Monday, March 16, 2026
Monday, March 16, 2026

ಸಾಕಿದ ಪ್ರೀತಿಯ ಕುರಿ ಸಾವು: ಶ್ರದ್ಧಾಂಜಲಿ ವಿಶೇಷವಾಗಿ ಶಾಲಾಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Date:

ಶಿವಮೊಗ್ಗ ನಗರದ ಸಿಗಹಟ್ಟಿ ಬಡಾವಣೆಯಲ್ಲಿ ಮಣಿ ಸಾಕಿದ್ದ ಫೈಟರ್ ಕುರಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಸಾಕುಪ್ರಾಣಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಣಿ ಹಾಗೂ ಅವರ ಸ್ನೇಹಿತರು ಆ ಕುರಿಯನ್ನು ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದರು.
ಕುರಿ ಮೃತಪಟ್ಟ ನಂತರ ಅದಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ನೆರವೇರಿಸಲಾಯಿತು. ಬಳಿಕ ಅದರ ನೆನಪಿಗಾಗಿ ವಿಶೇಷವಾಗಿ ತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 60 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆ ಮಾಡಲಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಪೆನ್ನುಗಳು ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಮಣಿ ಹಾಗೂ ಅವರ ಸ್ನೇಹಿತರು ಮಕ್ಕಳಿಗೆ ಆಹಾರ ನೀಡುವ ಮೂಲಕ ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡುವ ಮೂಲಕ ಪ್ರೀತಿಯ ಕುರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ...

Inner Wheel Shivamogga ಮಹಿಳಾ ದಿನಾಚರಣೆ: ಶಿವಮೊಗ್ಗದ ಸಾಧಕಿಯರಿಗೆ ಸನ್ಮಾನ

Inner Wheel Shivamogga ಇನ್ನರ್ ವ್ಹೀಲ್ ಶಿವಮೊಗ್ಗ ನಾರ್ಥ್ ವತಿಯಿಂದ ಅಂತಾರಾಷ್ಟ್ರೀಯ...