Tuesday, March 17, 2026
Tuesday, March 17, 2026

DVS College of Arts, Science ಹೊಸ ರೀತಿಯ ಶಿಕ್ಷಣ ಅಗತ್ಯ. ಬದಲಾವಣೆಗೆ ನಾವು ಸನ್ನದ್ಧರಾಗಬೇಕು: ಪ್ರೊ.ಶರತ್ ಅನಂತ ಮೂರ್ತಿ

Date:

DVS College of Arts, Science ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಹೊಸತನದ ಕಲಿಕೆ ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರಶಿಸ್ತೀಯ ಸಂಶೋಧನೆ ಮತ್ತು ನಾವೀನ್ಯತೆ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಹೊಸ ಆಲೋಚನೆಗಳು, ಹೊಸ ರೀತಿಯ ಶಿಕ್ಷಣ ನಮ್ಮ ದೇಶಕ್ಕೆ ಬಹುಮುಖ್ಯವಾಗಿ ಅಗತ್ಯವಾಗಿದೆ. ನಾವು ಹೊಸ ಬದಲಾವಣೆಗೆ ಸನ್ನದ್ಧರಾಗಬೇಕು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಧನಾತ್ಮಕ ಉಪಯೋಗಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಮಾತನಾಡಿ, ಸಂಶೋಧನೆ ಮತ್ತು ನಾವೀನ್ಯತೆ ಬಹುಪ್ರಾಮುಖ್ಯವಾದ ವಿಚಾರ. ಹೊಸ ವಿಚಾರಕ್ಕೆ, ಹೊಸತನಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಿಜ್ಞಾನಿ ಡಾ. ಸಿ.ವಿ.ಯೇಳಮಗ್ಗದ ಮಾತನಾಡಿ, ಹೊಸ ಆವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ನಮ್ಮ ಎದುರು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಐಐಟಿ ಧಾರವಾಡ ಡೀನ್ ಡಾ. ಎಸ್.ಎಂ.ಶಿವಪ್ರಸಾದ್ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿನ ಹೊಸ ಸಾಧ್ಯತೆಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು ಎಂದು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

DVS College of Arts, Science ಎಸ್‌ಪಿಆರ್‌ಒಸಿ ಮಾಜಿ ಗ್ರೂಪ್ ನಿರ್ದೇಶಕ ಎಚ್.ಡಿ.ಆನಂದ, ಸ್ಕೂಲ್ ಆಫ್ ಸೈನ್ಸಸ್‌ನ ಡಾ. ಎಸ್.ಆರ್.ರಮೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್.ಹರೀಶ್ ಕುಮಾರ್, ದೇಶೀಯ ಸಮಿತಿ ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Media Academy Award ಮಾಧ್ಯಮಗಳು ಯುದ್ಧ ನಿಲ್ಲಿಸುವ ಬದಲು ಮುಂದುವರೆಸಲು ಪ್ರೋತ್ಸಾಹ ನೀಡುತ್ತಿವೆ- ಡಾ.ಡಿ.ಎಸ್.ಪೂರ್ಣಾನಂದ

Media Academy Award ಯಾವುದೇ ಪತ್ರಕರ್ತನೊಳಗೆ ಮನುಷ್ಯತ್ವ ಇಲ್ಲದಿದ್ದರೆ ಆತ ನಿಜವಾದ...

B.Y. Raghavendra ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವೆಲ್ಲ ಬದ್ಧರಾಗಿದ್ದೇವೆ- ಬಿ.ವೈ.ರಾಘವೇಂದ್ರ

B.Y. Raghavendra ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ...