ಷಕರಾದ ನೀಲಕಂಠ ರಾವ್ ಕಾರ್ಯಕ್ರಮ ನಿರೂಪಿಸಿದರು. ಗಣಪತಿಯವರು ವಂದಿಸಿದರು.

H.M. Chandrashekariah ರೋಟರಿ ಜಿ ವಿಜಯ್ ಕುಮಾರ್, ಪ್ರೊ. ಮಂಜುನಾಥ್, ಡಾ. ನಟರಾಜ್, ಪರಮೇಶ್ವರಪ್ಪ, ಕೆ.ಚಂದ್ರಪ್ಪ, ಸಂಸ್ಥೆ ಪೋಷಕರಾದ ಪರಮೇಶ್, ಮನು ಕುಮಾರ್, ಅನಿಲ್, ಸುಮಾ ನಟರಾಜ್, ಜಾನಕಮ್ಮ, ನಾಗರತ್ನ, ಚಂದ್ರಶೇಖರಯ್ಯ, ಶೋಭಾ, ಸರಸ್ವತಿ, ಬಿಂದು ವಿಜಯ್ ಕುಮಾರ್, ಜ್ಯೋತಿ ಠಾಕ್ರೆ, ಕುಸುಮಾ ಹಾಗೂ ಕೃಷಿ ನಗರದ ಯೋಗಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...