D.K. Shivakumar ಹಿಮೋಫಿಲಿಯಾ ಅಪರೂಪದ ಕಾಯಿಲೆ. ಹಿಮೋಫಿಲಿಯಾ ರೋಗಿಗಳಿಗೆ ತಿಂಗಳಿಗೆ ಒಂದು ಇಂಜೆಕ್ಷನ್ ಕೊಡಬೇಕು, ವರ್ಷಕ್ಕೆ ಒಬ್ಬ ರೋಗಿಗೆ 5 ಲಕ್ಷ ರೂ. ಖರ್ಚಾಗುತ್ತದೆ. ಜನರಿಗೆ ಅನುಕೂಲವಾಗಲಿ ಎಂದು ಹಿಮೋಫಿಲಿಯಾ ರೋಗ ನಿರೋಧಕ ಚಿಕಿತ್ಸೆ ನೀಡಲು ನಮ್ಮ ಸರ್ಕಾರ ಮುಂದೆ ಬಂದಿದೆ. ಇಡೀ ದೇಶದಲ್ಲಿ ಯಾವ ಸರ್ಕಾರವೂ ಮಾಡದ ಕೆಲಸವನ್ನೂ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಿಮೋಫೀಲಿಯ ರೋಗಿಗಳಿಗೆ ವಿಶೇಷವಾಗಿ ಇರುವ ಅಂಬ್ಯುಲೆನ್ಸ್ ವಾಹನಗಳನ್ನ ಲೋಕಾರ್ಪಣಗೊಳಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಹಿಮೋಫಿಲಿಯಾದಿಂದ ಬಳಲುತ್ತಿರುವ ಮಕ್ಕಳು ಹಾಗೂ ದೊಡ್ಡವರು ಯಾರೂ ಕೂಡ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ಕಾಯಿಲೆ ಬಂದ ಕೂಡಲೇ ನಮ್ಮ ಕೈಯಿಂದ ಏನೂ ಮಾಡಲು ಆಗುವುದಿಲ್ಲ ಎಂಬ ಭಾವನೆ ಬರಬಾರದು. ಎಷ್ಟೇ ಖರ್ಚಾದರೂ ಮಕ್ಕಳ ಜೊತೆಗೆ ಹಾಗೂ ಪೋಷಕರ ಜೊತೆಗೆ ಸರ್ಕಾರ ಇದೆ. ನಿಮ್ಮ ಬದುಕಿಗೆ ಹೊಸ ಶಕ್ತಿ ತುಂಬುವುದೇ ಸರ್ಕಾರದ ಉದ್ದೇಶವಾಗಿದೆ.
D.K. Shivakumar ನಮ್ಮ ಆರೋಗ್ಯ ಇಲಾಖೆ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
